ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಗೋಏರ್ ಪೈಲಟ್ ವಜಾ
ಪ್ರಧಾನಿ ಮೂರ್ಖ. ನೀವು ನನ್ನನ್ನೂ ಅದೇ ರೀತಿ ಕರೆಯಬಹುದು. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ ನಾನು ಪ್ರಧಾನಿ ಅಲ್ಲ. ಆದರೆ ಪ್ರಧಾನಿ ಮೂರ್ಖ ಎಂದು ಗುರುವಾರ ಟ್ವೀಟ್ ಮಾಡಿದ್ದ ಪೈಲಟ್, ಆನಂತರ ಟ್ವೀಟ್ ಡಿಲೀಟ್ ಮಾಡಿ ಟ್ವಿಟರ್ ಖಾತೆಯನ್ನು ಲಾಕ್ ಮಾಡಿದ್ದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಗೋಏರ್ ವಿಮಾನಯಾನ ಸಂಸ್ಥೆಯ ಹಿರಿಯ ಪೈಲಟ್ನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಪ್ರಧಾನಿ ಮೂರ್ಖ. ನೀವು ನನ್ನನ್ನೂ ಅದೇ ರೀತಿ ಕರೆಯಬಹುದು. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ ನಾನು ಪ್ರಧಾನಿ ಅಲ್ಲ. ಆದರೆ ಪ್ರಧಾನಿ ಮೂರ್ಖ ಎಂದು ಗುರುವಾರ ಟ್ವೀಟ್ ಮಾಡಿದ್ದ ಪೈಲಟ್, ಆನಂತರ ಟ್ವೀಟ್ ಡಿಲೀಟ್ ಮಾಡಿ ಟ್ವಿಟರ್ ಖಾತೆಯನ್ನು ಲಾಕ್ ಮಾಡಿದ್ದರು.
ಇದಾದನಂತರ ‘ಪ್ರಧಾನಿ ಬಗ್ಗೆ ನಾನು ಮಾಡಿದ ಟ್ವೀಟ್ ಗೆ ಮತ್ತು ಇನ್ನೊಬ್ಬರ ಭಾವನೆಗೆ ನೋವುಂಟು ಮಾಡಿರುವ ಆಕ್ಷೇಪಾರ್ಹ ಟ್ವೀಟ್ ಗಳಿಗೂ ನಾನು ಕ್ಷಮೆ ಕೋರುತ್ತೇನೆ. ನನ್ನ ಟ್ವೀಟ್ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗೋಏರ್ ಸಂಬಂಧ ಹೊಂದಿಲ್ಲ. ಆ ಟ್ವೀಟ್ ಗಳೆಲ್ಲವೂ ನನ್ನ ವೈಯಕ್ತಿಕ ನಿಲುವುಗಳಾಗಿವೆ ಎಂದು ಹೇಳಿದ್ದರು.
ಪೈಲಟ್ನ್ನು ಕೆಲಸದಿಂದ ವಜಾ ಮಾಡಿರುವ ವಿಷಯವನ್ನು ದೃಢಪಡಿಸಿದ ಗೋಏರ್ ವಕ್ತಾರ, ಗೋಏರ್ ಸಂಸ್ಥೆ ಶೂನ್ಯ ಸಹನೆ ನೀತಿ ಪಾಲಿಸಿದ್ದು, ಗೋಏರ್ ಸಂಸ್ಥೆಯ ಎಲ್ಲ ಉದ್ಯೋಗಿಗಳು ಸಂಸ್ಥೆಯ ನಿಯಮ, ನಿಬಂಧನೆ ಮತ್ತು ನೀತಿಯನ್ನು ಪಾಲಿಸಬೇಕು. ಇದು ಸಾಮಾಜಿಕ ಮಾಧ್ಯಮಗಳಲ್ಲಿನ ಅವರ ನಿಲುವುಗಳಿಗೂ ಬಾಧಕವಾಗುತ್ತದೆ. ನಮ್ಮ ಸಂಸ್ಥೆಯ ಉದ್ಯೋಗಿಯವರ ವೈಯಕ್ತಿಕ ನಿಲುವುಗಳಿಗೆ ಸಂಸ್ಥೆ ಜವಾಬ್ದಾರರಾಗಿರುವುದಿಲ್ಲ. ಗೋಏರ್ ಸಂಸ್ಥೆ ಕ್ಯಾಪ್ಟನ್ನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಿದೆ ಎಂದು ಹೇಳಿದ್ದಾರೆ.
ಅಮೆರಿಕಾದ ಪ್ರತಿಭಟನೆಯಲ್ಲಿ ಭಾರತದ ಧ್ವಜ ಏಕೆ? ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್
Published On - 2:56 pm, Sun, 10 January 21