- Kannada News Latest news Girls wrestling with boys in hubballi, See how the wrestlers fought on the field
ಗಂಡು ಮಕ್ಕಳ ಜೊತೆ ಕುಸ್ತಿ ಹಿಡಿದು ಸೈ ಎನಿಸಿಕೊಂಡ ಹೆಣ್ಮಕ್ಳು: ಮೈದಾನದಲ್ಲಿ ಕುಸ್ತಿ ಕಲಿಗಳ ಕಾಳಗ ಹೇಗಿತ್ತು ನೋಡಿ
ಆಧುನಿಕ ಕಾಲದಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನ ಉಳಿಸಲು ಇಲ್ಲೊಂದು ಕಡೆ ಕುಸ್ತಿ ಆಯೋಜನೆ ಮಾಡಲಾಗಿತ್ತು. ಅದರಲ್ಲೂ ಇದೇ ಮೊದಲ ಬಾರಿಗೆ ಅಲ್ಲಿ ಹೆಣ್ಣು ಮಕ್ಕಳ ಕುಸ್ತಿ ಆಯೋಜನೆ ಮಾಡಲಾಗಿದ್ದು, ವಿಶೇಷವಾಗಿತ್ತು. ಎಲ್ಲಿ ಅಂತೀರಾ? ಇಲ್ಲಿದೆ ನೋಡಿ.
Updated on: Mar 29, 2023 | 8:31 AM

ಒಂದು ಕಡೆ ಕದನ ಕಲಿಗಳ ಹೋರಾಟಕ್ಕೆ ಸಿದ್ದವಾಗಿರುವ ಕುಸ್ತಿ ಅಖಾಡ, ಆಖಾಡದಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಹೆಣ್ಣು ಮಕ್ಕಳ ಕಾಳಗ. ಇನ್ನೊಂದು ಕಡೆ ಕುಸ್ತಿ ನೋಡಲು ಸೇರಿದ ಜನ, ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿಯ ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ನಿಮಿತ್ಯ ಪ್ರತಿವರ್ಷದಂತೆ ಈ ವರ್ಷವೂ ಕುಸ್ತಿ ಹಮ್ಮಿಕೊಳ್ಳಲಾಗಿತ್ತು. ಇ ಬಾರಿಯ ಇನ್ನೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ರಾಜ್ಯ ಸೇರಿ ಹೊರ ರಾಜ್ಯದ ಹೆಣ್ಣು ಮಕ್ಕಳಿಗಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಗಂಡು ಮಕ್ಕಳಂತೆ ಆಖಾಡಕ್ಕಿಳಿದ ಹೆಣ್ಣು ಮಕ್ಕಳ ಕುಸ್ತಿ ನೋಡುಗರನ್ನ ಸೆಳೆಯಿತು. ಆಖಾಡದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಜೊತೆನೂ ಕುಸ್ತಿ ಆಡಿ ಅವರನ್ನು ಸೋಲಿಸಿ ಸೈ ಎಣಿಸಿಕೊಂಡರು. ಮಹಾರಾಷ್ಟ್ರದಿಂದ ಕುಸ್ತಿ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಪುರಾತನ ಕಾಲದಿಂದಲೂ ಇಲ್ಲಿ ಕುಸ್ತಿ ಆಯೋಜನೆ ಮಾಡಲಾಗುತ್ತ ಬಂದಿದೆ. ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ಹಿನ್ನಲೆ ಕಳೆದ ನಾಲ್ಕ ದಿನಗಳಿಂದ ಕುಸ್ತಿ ಪಂದ್ಯಾಟಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಜಿದ್ದಿಗೆ ಬಿದ್ದು ಹುಡಗರನ್ನ ಕಣದಲ್ಲಿ ಸೋಲಿಸುವ ದೃಶ್ಯಕ್ಕೆ ನೆರೆದ ಜನ ಕೇಕೆ ಹಾಕುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು.

ಕುಸ್ತಿ ಆಖಾಡದಲ್ಲಿ ಹುಡುಗರ ಎದುರು ತೊಡೆತಟ್ಟಿ ಮಣ್ಣು ಮುಕ್ಕಿಸಿದ್ರು. ಕೆಲವೊಂದಿಷ್ಟು ಜನ ಕಣದಲ್ಲಿಯೇ ಬಹುಮಾನ ಘೋಷಣೆ ಮಾಡಿದರು. ಮಹಿಳೆಯರಲ್ಲದೆ ಯುವಕರು ಕೂಡ ಕುಸ್ತಿ ಪಂದ್ಯಾಟದಲ್ಲಿ ಭಾಗಿಯಾಗಿ ಕುಸ್ತಿ ಆಡಿದರು.

ಇನ್ನು ಕುಸ್ತಿ ಪಂದ್ಯಾಟದಲ್ಲಿ ಭಾಗಿಯಾದವರಿಗೆ ಬಹುಮಾನವೂ ಇತ್ತು. ಮೊದಲ ಬಾಹುಮಾನ 21 ಸಾವಿರ ಒಂದು ಬೆಳ್ಳಿ ಗದೆ, ಎರಡನೇ ಬಹುಮಾನ 15 ಸಾವಿರ ಬೆಳ್ಳಿ ಗದೆ, ಮೂರನೇ ಬಹುಮಾನ 10 ಸಾವಿರ, ನಾಲ್ಕನೇ ಬಹುಮಾನ ಐದು ಸಾವಿರದ ಗದೆಯನ್ನ ಕೊಡಲಾಗುತ್ತೆ.

ಇನ್ನು ಉಣಕಲ್ ಕುಸ್ತಿ ಪೈಲ್ವಾನಗಳ ತವರು, ಇನ್ನು ತಮ್ಮೂರಿನಲ್ಲಿ ನಡೆದ ಅದ್ಬುತ ಕುಸ್ತಿಯ ಕ್ಷಣಗಳನ್ನ ನೋಡಿ ನೆರೆದಿದ್ದ ಜನರು ಸಂತೋಷಪಟ್ಟರು.

ಒಟ್ಟಿನಲ್ಲಿ ಉಣಕಲ್ನಲ್ಲಿ ನಡೆದ ಕುಸ್ತಿ ಕಾಳಗದಲ್ಲಿ ಹುಡಗಿಯರು ಹುಡಗರನ್ನೇ ಸೋಲಿಸಿ ಸೈ ಎಣಿಸಿಕೊಂಡರು. ಆಖಾಡದಲ್ಲಿ ನಾವೂ ಯಾರಿಗೂ ಕಡಿಮೆ ಇಲ್ಲ ಎನ್ನುವ ತರ ಹುಡಗಿಯರು ತೊಡೆ ತಟ್ಟಿದ್ರು. ಇನ್ನು ಸಿದ್ದಪ್ಪಜ್ಜನ ಜಾತ್ರೆ ಹಿನ್ನಲೆ ಅನೇಕ ಸಾಮಾಜಿಕ ಕಾರ್ಯಗಳ ಜೊತೆ, ಗ್ರಾಮೀಣ ಕ್ರೀಡೆ ಉಳಿಸುವ ಕೆಲಸವೂ ಆಗುತ್ತಿದೆ.




