Gujarat Factory Blast: ಗುಜರಾತ್​ನ UPL-5 ರಾಸಾಯನಿಕ ಉತ್ಪಾದನಾ ಸ್ಥಾವರದಲ್ಲಿ ಭಾರಿ ಸ್ಫೋಟ

Bharuch Chemical Factory Blast: ಭರೂಚ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜಗಾಡಿಯಾದ ಯುಪಿಎಲ್ -5 ರಾಸಾಯನಿಕ ಉತ್ಪಾದನಾ ಕಂಪನಿಯ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯ ಮಟ್ಟ ಹೆಚ್ಚಾಗಿದ್ದು, ಶಬ್ದ 10 ಕಿ.ಮೀ ಗಿಂತ ಹೆಚ್ಚು ದೂರ ಕೇಳಿಬಂದಿದೆ.

  • TV9 Web Team
  • Published On - 9:15 AM, 23 Feb 2021
Gujarat Factory Blast: ಗುಜರಾತ್​ನ UPL-5 ರಾಸಾಯನಿಕ ಉತ್ಪಾದನಾ ಸ್ಥಾವರದಲ್ಲಿ ಭಾರಿ ಸ್ಫೋಟ
UPL-5 ರಾಸಾಯನಿಕ ಉತ್ಪಾದನಾ ಸ್ಥಾವರದಲ್ಲಿ ಭಾರಿ ಸ್ಫೋಟ

ಗುಜರಾತ್: ಭರೂಚ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜಗಾಡಿಯಾದ ಯುಪಿಎಲ್ -5 ರಾಸಾಯನಿಕ ಉತ್ಪಾದನಾ ಕಂಪನಿಯ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯ ಮಟ್ಟ ಹೆಚ್ಚಾಗಿದ್ದು, ಶಬ್ದ 10 ಕಿ.ಮೀ ಗಿಂತ ಹೆಚ್ಚು ದೂರ ಕೇಳಿಬಂದಿದೆ. ಸ್ಫೋಟದ ಶಬ್ದ ಕೇಳಿದ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಯುಪಿಎಲ್-5 ರಾಸಾಯನಿಕ ಉತ್ಪಾದನಾ ಕಂಪನಿಯಾಗಿದೆ. ಆದರೆ, ಹೇಗೆ ಬೆಂಕಿ  ಬಿದ್ದಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.