ಬೆಂಗಳೂರು: ಇಂದು ಚಿನ್ನದ ಬೆಲೆ 22 ಕ್ಯಾರೆಟ್ 10ಗ್ರಾಂಗೆ ₹43,750 ಹಾಗೂ 24 ಕ್ಯಾರೆಟ್ 10ಗ್ರಾಂಗೆ ₹47,730 ಇದೆ. ಚಿನ್ನದ ದರ ಕೆಲ ಐದು ದಿನಗಳಿಂದ ಇಳಿಕೆಯತ್ತ ಸಾಗುತ್ತಿದೆ. ಹೂಡಿಕೆಯ ದೃಷ್ಟಿಯಿಂದ ಚಿನ್ನ ದರ ಇಳಿಕೆಯತ್ತ ಸಾಗುತ್ತಿರುವುದು ಕಹಿ ಸುದ್ದಿಯಾದರೂ ಸಹ, ಚಿನ್ನ ಖರೀದಿದಾರರಿಗೆ ಹೆಚ್ಚು ಖುಷಿಯ ವಿಚಾರ ಎಂದೇ ಹೇಳಬಹುದು. ಇನ್ನು, ಬೆಳ್ಳಿ ದರ 1 ಕೆಜಿಗೆ ₹71,200 ಇದೆ. ನಿನ್ನೆಗೆ ಹೋಲಿಸಿದರೆ ಬೆಳ್ಳಿ ಮೌಲ್ಯ ಇಂದೂ ಕೂಡಾ ಸ್ಥಿರತೆಯನ್ನು ಕಾಪಾಡಿಕೊಂಡಿದೆ.
ಹಿಂದಿನ ವರ್ಷದಲ್ಲಿ 24 ಕ್ಯಾರೆಟ್ ಚಿನ್ನದ ದರ ₹57 ಸಾವಿರದ ಸನಿಹಕ್ಕೆ ತಲುಪಿತ್ತು. ಅದಾದ ನಂತರದಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿತು. ಚಿನ್ನದ ದರ ₹47 ಸಾವಿರಕ್ಕೆ ಬಂದು ತಲುಪಿತು. ಮಧ್ಯಂತರದಲ್ಲಿ ದರ ಹಾವು ಏಣಿ ಆಟ ಪ್ರಾರಂಭಿಸಿದ್ದರೂ ಸಹ ಇದೀಗ ಬೆಂಗಳೂರಿನಲ್ಲಿ ಚಿನ್ನದ ದರ ₹43,730 ಆಗಿದೆ. ಚಿನ್ನ ಖರೀದಿಗೆಂದು ಹಣ ಕೂಡಿಟ್ಟ ಜನರಿಗೆ ಇದು ಭಾರೀ ಪ್ರಮಾಣದ ಖುಷಿ ತಂದಿದೆ.
ಬೆಂಗಳೂರಿನಲ್ಲಿ ಅತಿ ಗರಿಷ್ಠಕ್ಕೆ ತಲುಪಿದ ಚಿನ್ನದ ಮೌಲ್ಯವೆಂದರೆ, 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹ 52 ಸಾವಿರ ಹಾಗೂ 24 ಕ್ಯಾರೆಟ್ ಚಿನ್ನದ ದರ ₹57,600 ತಲುಪಿದ್ದು. ಬೇರೆಲ್ಲಾ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ,ಲಕ್ನೊ, ಮಧುರೈ, ಜೈಪುರ, ಅಹಮದಾಬಾದ್ ನಗರಗಳಲ್ಲಿ ಚಿನ್ನದ ದರ ಏರಿಕೆ ಪ್ರಮಾಣ ಹೆಚ್ಚಿದ್ದು, ದರ ₹50 ಸಾವಿರಕ್ಕೂ ದಾಟಿದೆ.
ಬೆಂಗಳೂರಿನಲ್ಲಿ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ದರ
ಗ್ರಾಂ 22 ಕ್ಯಾರೆಟ್ ಚಿನ್ನ (ಇಂದು) 22 ಕ್ಯಾರೆಟ್ ಚಿನ್ನದ (ನಿನ್ನೆ)
1 ಗ್ರಾಂ ₹4,375 ₹4,425
8ಗ್ರಾಂ ₹35,000 ₹35,400
10 ಗ್ರಾಂ ₹43,750 ₹44,250
100ಗ್ರಾಂ ₹4,37,500 ₹4,42,500
ಬೆಂಗಳೂರಿನಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ದರ:
ಗ್ರಾಂ 24 ಕ್ಯಾರೆಟ್ ಚಿನ್ನದ ದರ(ಇಂದು) 24 ಕ್ಯಾರೆಟ್ ಚಿನ್ನದ (ನಿನ್ನೆ)
1ಗ್ರಾಂ ₹4,773 ₹4,829
8ಗ್ರಾಂ ₹38,184 ₹38,632
10ಗ್ರಾಂ ₹47,730 ₹48,290
100ಗ್ರಾಂ ₹4,77,300 ₹4,82,900
ಬೆಳ್ಳಿ ದರ:
ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನೆಯೂ ಕೂಡಾ ಬೆಳ್ಳಿ ದರ 1 ಕೆಜಿಗೆ ₹71,200 ಇತ್ತು. ಇಂದೂ ಕೂಡಾ ದರ ಸ್ಥಿರವಾಗಿದ್ದು ನಿನ್ನೆಯ ಮೌಲ್ಯವನ್ನೇ ಹೊಂದಿದೆ. ಮನೆಯ ವಿಶೆಷ ಪೂಜೆಗೆ ಬೆಳ್ಳಿಯನ್ನು ಖರೀದಿಸುವವರಿಗೆ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಗ್ರಾಂ ಬೆಳ್ಳಿ ದರ (ಇಂದು) ನಿನ್ನೆ
1ಗ್ರಾಂ ₹71.20 ₹71.20
8ಗ್ರಾಂ ₹556.60 ₹556.60
10ಗ್ರಾಂ ₹712 ₹712
100 ಗ್ರಾಂ ₹7,120 ₹7,120
1 ಕೆ.ಜಿ ₹71,200 ₹71,200
ಇದನ್ನೂ ಓದಿ : Gold Rate: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಬೆಲೆಯೂ ಏರಿದೆ.. ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ?
Published On - 8:48 am, Thu, 18 February 21