ಬೆಂಗಳೂರು: ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹ 44,225 ಹಾಗೂ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹ 48,299 ಆಗಿದೆ. ಹಾಗೆಯೇ ಬೆಳ್ಳಿ ದರದಲ್ಲಿಯೂ ನಿನ್ನೆಗಿಂತ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. 1ಕೆಜಿ ಬೆಳ್ಳಿದರ ₹69,509 ಇದೆ. ನಿನ್ನೆಗಿಂತ ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಗಮನಿಸಿದಂತೆ, ಬೆಂಗಳೂರಿನ ಜನರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು. ಹಾಗೆಯೇ ಚಿನ್ನ ಜನಪ್ರಿಯ ಸರಕು ಕೂಡಾ. ಷೇರು ಮಾರುಕಟ್ಟೆ ಕುಸಿದಂತೆ ಜನರು ಹಣವನ್ನು ಹೊರತೆಗೆದು ಬೇರೆಡೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ಹೆಚ್ಚು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.
ಹಣವಿದ್ದಾಗ ಚಿನ್ನವನ್ನು ಖರೀಸಿದಿಕೊಂಡಿದ್ದರೆ, ಆಪತ್ಕಾಲದಲ್ಲಿ ನೆರವಿಗೆ ಬರುತ್ತದೆ ಎಂಬುದು ಜನರ ನಿಲುವು. ಹಾಗಾಗಿಯೇ ಹೆಚ್ಚು ಹಣವನ್ನು ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಕೂಡಿಟ್ಟ ಹಣದಲ್ಲಿ ದರ ಕಡಿಮೆ ಇದ್ದಾಗ ಹಣ ಖರೀದಿಸುವುದು ಮತ್ತು ಹಣದ ಅವಶ್ಯಕತೆ ಇದ್ದಾಗ ಚಿನ್ನ ಮಾರಾಟ ಮಾಡುವತ್ತ ಜನರು ಆಪತ್ಕಾಲದ ಬಂಧುವಾಗಿ ಚಿನ್ನವನ್ನು ಖರೀದಿಸುತ್ತಾರೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್:
ಗ್ರಾಂ 22 ಕ್ಯಾರೆಟ್ ಚಿನ್ನ (ಇಂದು) 22 ಕ್ಯಾರೆಟ್ ಚಿನ್ನದ (ನಿನ್ನೆ)
1 ಗ್ರಾಂ ₹4,425 ₹4,425
8ಗ್ರಾಂ ₹35,400 ₹35,400
10 ಗ್ರಾಂ ₹44,250 ₹44,250
100ಗ್ರಾಂ ₹4,42,500 ₹4,42,500
24 ಕ್ಯಾರೆಟ್ ಚಿನ್ನದ ಬೆಲೆ:
ಗ್ರಾಂ ಇಂದು ನಿನ್ನೆ
1ಗ್ರಾಂ ₹4,829 ₹4,829
8ಗ್ರಾಂ ₹38,632 ₹38,632
10ಗ್ರಾಂ ₹48,290 ₹48,290
100ಗ್ರಾಂ ₹4,82,900 ₹4,82,900
ಬೆಳ್ಳಿ ದರ:
ಬೆಳ್ಳಿ ದರವೂ ಕೂಡಾ ನಿನ್ನೆಗೆ ಹೋಲಿಸಿದರೆ ಇಂದು ಸ್ಥಿರ ಬೆಲೆಯನ್ನು ಕಾಪಾಡಿಕೊಂಡಿದೆ. ಶನಿವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದರೂ ಕೂಡಾ ಬೆಳ್ಳಿದರ ಏರಿಕೆಯಾಗಿತ್ತು. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾನ್ಯವಾಗಿ ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಚಿನ್ನದ ಬೆಲೆ ಏರಿಕೆಯತ್ತ ಜಿಗಿದಾಗ ಬೆಳ್ಳಿಯನ್ನು ಕೊಂಡುಕೊಳ್ಳುವವರ ಸಂಖ್ಯೆ ಏರುತ್ತದೆ.
ಗ್ರಾಂ ಬೆಳ್ಳಿ ದರ (ಇಂದು) ನಿನ್ನೆ
1ಗ್ರಾಂ ₹69.50 ₹69.50
8ಗ್ರಾಂ ₹556 ₹556
10ಗ್ರಾಂ ₹695 ₹695
100 ಗ್ರಾಂ ₹6,950 ₹6,950
1 ಕೆ.ಜಿ ₹68,500 ₹68,500
Published On - 9:39 am, Mon, 15 February 21