ಬೆಂಗಳೂರು:ನಿನ್ನೆಗಿಂತ ಇಂದು ಚಿನ್ನದ ದರ ಮತ್ತೆ ಕೊಂಚ ಏರಿಕೆ ಕಂಡಿದೆ. ಎರಡು ದಿನಗಳ ಹಿಂದೆ ಇಳಿಕೆಯತ್ತ ಸಾಗಿದ್ದ ಚಿನ್ನ ಇದೀಗ ಸ್ವಲ್ಪ ಏರಿಕೆಯತ್ತ ಮುಖ ಮಾಡಿದೆ. ಇದೀಗ 22 ಕ್ಯಾರೆಟ್ ಚಿನ್ನ 10ಗ್ರಾಂಗೆ ₹43,850 ಆಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ದರ 10ಗ್ರಾಂಗೆ ₹43,260 ಇತ್ತು. ಇಂದಿನ ದಿನದ ಪ್ರಕಾರ ₹590ರಷ್ಟು ಏರಿಕೆ ಕಂಡಿದೆ. ಹಾಗೆಯೇ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಿನ್ನೆಯ ಮೌಲ್ಯವನ್ನೇ ಇಂದೂ ಕೂಡಾ ಬೆಳ್ಳಿ ಕಾಪಾಡಿಕೊಂಡಿದೆ.
ನೀವು ಚಿನ್ನ ಕೊಳ್ಳಲೆಂದು ಹಣವನ್ನು ವೆಚ್ಚ ಮಾಡುತ್ತೀರಿ. ಹಾಗಾಗಿ, ಮೊದಲು ಚಿನ್ನದ ಕುರಿತಾಗಿ ಪರಿಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿ ಇರಬೇಕು. ಏಕೆಂದರೆ ಚಿನ್ನ ದುಬಾರಿ ವಸ್ತು. ಹೆಚ್ಚಿನ ಹಣ ವ್ಯಯಿಸುತ್ತೀರಿ. ಹಾಗಿದ್ದಲ್ಲಿ ಚಿನ್ನ ಖರೀದಿಸುವ ಮೊದಲು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.
ಶುದ್ಧತೆ ಪರಿಶೀಲಿಸಿ
ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣಗಳು. ಆದ್ದರಿಂದ ಮೊದಲು ತಿಳಿದು ಕೊಳ್ಳಬೇಕಾದುದು ಚಿನ್ನದ ದರ ಎಷ್ಟಿದೆ ಎಂಬುದರ ಕುರಿತು. ಸಾಮಾನ್ಯವಾಗಿ ಚಿನ್ನದ ದರ ಪ್ರತಿದಿನ ಬದಲಾಗುತ್ತಿರುತ್ತದೆ. ಹಾಗೆಯೇ ಅಷ್ಟೊಂದು ಹಣ ಕೊಟ್ಟು ಖರೀದಿಸುವ ವಸ್ತುವಿನ ಶುದ್ಧತೆಯನ್ನು ಮೊದಲು ಗಮನಿಸಿ. ಜೊತೆಗೆ ಚಿನ್ನದಂತಹ ಬೆಲೆ ಬಾಳು ವಸ್ತುವನ್ನು ಖರೀದಿಸಲು ಹೊರಟಿರುವಾಗ ಯಾವ ಅಂಗಡಿಯಲ್ಲಿ ಚಿನ್ನ ಖರೀದಿಸುತ್ತೀರಿ ಎಂಬುದನ್ನು ಗಮನದಲ್ಲಿಡಿ.
ಬಿಐಎಸ್ ಹಾಲ್ಮಾರ್ಕ್
ಖರೀದಿಸುತ್ತಿರುವ ಆಭರಣಗಳ ಮೇಲೆ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಮೊದಲ ಬಾರಿಗೆ ಚಿನ್ನಾಭರಣವನ್ನು ಖರೀದಿಸುತ್ತಿದ್ದರೆ, ಚಿನ್ನವು ಶುದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಬಿಐಎಸ್ ಹಾಲ್ಮಾರ್ಕ್ ಅನ್ನು ನೀಡಿದೆ. ಇದರ ಬಗ್ಗೆ ಗಮನವಿರಲಿ.
ಚಿನ್ನದ ಆಭರಣಗಳಿಗೆ ಶುಲ್ಕ ವಿಧಿಸುವುದು
ಇದನ್ನು ಪ್ರತಿ ಅಂಗಡಿಗಳಲ್ಲಿ ಆಭರಣ ವ್ಯಾಪಾರಿ ವಿಧಿಸುತ್ತಾರೆ. ಈ ಕುರಿತಂತೆ ಆಭರಣ ವ್ಯಾಪಾರಿಗಳನ್ನು ಕೇಳುವುದು ಉತ್ತಮ. ಹಾಗೂ ಬಿಲ್ನಲ್ಲೂ ಕೂಡಾ ನಮೂದಿಸಲಾಗುತ್ತದೆ. ಹಾಗಾಗಿ ಬಿಲ್ನಲ್ಲಿ ಪರಿಶೀಲಿಸಬಹುದು. ಎಲ್ಲಾ ಆಭರಣಗಳಿಗೆ ತಯಾರಿಕೆ ಶುಲ್ಕ ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಚಿನ್ನ ಖರೀದಿಸಿ, ವ್ಯಾಪಾರಿಗೆ ಹಣ ನೀಡುವ ಮೊದಲು ಆಭರಣ ವ್ಯಾಪಾರಿಗಳಿಂದ ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಿ.
22 ಕ್ಯಾರೆಟ್ ಚಿನ್ನದ ದರ:
ಗ್ರಾಂ 22 ಕ್ಯಾರೆಟ್ ಚಿನ್ನ (ಇಂದು) 22ಕ್ಯಾರೆಟ್ ಚಿನ್ನ (ನಿನ್ನೆ)
1ಗ್ರಾಂ ₹4,385 ₹4,326
8ಗ್ರಾಂ ₹35,080 ₹34,608
10ಗ್ರಾಂ ₹43,850 ₹43,260
100 ಗ್ರಾಂ ₹4,38,500 ₹4,32,600
ಗ್ರಾಂ 24 ಕ್ಯಾರೆಟ್ ಚಿನ್ನ (ಇಂದು) 24ಕ್ಯಾರೆಟ್ ಚಿನ್ನ (ನಿನ್ನೆ)
1 ಗ್ರಾಂ ₹4,784 ₹4,719
8ಗ್ರಾಂ ₹38,272 ₹37,752
10 ಗ್ರಾಂ ₹47,840 ₹ 47,190
100 ಗ್ರಾಂ ₹4,78.400 ₹4,71,900
ಬೆಳ್ಳಿ ದರ:
ನಿನ್ನೆಗೆ ಬೆಳ್ಳಿಯ ದರ ಹೋಲಿಸಿದರೆ ಇಂದೂ ಕೂಡಾ ಅದೇ ಬೆಲೆ ಹೊಂದಿದ್ದು, ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಬೆಳ್ಳಿಯಲ್ಲಿ ಸಾಮಾನ್ಯವಾಗಿ ದರ ವ್ಯತ್ಯಾಸವಾಗುವುದು ಕಡಿಮೆ. ಬೆಲೆಯಲ್ಲಿ ಬದಲಾವಣೆ ಕಂಡು ಬಂದರೂ ಕೂಡಾ ಅಷ್ಟೊಂದು ಏರಿಕೆಯತ್ತ ಅಥವಾ ಇಳಿಕೆಯತ್ತ ಸಾಗುವುದಿಲ್ಲ. ನೂರು ರೂ. ಅಂತರದಲ್ಲಿ ಕೊಂಚವೇ ಏರಿಕೆಯತ್ತ ಸಾಗುತ್ತದೆ.
ಗ್ರಾಂ ಬೆಳ್ಳಿ ದರ (ಇಂದು) ನಿನ್ನೆ
1ಗ್ರಾಂ ₹70 ₹70
8ಗ್ರಾಂ ₹560 ₹560
10ಗ್ರಾಂ ₹700 ₹700
100 ಗ್ರಾಂ ₹7,000 ₹7,000
1 ಕೆ.ಜಿ ₹60,000 ₹60,000
ಇದನ್ನೂ ಓದಿ: Gold Rate: ಗ್ರಾಹಕರಿಗೆ ಸಿಹಿ ಸುದ್ದಿ; ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಸ್ಪಲ್ಪ ಇಳಿಕೆ!
ಇದನ್ನೂ ಓದಿ: Tv9 Digital Live | ಬಂಗಾರದ ಬೆಲೆ ಇನ್ನೂ ಇಳಿಯುತ್ತಾ? ಚಿನ್ನ ಖರೀದಿಗೆ ಇದು ಸಕಾಲವೇ?
Published On - 8:44 am, Wed, 24 February 21