ಬೆಂಗಳೂರು: ಕಳೆದ ಎರಡು ದಿನಗಳಿಂದ ಚಿನ್ನ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಗ್ರಾಹರಿಗೆ ಖುಷಿಯೋ ಖುಷಿ. ಚಿನ್ನ ದರ ಕಡಿಮೆಯಾಗುತ್ತಿದ್ದಂತೆ ಬೇಡಿ ಹೆಚ್ಚಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಚಿನ್ನಾಭರಣ ಖರೀದಿಸಲು ಯೋಚಿಸಿದ್ದೇ ಆದಲ್ಲಿ, ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಚನೆ ಇದ್ದಲ್ಲಿ ದರ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲೇ ಬೇಕಲ್ವೇ? ಚಿನ್ನ ಕೊಳ್ಳಲು ದರ ಕಡಿಮೆ ಇರಬೇಕು ಎಂಬುದು ಗ್ರಾಹಕರ ಆಸೆ. ದೈನಂದಿನ ದರ ಬದಲಾವಣೆಯನ್ನು ಗಮನಿಸುತ್ತಿರುವಾಗ ಚಿನ್ನ ಅಥವಾ ಬೆಳ್ಳಿ ದರ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಕಳೆದ ವರ್ಷದ ಚಿನ್ನ ದರವನ್ನು ಗಮನಿಸಿದಾಗ ಪ್ರಸ್ತುತದಲ್ಲಿ ಚಿನ್ನ ದರ ಕುಸಿದಿದೆ. ಹಾಗಿದ್ದರೆ ಚಿನ್ನ ದರ ಎಷ್ಟಿರಬಹುದು? ಚಿನ್ನ ಕೊಳ್ಳಲು ಸೂಕ್ತ ಸಮಯವೇ? ಎಂಬುದರ ಮಾಹಿತಿ ಇಲ್ಲಿದೆ.
ಕಳೆದ ಎರಡು ದಿನಗಳಿಂದ ಚಿನ್ನ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 42,010 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 45,830 ರೂಪಾಯಿಗೆ ಮಾರಾಟವಾಗುತ್ತಿದೆ. ಇಂದು ಕೂಡಾ ಇದೇ ದರವನ್ನು ಕಾಪಾಡಿಕೊಂಡಿದೆ. ಬೆಳ್ಳಿ ದರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ದರ ಕೊಂಚ ಇಳಿಕೆಯತ್ತ ಮುಖ ಮಾಡಿದೆ. 1ಕೆಜಿ ಬೆಳ್ಳಿ ದರ ನಿನ್ನೆ 67,800 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 67,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿ ಇಳಿಕೆ ಕಂಡಿದೆ.
ದರ ಇಳಿಕೆಯತ್ತ ಸಾಗುತ್ತಿರುವಾಗಲೇ, ಚಿನ್ನ ದರ ಇನ್ನೂ ಇಳಿಯಬಹುದು ಎಂಬ ಆಸೆ ಬರುವುದು ಸಹಜ. ಆದರೆ ನೆನಪಿರಲಿ ಚಿನ್ನ, ಬೆಳ್ಳಿ ದರ ಏರಿಳಿತವನ್ನೂ ಊಹಿಸಲೂ ಸಾಧ್ಯವಿಲ್ಲ. ಇಂದಿನ ದರಕ್ಕಿಂತ ನಾಳೆ ದರ ವ್ಯತ್ಯಾಸ ಕಂಡು ಬಂದು ಇನ್ನೂ ಏರಲೂಬಹುದು. ಅಥವಾ ಇಳಿಯಲೂಬಹುದು. ಚಿನ್ನ ಕೊಳ್ಳಲು ಸೂಕ್ತ ಸಮಯ ನಿಮ್ಮದಾಗಿದ್ದರೆ ಚಿನ್ನ ಕೊಳ್ಳಿರಿ. ಕಳೆದ ವರ್ಷದಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಇಂದು ಕುಸಿದಿರುವುದಂತೂ ನಿಜ.
22 ಕ್ಯಾರೆಟ್ ಚಿನ್ನ ದರ
ದೈನಂದಿನ ದರ ವ್ಯತ್ಯಾಸವನ್ನು ಗಮನಿಸಿದಾಗ ಚಿನ್ನ ದರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ಎರಡು ದಿನಗಳಿಂದ ದರ ಸ್ಥಿರತೆ ಕಾಪಾಡಿಕೊಂಡಿದೆ. 1 ಗ್ರಾಂ ಚಿನ್ನ4,201 ರೂಪಾಯಿಗೆ ಮಾರಾಟವಾಗುತ್ತಿದೆ. 8 ಗ್ರಾಂ ಚಿನ್ನ ದರ 33,608 ರೂಪಾಯಿಗೆ ನಿಗದಿಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನ 42,010 ರೂಪಾಯಿಗೆ ನಿಗದಿಯಾಗಿದ್ದು, 100 ಗ್ರಾಂ ಚಿನ್ನ 4,20,100 ರೂಪಾಯಿಗೆ ಮಾರಾಟವಾಗುತ್ತಿದೆ.
24 ಕ್ಯಾರೆಟ್ ಚಿನ್ನ ದರ ಮಾಹಿತಿ
1ಗ್ರಾಂ ಚಿನ್ನ ದರ ಇಂದು 4,583 ರೂಪಾಯಿಗೆ ನಿಗದಿಯಾಗಿದೆ. 8 ಗ್ರಾಂ ಚಿನ್ನ 36,664 ರೂಪಾಯಿಗೆ ನಿಗದಿಯಾಗಿದೆ. ಹಾಗೂ 10 ಗ್ರಾಂ ಚಿನ್ನ 45,830 ರೂಪಾಯಿ ಹಾಗೂ 100 ಗ್ರಾಂ ಚಿನ್ನ 4,58,300 ರೂಪಾಯಿಗೆ ನಿಗದಿಯಾಗಿದೆ. ಕಳೆದ ಎರಡು ದಿನಗಳಿಂದ ಚಿನ್ನ ಸ್ಥಿರತೆ ಕಾಪಾಡಿಕೊಂಡಿದ್ದು, ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಬೆಳ್ಳಿ ದರ ಮಾಹಿತಿ
ಬೆಳ್ಳಿ ದರ ನಿನ್ನೆ ಕೊಂಚ ಏರಿಕೆಯತ್ತ ಸಾಗಿತ್ತು. ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ, ಬೆಳ್ಳಿ ದರ ಏರಿಕೆ ಅಥವಾ ಇಳಿಕೆ ಕಾಣುವುದು ಮಾಮೂಲಿ. ಹಾಗಿದ್ದಲ್ಲಿ ಬೆಳ್ಳಿ ಕೊಳ್ಳುವಾಗ ದರ ಎಷ್ಟಿದೆ ಎಂಬುದರ ಬಗ್ಗೆ ಗಮನಿಸಿ.
1 ಗ್ರಾಂ ಬೆಳ್ಳಿ ದರ ನಿನ್ನೆ 67.80 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 67.30 ರೂಪಾಯಿಗೆ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ದರ ಇಳಿಕೆಯತ್ತ ಸಾಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 542.40 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 538.40 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ನಿನ್ನೆ 6,780 ರೂಪಾಯಿಗೆ ಮಾರಾಟವಾಗಿದೆ. ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ 50 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಇಂದು ದರ 6,730 ರೂಪಾಯಿಗೆ ನಿಗದಿಯಾಗಿದೆ. 1ಕೆಜಿ ಬೆಳ್ಳಿ ದರ ನಿನ್ನೆ 67,800 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 67,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿ ಇಳಿಕೆ ಕಂಡಿದೆ.
ಇದನ್ನೂ ಓದಿ: Gold Silver Price: ಚಿನ್ನ ದರದಲ್ಲಿ ಏರಿಕೆಯೂ ಇಲ್ಲ.. ಇಳಿಕೆಯೂ ಇಲ್ಲ!
ಇದನ್ನೂ ಓದಿ: Gold Silver Price: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ! 1ಕೆಜಿ ಬೆಳ್ಳಿ ದರ 66,900 ರೂಪಾಯಿ
Published On - 8:41 am, Thu, 18 March 21