AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ಹೋಗಿದ್ದ ಕುಟುಂಬಕ್ಕೆ ಬಿಗ್ ಶಾಕ್, 2.5 ಕೋಟಿಗೂ ಅಧಿಕ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಪಕ್ಕದ ಜಿಲ್ಲೆಯಲ್ಲಿ ಮಗಳ ಮದ್ವೆ ಇದೆ ಅಂತ ಮನೆಗೆ ಬೀಗ ಹಾಕಿಕೊಂಡು ಹೋದವರಿಗೆ ದೊಡ್ಡ ಆಘಾತವಾಗಿದೆ. ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಖತರ್ನಾಕ್ ಕಳ್ಳರ ಗ್ಯಾಂಗ್ ಇಡೀ ಮನೆಯನ್ನೇ ಲೂಟಿ ಮಾಡಿದೆ. ಬರೋಬ್ಬರಿ ಎರಡೂವರೆ ಕೋಟಿಗೂ ಅಧಿಕ ಚಿನ್ನಾಭರಣವನ್ನ ದೋಚಿದ್ದಾರೆ. ಮದುವೆ ಮುಗಿಸಿ ಮನೆಗೆ ಬಂದವರು ಶಾಕ್​ಗೆ ಒಳಗಾಗಿದ್ದಾರೆ. 3ಕೆಜಿ ಚಿನ್ನ, 30 ಕೆಜಿಗೂ ಅಧಿಕ ಬೆಳ್ಳಿ ಕಳ್ಳತನವಾಗಿರೋದನ್ನ ಕಂಡು ಇಡೀ ಕುಟುಂಬ ದಿಗ್ರ್ಬಮೆಗೊಂಡಿದೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು: ಚಿಕ್ಕಮಗಳೂರು […]

ಮದುವೆಗೆ ಹೋಗಿದ್ದ ಕುಟುಂಬಕ್ಕೆ ಬಿಗ್ ಶಾಕ್, 2.5 ಕೋಟಿಗೂ ಅಧಿಕ ಚಿನ್ನಾಭರಣ ಕಳ್ಳತನ
ಆಯೇಷಾ ಬಾನು
|

Updated on: Nov 06, 2020 | 10:28 AM

Share

ಚಿಕ್ಕಮಗಳೂರು: ಪಕ್ಕದ ಜಿಲ್ಲೆಯಲ್ಲಿ ಮಗಳ ಮದ್ವೆ ಇದೆ ಅಂತ ಮನೆಗೆ ಬೀಗ ಹಾಕಿಕೊಂಡು ಹೋದವರಿಗೆ ದೊಡ್ಡ ಆಘಾತವಾಗಿದೆ. ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಖತರ್ನಾಕ್ ಕಳ್ಳರ ಗ್ಯಾಂಗ್ ಇಡೀ ಮನೆಯನ್ನೇ ಲೂಟಿ ಮಾಡಿದೆ. ಬರೋಬ್ಬರಿ ಎರಡೂವರೆ ಕೋಟಿಗೂ ಅಧಿಕ ಚಿನ್ನಾಭರಣವನ್ನ ದೋಚಿದ್ದಾರೆ. ಮದುವೆ ಮುಗಿಸಿ ಮನೆಗೆ ಬಂದವರು ಶಾಕ್​ಗೆ ಒಳಗಾಗಿದ್ದಾರೆ. 3ಕೆಜಿ ಚಿನ್ನ, 30 ಕೆಜಿಗೂ ಅಧಿಕ ಬೆಳ್ಳಿ ಕಳ್ಳತನವಾಗಿರೋದನ್ನ ಕಂಡು ಇಡೀ ಕುಟುಂಬ ದಿಗ್ರ್ಬಮೆಗೊಂಡಿದೆ.

ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು: ಚಿಕ್ಕಮಗಳೂರು ನಗರದ ರತ್ನಗಿರಿ ರಸ್ತೆಯ ಕಿರಣ್ ಬೇಕರಿ ಸಮೀಪದ ಸುರೇಶ್ ಎಂಬುವರ ಮನೆ ಕಳ್ಳರಿಗೆ ಸ್ವರ್ಗವಾಗಿ ಕಂಡಿದೆ. ಅಕ್ಟೋಬರ್ 27ರಂದು ಸುರೇಶ್ ಕುಮಾರ್ ಮಗಳ ಮದುವೆಗಾಗಿ ಕುಟುಂಬ ಹಾಸನಕ್ಕೆ ಪಯಣ ಬೆಳೆಸಿತ್ತು. ಇದನ್ನೇ ಹೊಂಚು ಹಾಕಿ ಕುಳಿತಿದ್ದ ಕಳ್ಳರ ಗ್ಯಾಂಗ್, ಆ ದಿನ ರಾತ್ರಿ ಮನೆಗೆ ಎಂಟ್ರಿಕೊಟ್ಟಿದೆ. ಮನೆಯ ಹಿಂಭಾಗದ ಚರಂಡಿ ಮೂಲಕ ಮನೆಯ ಹಿಂದಿನ ಡೋರ್ ಒಡೆದು ಎಂಟ್ರಿಯಾಗಿದ್ದಾರೆ. ಬಾಲ್ಕನಿಯಿಂದ ಮನೆಯ ಒಳಗೆ ಪ್ರವೇಶಿಸಿ ಚಿನ್ನದ ಬಂಡಾರಕ್ಕೆ ಕೈ ಹಾಕಿ ಸುಮಾರು ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಬೆಲೆ ಬಾಳುವ ಬರೋಬ್ಬರಿ 3 ಕೆಜಿಗೂ ಅಧಿಕ ಚಿನ್ನ, 30 ಕೆಜಿಗೂ ಅಧಿಕ ಬೆಳ್ಳಿಯನ್ನು ಕದ್ದಿದ್ದಾರೆ. ಮದುವೆ ಮುಗಿಸಿಕೊಂಡು ಬಂದ ಕುಟುಂಬಕ್ಕೆ ಮನೆಯ ಚಿತ್ರಣವನ್ನ ನೋಡಿ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಕೊರೊನಾ ಕಾಟಕ್ಕೆ ಶಾಪ್ ಖಾಲಿ ಮಾಡಿ ಆಭರಣಗಳನ್ನ ಮನೆಯಲ್ಲಿಟ್ಟಿದ್ದರು: ಅಂದಾಗೆ ಈ ಕುಟುಂಬ ಇಷ್ಟು ಪ್ರಮಾಣದ ಚಿನ್ನಾಭರಣ ಮನೆಯಲ್ಲಿ ಇಡೋಕೆ ಕಾರಣವೂ ಇದೆ. ಮನೆಯ ಯಜಮಾನ ಸುರೇಶ್ ಕುಮಾರ್, ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಸ್ವರ್ಣಾಂಜಲಿ ಎಂಬ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ರು. ಕೊರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ವ್ಯಾಪಾರದಲ್ಲಿ ನಷ್ಟ ಆದ ಕಾರಣ ಜ್ಯುವೆಲ್ಲರಿ ಶಾಪ್ ಕ್ಲೋಸ್ ಮಾಡಿದ್ರು. ಸದ್ಯ ಈಗ ಆ ಜಾಗದಲ್ಲಿ ಶ್ರೀಕಂಠೇಶ್ವರ ಎಲೆಕ್ಟ್ರಾನಿಕ್ ಮಳಿಗೆ ಇದ್ದು, ಶಾಪ್ ಬಂದ್ ಮಾಡಲಾಗಿದೆ. ಹೀಗಾಗಿ ಜ್ಯುವೆಲ್ಲರಿ ಶಾಪ್​ನಲ್ಲಿಟ್ಟಿದ್ದ ಚಿನ್ನಾಭರಣವನ್ನ ಮನೆಯಲ್ಲೇ ಇಟ್ಟುಕೊಂಡಿದ್ರು. ಒಂದೂವರೆ ತಿಂಗಳ ಹಿಂದೆಯಷ್ಟೇ ಹೊಸ ಮನೆ ಖರೀದಿಸಿ ಲಾಕರ್​ನಲ್ಲಿ ಚಿನ್ನಾಭರಣವನ್ನ ಜೋಪಾನ ಮಾಡಿದ್ರು. ಆದ್ರೆ ಹಾಗೇ ಜೋಪಾನವಾಗಿಟ್ಟಿದ್ದ ಚಿನ್ನದ ಗಂಟಿಗೆ, ಕಳ್ಳರು ಕಣ್ ಹಾಕ್ತಾರೆ ಅಂತಾ ಕನಸು ಮನಸ್ಸಿನಲ್ಲಿಯೂ ಯೋಚ್ನೆ ಮಾಡಿರಲಿಲ್ಲ.

ಇದಿಷ್ಟೇ ಅಲ್ಲ ನಿನ್ನೆ ರಾತ್ರಿ ಕೂಡ ಅಬಕಾರಿ ಇಲಾಖೆ ಸಿಬ್ಬಂದಿ ವಿಜಯ ಎಂಬುವರ ಕಲ್ಯಾಣನಗರದ ಮನೆಗೆ ನುಗ್ಗಿ ಖದೀಮರು 6ಲಕ್ಷ ಮೌಲ್ಯದ ಚಿನ್ನಾಭರಣವನ್ನ ದೋಚಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಪ್ರಕರಣಗಳನ್ನ ನೋಡಿದ್ರೆ ಕಳ್ಳರಿಗೆ ಪೊಲೀಸರ ಭಯವೇ ಇಲ್ಲವೆನೋ ಅನ್ನಿಸ್ತಿದೆ. ಈ ಮಧ್ಯೆ ಒಂದೇ ಮನೆಯಲ್ಲಿ ಎರಡೂವರೆ ಕೋಟಿಗೂ ಅಧಿಕ ಚಿನ್ನಾಭರಣ ಕಳವು ಆಗಿರೋದು ನಿಜಕ್ಕೂ ಕಾಫಿನಾಡಿನ ಜನ ಕಂಗಲಾಗುವಂತೆ ಮಾಡಿದೆ. ಒಟ್ನಲ್ಲಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಕಾಫಿನಾಡು, ಇದೀಗ ಅಕ್ಷರಶಃ ಕಳ್ಳರ ಸ್ವರ್ಗವಾಗಿ ಬದಲಾಗ್ತಿದೆಯೇನೋ ಅನ್ನೋ ಸಂಶಯ ಮೂಡ್ತಿರೋದಂತೂ ಸತ್ಯ.