Petrol Diesel Price: ಪೆಟ್ರೋಲ್ ದರ 35 ಪೈಸೆ ಹೆಚ್ಚಳ; ಎಷ್ಟಿದೆ ದರ?

Petrol Diesel Price: ಪೆಟ್ರೋಲ್ ದರ 35 ಪೈಸೆ ಹೆಚ್ಚಳ; ಎಷ್ಟಿದೆ ದರ?
ಸಾಂದರ್ಭಿಕ ಚಿತ್ರ

Petrol Diesel Rate: ಇಂದು ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಪೆಟ್ರೋಲ್​ ದರ ₹90.93 ರೂ. ಹಾಗೂ ಡೀಸೆಲ್ ಬೆಲೆ ₹81.32 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ₹93.98 ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ ₹86.21 ಆಗಿದೆ.

shruti hegde

|

Feb 24, 2021 | 10:18 AM

ಬೆಂಗಳೂರು: ದಿನೇ ದಿನೇ ಏರಿಕೆಯತ್ತ ಮುಖ ಮಾಡಿರುವ ಪೆಟ್ರೋಲ್​ ದರ ಬುಧವಾರವೂ ಏರಿಕೆ ಕಂಡಿದೆ. ಪೆಟ್ರೋಲ್​ ಮತ್ತು ಡೀಸೆಲ್​ ದರ 35 ಪೈಸೆ ಹೆಚ್ಚಳವಾಗಿದೆ. ದರ ಹೆಚ್ಚಳದ ನಂತರ ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ₹93.98 ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ ₹86.21ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್‌ಗೆ ₹90.93 ರೂ. ಹಾಗೂ ಡೀಸೆಲ್ ಬೆಲೆ ₹81.32 ರೂ.ಗೆ ಮಾರಾಟವಾಗುತ್ತಿದೆ.

ಇಂಧನ ದರ ಹೆಚ್ಚಳದ ನಂತರ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ₹97.34 ರೂ. ಹಾಗೂ ಡೀಸೆಲ್ ಬೆಲೆ ₹88.44 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವಾರ ಪೆಟ್ರೋಲ್ ಬೆಲೆ 100ರೂ ತಲುಪಿದ ನಂತರ ರಾಜಸ್ಥಾನದ ಶ್ರೀ ಗಂಗನಗರದಲ್ಲಿ ₹101.59 ರೂ.ಗಳಷ್ಟಿದೆ. ಡೀಸೆಲ್ ಪ್ರತಿ ಲೀಟರ್ ಗೆ ₹93.61 ರೂ.ರಷ್ಟಿದೆ. ಮಧ್ಯಪ್ರದೇಶದ ಅನುಪ್ಪೂರಿನಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ ₹101.34 ರೂ. ಹಾಗೂ ಡೀಸೆಲ್ ₹91.81 ರೂ.ಗೆ ಮಾರಾಟವಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಅವುಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಕು ಸಾಗಣೆ ಶುಲ್ಕವನ್ನು ವಿಧಿಸುತ್ತವೆ. ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ಎಂಬುದು ಈ ಕೆಳಗಿನ ಪಟ್ಟಿಯಲ್ಲಿದೆ.ದೇಶದಲ್ಲಿ ಇಂಧನ ದರ ದಿನೇ ದಿನೇ ತುಟ್ಟಿಯಾಗುತ್ತಿದೆ. ಇತಿಹಾಸದಲ್ಲೇ ದಾಖಲೆ ಬರೆದಿರುವ ಇಂಧನ ದರ ಸೃಷ್ಟಿಯಾಗಿದೆ.

ನಗರ                      ಪೆಟ್ರೋಲ್          ಡೀಸೆಲ್ ಬೆಂಗಳೂರು               ₹93.98              ₹86.21 ಶ್ರೀಗಂಗನಗರ            ₹101.59             ₹93.61 ಅನುಪ್ಪುರ                ₹101.34             ₹91.81 ದೆಹಲಿ                      ₹90. 93             ₹81.32 ಮುಂಬೈ                  ₹97.34              ₹88.44 ಕೊಲ್ಕತ್ತ                  ₹91.12              ₹84.20 ಚೆನ್ನೈ                      ₹92.90             ₹86.31 ಹೈದರಾಬಾದ್​        ₹94.54             ₹88.69 ಪಾಟ್ನಾ                    ₹93.25             ₹86.57 ಜೈಪುರ                     ₹97.47              ₹89.82 ಲಕ್ನೋ                      ₹89.13              ₹81.70 ತಿರುವನಂತಪುರಂ   ₹92.81              ₹87.38

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಂತೆ ದೇಶಿಯ ಮಾರುಕಟ್ಟೆಯಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಳವಾಗುವುದು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗುವುದು ಸಾಮಾನ್ಯ ವಿಚಾರ. ಆದರೆ, ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಏರಿಕೆ ಆಗದೇ ಇದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ದಿನ ಏರಿಕೆಯತ್ತ ಸಾಗುತ್ತಿದೆ.

ಇದನ್ನೂ ಓದಿ: Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಇಂದೂ 25 ಪೈಸೆ ಹೆಚ್ಚಳ

ಇದನ್ನೂ ಓದಿ: Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಸಚಿವ ಧರ್ಮೇಂದ್ರ ಪ್ರಧಾನ್

Follow us on

Related Stories

Most Read Stories

Click on your DTH Provider to Add TV9 Kannada