ಬೆಂಗಳೂರು: ಕೊರೊನಾ ಸೋಂಕಿನ ಆರ್ಭಟದ ನಡುವೆಯು ಜನರಲ್ಲಿ ಚಿನ್ನದ ಮೇಲಿನ ಮೋಹ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಳೆಲ್ಲಾ ಸುಳ್ಳಾಗಿದ್ದು, ಚಿನ್ನದ ಬೆಲೆ ಕಳೆದ ಒಂದು ವಾರದಲ್ಲಿ ಗಮನಾರ್ಹ ಏರಿಕೆ ಕಂಡಿದೆ.
ಒಂದೇ ದಿನದಲ್ಲಿ 22 ಕ್ಯಾರೆಟ್ನ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 100 ಏರಿಕೆ ಕಂಡಿದ್ದು, ₹ 46,700 ತಲುಪಿದೆ. 24 ಕ್ಯಾರೆಟ್ನ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 110 ಏರಿಕೆ ಕಾಣುವುದರೊಂದಿಗೆ ₹ 50,950 ರೂ ಆಗಿದೆ.
ಕಳೆದ 10 ದಿನಗಳಿಗೆ ಹೋಲಿಸಿ ನೋಡಿದರೆ, ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡಿದ್ದು, ಡಿ. 23ರಂದು ₹ 46,600 ಇದ್ದ 22 ಕ್ಯಾರೆಟ್ ಚಿನ್ನ, ಜ. 1ಕ್ಕೆ ₹ 46,800 ತಲುಪಿದೆ. ಈ ಮೂಲಕ 10 ದಿನಗಳಲ್ಲಿ ₹ 200 ಏರಿಕೆ ಕಂಡಿದೆ. ಹಾಗೆಯೇ ಡಿ. 23ರಂದು ₹ 50,830 ಇದ್ದ 24 ಕ್ಯಾರೆಟ್ ಚಿನ್ನ ಜ.1ಕ್ಕೆ ₹ 51,061 ತಲುಪಿದೆ. ಇದರೊಂದಿಗೆ 10 ದಿನಗಳಲ್ಲಿ ₹ 230 ರೂಪಾಯಿ ಏರಿಕೆಯಾಗಿದೆ.
(ವಿಶೇಷ ಸೂಚನೆ: ಚಿನ್ನದ ಇಂದಿನ ದರದ ಮಾಹಿತಿ GST ಮೌಲ್ಯವನ್ನು ಒಳಗೊಂಡಿಲ್ಲ)
Published On - 6:00 pm, Fri, 1 January 21