AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಇಂದೂ 25 ಪೈಸೆ ಹೆಚ್ಚಳ

Petrol Diesel Rate: ಇಂದು ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಪೆಟ್ರೋಲ್​ ದರ ₹90.93ಕ್ಕೆ ಜಿಗಿದಿದೆ. ಹಾಗೆಯೇ ಡೀಸೆಲ್​ 38 ಪೈಸೆ ಹೆಚ್ಚಳದಿಂದ ₹81.32ಕ್ಕೆ ಮಾರಾಟವಾಗುತ್ತಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್​ ದರ ಇಳಿಕೆಯತ್ತ ಸಾಗಿದ್ದು. ಜನರು ಕೊಂಚ ನಿರಾಳರಾಗಿದ್ದಾರೆ.

Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಇಂದೂ 25 ಪೈಸೆ ಹೆಚ್ಚಳ
ಸಾಂದರ್ಭಿಕ ಚಿತ್ರ
shruti hegde
| Edited By: |

Updated on: Feb 23, 2021 | 10:31 AM

Share

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿಕೆಯಾಗಿರುವುದರಿಂದ ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಕೂಡಾ ಮಂಗಳವಾರವೂ ಮತ್ತೆ ಏರಿಕೆಯತ್ತ ಸಾಗಿದೆ. ದೆಹಲಿಯಲ್ಲಿ ದೈನಂದಿನ ಇಂಧನ ದರದ ಪರಿಷ್ಕರಣೆಯ ನಂತರ ಪೆಟ್ರೋಲ್​ ದರ 25 ಪೈಸೆ ಹಾಗೂ ಡೀಸೆಲ್​ 35 ಪೈಸೆ ಹೆಚ್ಚಾಗಿದೆ.

ನಿನ್ನೆ ಪೆಟ್ರೋಲ್​ ದರ ₹90.58 ಇತ್ತು. ಇದೀಗ ಪ್ರತಿ ಲೀಟರ್​ ₹90.93ಕ್ಕೆ ಜಿಗಿದಿದೆ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್​ ₹81.32 ಇದ್ದು, ಇದೀಗ  ₹81.32ಕ್ಕೆ ಮಾರಾಟವಾಗುತ್ತಿದೆ. ಈ ತಿಂಗಳಲ್ಲಿ ಪೆಟ್ರೋಲ್​ ದರ ಒಟ್ಟು ಪ್ರತಿ ಲೀಟರ್​ಗೆ ₹4.63ರಷ್ಟು ಏರಿಕೆ ಕಂಡಿದೆ ಹಾಗೂ ಡೀಸೆಲ್​₹4.84ರಷ್ಟು ಹೆಚ್ಚಳವಾಗಿದೆ.

ಇಂದು 34 ಪೈಸೆ ಹೆಚ್ಚಳದ ನಂತರ ಮುಂಬೈನಲ್ಲಿ ಇದೀಗ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ₹97.34 ಹಾಗೂ 38ಪೈಸೆ ಹೆಚ್ಚಳದಿಂದ ಡೀಸೆಲ್​ ದರ ₹ 88.44ಕ್ಕೆ ಗ್ರಾಹಕರು ಕೊಂಡುಕೊಳ್ಳುತ್ತಿದ್ದಾರೆ. ಹಾಗೆಯೇ ಚೆನ್ನೈನಲ್ಲಿ ಪೆಟ್ರೋಲ್​ ದರದಲ್ಲಿ 31 ಪೈಸೆ ಏಋಇಕೆ ಮಾಡಲಾಗಿದ್ದು, ಪ್ರತಿ ಲೀಟರ್​ ಬೆಲೆ ₹92.90 ಆಗಿದೆ. ಹಾಗೂ ಡೀಸೆಲ್​ ದರ 33 ಪೈಸೆ ಹೆಚ್ಚಳವಾಗಿದ್ದು, ₹86.06ಕ್ಕೆ ಮಾರಾಟವಾಗುತ್ತಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್​ ದರ 66ಪೈಸೆ ಇಳಿಕೆ ಕಂಡಿದ್ದು ₹91.78 ಇದ್ದ ಪೆಟ್ರೋಲ್​ ದರ ಇದೀಗ ₹91.12ಕ್ಕೆ ಲಭ್ಯವಾಗುತ್ತಿದೆ. ಹಾಗೂ ಡೀಸೆಲ್​ ದರವೂ ಕೂಡಾ 36 ಪೈಸೆ ಕಡಿಮೆಯಾಗಿದ್ದು, ಇದೀಗ ಪ್ರತಿ ಲೀಟರ್​ ಡೀಸೆಲ್​ ದರ ₹84.20ಕ್ಕೆ ಲಭ್ಯವಾಗುತ್ತಿದೆ. ಇಷ್ಟು ದಿನ ಏರುತ್ತಲೇ ಇದ್ದ ಇಂಧನ ದರವನ್ನು ನೋಡುತ್ತಿದ್ದ ಕೊಲ್ಕತ್ತ ನಾಗರಿಕರಿಗೆ ಕೊಂಚ ಖುಷಿಯುಂಟಾಗಿದೆ.

ಇದನ್ನೂ ಓದಿ: Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಸಚಿವ ಧರ್ಮೇಂದ್ರ ಪ್ರಧಾನ್

ಇದನ್ನೂ ಓದಿ: Petrol/Diesel Price: ಸತತ 13ನೇ ದಿನವೂ ಪೆಟ್ರೋಲ್ ದರ 39 ಪೈಸೆ ಹೆಚ್ಚಳ.. ಜನಸಾಮಾನ್ಯರ ಕೆಂಗಣ್ಣು

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ