ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದೆ. ಹೀಗಾಗಿ ಸರ್ಕಾರ ಱಪಿಡ್ ಆ್ಯಂಟಿಜನ್ ಕೊವಿಡ್ ಟೆಸ್ಟ್ ಕಿಟ್ ಮೊರೆ ಹೋಗಿದೆ. ಇದರಿಂದ ಕೇವಲ 20 ನಿಮಿಷದಲ್ಲಿ ಕೊವಿಡ್ ಟೆಸ್ಟ್ ರಿಪೋರ್ಟ್ ಕೈ ಸೇರಲಿದೆ.
ಇನ್ನು ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊವಿಡ್ ಟೆಸ್ಟ್ ಮಾಡಿಸುವವರ ಸಂಖ್ಯೆ ಕೂಡ ಏರಿಕೆಯಾಗಿದೆ. ಸದ್ಯ ಕೊವಿಡ್ ಟೆಸ್ಟ್ ವರದಿ ವಿಳಂಬವಾಗ್ತಿದೆ. ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಕೊರೊನಾ ಟೆಸ್ಟ್ ಮಾಡುವ ದೃಷ್ಟಿಯಿಂದ ಸರ್ಕಾರ ಱಪಿಡ್ ಆ್ಯಂಟಿಜನ್ ಕೊವಿಡ್ ಟೆಸ್ಟ್ ಕಿಟ್ ಮೊರೆ ಹೋಗಿದೆ.
ಬೆಂಗಳೂರಿಗೆ ಸುಮಾರು 50 ಸಾವಿರ ಕಿಟ್‌ಗಳನ್ನು ಸರ್ಕಾರ ಖರೀದಿ ಮಾಡಿದೆ. ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಈ ಕಿಟ್ಗಳ ಮೂಲಕ ಟೆಸ್ಟ್ ಮಾಡಲಾಗುತ್ತೆ. ಇದರಿಂದ ಕೇವಲ 20 ನಿಮಿಷದಲ್ಲಿ ಟೆಸ್ಟ್ ರಿಪೋರ್ಟ್ ಸಿಗಲಿದೆ. ಅಲ್ಲದೆ ಫೀವರ್ ಕ್ಲಿನಿಕ್‌ಗಳಲ್ಲಿ ಗಂಟಲು ದ್ರವ ಟೆಸ್ಟ್‌ಗೆ ನಿರ್ಧರಿಸಿದೆ.
Published On - 7:39 am, Fri, 10 July 20