ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ವೃದ್ಧ ದಂಪತಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದಿದೆ. ಶರಣಪ್ಪ, ಪತ್ನಿ ಗಿರಿಜಮ್ಮ ಹಲ್ಲೆಗೆ ಒಳಗಾದವರು.
ತಮಗೆ ಸೇರಿದ ಜಾಗದಲ್ಲಿ ಕಲ್ಲು ಬಂಡೆ ಹಾಕಿದ್ದಕ್ಕೆ ಶರಣಪ್ಪನ ಮೇಲೆ ವೀರೇಶ್ ಏಕಾಏಕಿಯಾಗಿ ಬಂದು ಹಲ್ಲೆ ನಡೆಸಿದ್ದಾನೆ. ನನ್ನ ಜಾಗದಲ್ಲಿ ಏಕೆ ಕಲ್ಲು ಹಾಕಿದ್ದು ಎಂದು ಹೊಡೆದಿದ್ದಾನೆ. ಬಳಿಕ ವೀರೇಶ್ ಕುಟುಂಬ ಸದಸ್ಯರು ಸೇರಿದಂತೆ ಹತ್ತು ಜನರ ಗುಂಪು ಶರಣಪ್ಪನ ಮೇಲೆ ದಾಳಿ ಮಾಡಿದೆ. ಈ ವೇಳೆ ರಾಡ್‌ನಿಂದ ಶರಣಪ್ಪನ ಪತ್ನಿ ಗಿರಿಜಮ್ಮ ಮೇಲೂ ಹಲ್ಲೆ ನಡೆದಿದೆ. ಗಾಯಾಳು ದಂಪತಿಗೆ ಜಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಖಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ವೀರೇಶ್ ಸೇರಿ 10 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Published On - 12:22 pm, Fri, 6 November 20