Mathura Road Accident | ಡಿವೈಡರ್​ಗೆ ಗುದ್ದಿದ್ದ ಆಯಿಲ್ ಟ್ಯಾಂಕರ್​ಗೆ ಕಾರು ಡಿಕ್ಕಿ, 7 ಜನರ ದುರ್ಮರಣ

Mathura Road Accident | ಡಿವೈಡರ್​ಗೆ ಗುದ್ದಿದ್ದ ಆಯಿಲ್ ಟ್ಯಾಂಕರ್​ಗೆ ಕಾರು ಡಿಕ್ಕಿ, 7 ಜನರ ದುರ್ಮರಣ
ಉತ್ತರ ಪ್ರದೇಶದ ಮಥುರಾ ಬಳಿ ಸಂಭವಿಸಿದ ಅಪಘಾತ

ಆಯಿಲ್ ಟ್ಯಾಂಕರ್ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಘರ್ಷಣೆಯ ಸಮಯದಲ್ಲಿ, ಟ್ಯಾಂಕರ್ ಮತ್ತು ಡಿವೈಡರ್ ನಡುವೆ ಕಾರು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ಈ ಬಗ್ಗೆ ವಿಷಯ ಮುಟ್ಟಿಸಲಾಗಿದೆ. ಮೃತ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Ayesha Banu

| Edited By: sadhu srinath

Feb 24, 2021 | 11:52 AM


ಮಥುರಾ: ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಮಂಗಳವಾರ ತಡರಾತ್ರಿ ನೌಜೀಲ್ ಪೊಲೀಸ್ ಠಾಣೆ ಬಳಿ ಆಯಿಲ್ ಟ್ಯಾಂಕರ್, ಕಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್ ಅವರ ಪ್ರಕಾರ, “ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಹಾಗೂ ಈ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.”

ಆಯಿಲ್ ಟ್ಯಾಂಕರ್ ಆಗ್ರಾ ಕಡೆಯ ಮಾರ್ಗದಲ್ಲಿ ಸಾಗುತ್ತಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಆಯಿಲ್ ಟ್ಯಾಂಕರ್ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಘರ್ಷಣೆಯ ಸಮಯದಲ್ಲಿ, ಟ್ಯಾಂಕರ್ ಮತ್ತು ಡಿವೈಡರ್ ನಡುವೆ ಕಾರು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ಈ ಬಗ್ಗೆ ವಿಷಯ ಮುಟ್ಟಿಸಲಾಗಿದೆ. ಮೃತ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Road Accident | ತೆಲಂಗಾಣ, ಬಿಹಾರ, ಧಾರವಾಡದಲ್ಲಿ ಪ್ರತ್ಯೇಕ ಅಪಘಾತ, ಏರುತ್ತಲಿದೆ ಸಾವಿನ ಸಂಖ್ಯೆ


Follow us on

Related Stories

Most Read Stories

Click on your DTH Provider to Add TV9 Kannada