ಮೌಲ್ವಿಗಳ ಸೋಗಿನಲ್ಲಿ.. ದರ್ಗಾದಲ್ಲಿ ವಿಶೇಷ ಪೂಜೆಗಾಗಿ ಹಣ ವಸೂಲಿ ಮಾಡ್ತಿದ್ದ ವಂಚಕರು ಅಂದರ್

ಮೌಲ್ವಿಗಳ ಸೋಗಿನಲ್ಲಿ.. ದರ್ಗಾದಲ್ಲಿ ವಿಶೇಷ ಪೂಜೆಗಾಗಿ ಹಣ ವಸೂಲಿ ಮಾಡ್ತಿದ್ದ ವಂಚಕರು ಅಂದರ್

ಕೊಪ್ಪಳ: ಮೌಲ್ವಿಗಳ ಸೋಗಿನಲ್ಲಿ ಬಂದು ಜನರ ಬಳಿ ಹಣ ವಸೂಲಿ ಮಾಡುತ್ತಿದ್ದ ಮೂವರು ಕಿರಾತಕರು ಅಂದರ್​ ಆಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೆ, ಮೂವರು ಆಸಾಮಿಗಳನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಿವಾಸಿಗಳಾದ ಗಣಪತಿ, ಸುನಿಲ್ ಮತ್ತು ಆನಂದ್ ಬಂಧಿತ ಆರೋಪಿಗಳು. ಮೌಲ್ವಿಗಳಂತೆ ವೇಷತೊಟ್ಟು ಬರುತ್ತಿದ್ದ ಈ ಕಿರಾತಕರು ಜನರ ಬಳಿ ದರ್ಗಾದಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಹಣ ವಸೂಲಿ ಮಾಡ್ತಿದ್ದರಂತೆ. ತಲಾ […]

KUSHAL V

|

Nov 06, 2020 | 10:56 AM

ಕೊಪ್ಪಳ: ಮೌಲ್ವಿಗಳ ಸೋಗಿನಲ್ಲಿ ಬಂದು ಜನರ ಬಳಿ ಹಣ ವಸೂಲಿ ಮಾಡುತ್ತಿದ್ದ ಮೂವರು ಕಿರಾತಕರು ಅಂದರ್​ ಆಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೆ, ಮೂವರು ಆಸಾಮಿಗಳನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಿವಾಸಿಗಳಾದ ಗಣಪತಿ, ಸುನಿಲ್ ಮತ್ತು ಆನಂದ್ ಬಂಧಿತ ಆರೋಪಿಗಳು.

ಮೌಲ್ವಿಗಳಂತೆ ವೇಷತೊಟ್ಟು ಬರುತ್ತಿದ್ದ ಈ ಕಿರಾತಕರು ಜನರ ಬಳಿ ದರ್ಗಾದಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಹಣ ವಸೂಲಿ ಮಾಡ್ತಿದ್ದರಂತೆ. ತಲಾ 500 ಅಥವಾ 1,000 ರೂಪಾಯಿಯಂತೆ ಹಣ ವಸೂಲಿ ಮಾಡ್ತಿದ್ದರಂತೆ. ಅದ್ಯಾಕೋ, ಗ್ರಾಮಸ್ಥರಿಗೆ ಇವರ ಮೇಲೆ ಡೌಟ್ ಬಂದು ಹಿಡಿದು ವಿಚಾರಿಸಿದಾದ ಸತ್ಯ ಹೊರಬಂದಿದೆ. ಸದ್ಯ, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada