ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಪಾವಗಡ ಬಳಿ ವಾಹನ ಉರುಳಿಬಿದ್ದು 8 ಜನರ ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ
ಬಸ್ಸಲ್ಲಿದ್ದ ಪ್ರಯಾಣಿಕರು ನಿಧಾನವಾಗಿ ಓಡಿಸು ಅಂತ ಕೂಗುತ್ತಿದ್ದರೂ ಚಾಲಕ ವೇಗವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ. ಸರ್ಕಾರೀ ಬಸ್ ಗಳೊಂದಿಗೆ ಸ್ಪರ್ಧೆಗೆ ಬಿದ್ದಂತೆ ಖಾಸಗಿ ಬಸ್ ಗಳ ಚಾಲಕರು ಓಡಿಸುತ್ತಾರೆ.
ಬಸ್ ಚಾಲಕನೊಬ್ಬ ವಾಹನ ಓಡಿಸುವಾಗ ಎಚ್ಚರ ತಪ್ಪಿದರೆ ಅನಾಹುತ ತಪ್ಪದು ಅನ್ನೋದಿಕ್ಕೆ ಶನಿವಾರ ತುಮಕೂರು ಜಿಲ್ಲೆಯ ಪಾವಗಡ ಬಳಿ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದು (overturn) ಕನಿಷ್ಟ ಪ್ರಯಾಣಿಕರು ಸಾವನ್ನಪ್ಪಿ 20 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ದುರ್ಘಟನೆಯೇ ಸಾಕ್ಷಿ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ (Tumakuru district hospital) ಚಿಕಿತ್ಸೆ ಪಡೆಯುತ್ತಿರುವ ಈ ವಿದ್ಯಾರ್ಥಿ (student) ಹೇಳುವುದನ್ನು ಕೇಳಿದರೆ ಭೀಕರ ಅಪಘಾತಕ್ಕೆ ಚಾಲಕ ನಿರ್ಲಕ್ಷ್ಯ ಮತ್ತು ಮೈಮೇಲೆ ಪರಿವೆ ಇಲ್ಲದೆ ಬಸ್ ಓಡಿಸಿದ್ದೇ ಕಾರಣ. 9 ನೇ ಕ್ಲಾಸಿನಲ್ಲಿ ಓದುತ್ತಿರುವ ವಿದ್ಯಾರ್ಥಿಯ ಎಡಗೈ ಮತ್ತು ಬಲಗಾಲು ಮುರಿದಿವೆ. ಇದೇ ಬಸ್ಸಲ್ಲಿ ಪ್ರಯಾಣಿಸತ್ತಿದ್ದ ಮತ್ತು ಪಿಯು ಓದುತ್ತಿರುವ ಇವನ ಅಣ್ಣನೂ ತೀವ್ರವಾಗಿ ಗಾಯಗೊಂಡಿದ್ದಾನೆ.
ಗಾಯಗೊಂಡವರನ್ನು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಲಾಗಿದೆ. ಇವನು ಬಸ್ಸಿನ ಟಾಪ್ ಮೇಲೆ ಕೂತು ಪ್ರಯಾಣಿಸುತ್ತಿದ್ದ ಮತ್ತು ಇವನೊಂದಿಗೆ ಕನಿಷ್ಟ 20 ಪ್ರಯಾಣಿಕರಿದ್ದರು. ಖಾಸಗಿ ಬಸ್ಗಳನ್ನು ಭರ್ತಿಯಾಗಿ ತುಂಬಿಸಿದ ಬಳಿಕ ಕಂಡಕ್ಟರ್ ಮತ್ತು ಡ್ರೈವರ್ ಉಳಿದವರನ್ನು ಟಾಪ್ ಮೇಲೆ ಕಳಿಸುತ್ತಾರೆ. ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯವರು ಇದನ್ನು ದಿನಾಲೂ ನೋಡುತ್ತಾರೆ. ಕ್ರಮ ತೆಗೆದುಕೊಳ್ಳದಂತೆ ಅವರ ಕೈಗಳು ಕಟ್ಟಿಹಾಕಲ್ಪಟ್ಟಿರುತ್ತವೆ!
ಈ ಹುಡುಗ ಹೇಳುವುದನ್ನು ಗಮನವಿಟ್ಟು ಕೇಳಿ. ಬಸ್ಸಲ್ಲಿದ್ದ ಪ್ರಯಾಣಿಕರು ನಿಧಾನವಾಗಿ ಓಡಿಸು ಅಂತ ಕೂಗುತ್ತಿದ್ದರೂ ಚಾಲಕ ವೇಗವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ. ಸರ್ಕಾರೀ ಬಸ್ ಗಳೊಂದಿಗೆ ಸ್ಪರ್ಧೆಗೆ ಬಿದ್ದಂತೆ ಖಾಸಗಿ ಬಸ್ ಗಳ ಚಾಲಕರು ಓಡಿಸುತ್ತಾರೆ. ಮುಂದಿನ ಸ್ಟಾಪ್ ಗೆ ರಾಜ್ಯ ಸಾರಿಗೆ ಬಸ್ ಗಿಂತ ಮೊದಲು ಹೋಗಿ ಪ್ರಯಾಣಿಕರನ್ನು ತುಂಬಿಸಿಕೊಳ್ಳುವ ಉದ್ದೇಶದಿಂದ ಚಾಲಕರು ಸುರಕ್ಷತೆಯ ಅಂಶವನ್ನು ಗಾಳಿಗೆ ತೂರಿ ಬಸ್ ಓಡಿಸುತ್ತಾರೆ. ಪರಿಣಾಮ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ಯಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ