ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗ್ತಿದೆ. ಈ ಮಧ್ಯೆ ಆರೋಗ್ಯಾಧಿಕಾರಿಗಳಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅದುವೇ ಸೋಂಕಿತರ ಮೃತದೇಹದ ಅಂತ್ಯಕ್ರಿಯೆ.
ಈಗಾಗಲೇ ಬಳ್ಳಾರಿಯಲ್ಲಿ ಸೋಂಕಿತರ ಮೃತದೇಹವನ್ನು ಗುಂಡಿಗೆ ಎಸೆದ ದೃಶ್ಯಗಳನ್ನು ರಾಜ್ಯದ ಜನರು ಸ್ವತಃ ವೀಕ್ಷಿಸಿದ್ದಾರೆ. ಜೊತೆಗೆ ಬೆಂಗಳೂರಿನ ಹೃದಯ ಭಾಗದ ಜೆ.ಸಿ.ನಗರದ ಸ್ಮಶಾನದಲ್ಲಿ ಇತ್ತೀಚೆಗೆ ನಡೆದ ಮೃತ ಸೋಂಕಿತನ ಅಂತ್ಯಕ್ರಿಯೆಯ ವೇಳೆ ಸಿಬ್ಬಂದಿ ಧರಿಸಿದ್ದ PPE ಕಿಟ್ಗಳನ್ನು ಅಲ್ಲೇ ಬಿಸಾಡಿದ್ದನ್ನು ಸಹ ಕಂಡಿದ್ದೇವೆ.
ಹಾಗಾಗಿ ನಗರದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ. ಇದಕ್ಕಾಗಿಯೇ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಸಲು ನಗರದ ಹೊರವಲಯದಲ್ಲಿ 2 ಎಕರೆ ಜಾಗವನ್ನ ಮೀಸಲಿಡುತ್ತೇವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟಿವಿ9ಗೆ ಹೇಳಿರುವುದು ಸಮಾಧಾನಕರ. ಇದಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಅಂತ್ಯಸಂಸ್ಕಾರ ನಡೆಸಲು ಇರುವ ಮಾರ್ಗಸೂಚಿಯನ್ನು ಬಿಬಿಎಂಪಿ ಸಿಬ್ಬಂದಿ ಟಿವಿ9 ಜೊತೆ ಹಂಚಿಕೊಂಡಿದೆ. ಅವುಗಳು ಹೀಗಿದೆ.
ಸೋಂಕಿತರ ಅಂತ್ಯಕ್ರಿಯೆ ವಿಧಾನದ ಮಾರ್ಗಸೂಚಿ
1. 12 ಅಡಿ ಆಳ, 3 ಅಡಿ ಅಗಲ ಹಾಗೂ 6 ಅಡಿ ಉದ್ದದ ಗುಂಡಿಯನ್ನು ತೋಡಬೇಕು
2. ಅದಕ್ಕೆ ಮೊದಲು ಎರಡು ಅಡಿಯವೆರೆಗೂ ಬ್ಲೀಚಿಂಗ್ ಪೌಡರ್ ಹಾಕಬೇಕು
3. ಬಳಿಕ ಸೋಂಕಿತರ ಮೃತದೇಹವನ್ನ ಗುಂಡಿಯೊಳಕ್ಕೆ ಇರಿಸಬೇಕು
4. ನಂತರ ಮೃತದೇಹದ ಮೇಲೆ 2 ಅಡಿ ಮಣ್ಣು ಹಾಕಬೇಕು
5. ಅದಾದ ಮೇಲೆ ಮಣ್ಣಿನ ಮೇಲೆ 2 ಅಡಿ ಬ್ಲೀಚಿಂಗ್ ಪೌಡರ್ ಹಾಕಬೇಕು
6.ಕೊನೆಯಲ್ಲಿ ಗುಂಡಿಯನ್ನು ಮಣ್ಣಿನಿಂದ ಸಂಪೂರ್ಣವಾಗಿ ಸಮತಟ್ಟಾಗಿ ಮುಚ್ಚಬೇಕು
7.ಜೊತೆಗೆ ಬಹಳ ಮುಖ್ಯವಾಗಿ PPE ಕಿಟ್ಗಳನ್ನ ಪೆಟ್ರೋಲ್ ಸುರಿದು ಅಲ್ಲಿಯೇ ಸುಡಬೇಕು
8. ನಂತರ ಇಡೀ ಸ್ಥಳಕ್ಕೆ ಕೆಮಿಕಲ್ ಸ್ಪ್ರೇ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು
9.ಅಂತ್ಯಕ್ರಿಯೆ ಕಾರ್ಯವನ್ನ ಸಂಪೂರ್ಣವಾಗಿ ವಿಡಿಯೋ ಕಾಲ್ ಮೂಲಕ ಸ್ಥಳೀಯ ವೈದ್ಯಕೀಯ ಅಧಿಕಾರಿ ವೀಕ್ಷಿಸಿ OK ಮಾಡಬೇಕು
ಇದರ ಜೊತೆ ಮುಖ್ಯವಾಗಿ ಯಾವುದೇ ಕಾರಣಕ್ಕೂ ಪಿಪಿಇ ಕಿಟ್ಗಳನ್ನ ಬಿಸಾಡುವಂತಿಲ್ಲ ಎಂದು ಕಟ್ಟುನಿಟ್ಟಾದ ನಿರ್ದೇಶನವನ್ನು ಸಹ ನೀಡಿದೆ.
Published On - 12:11 pm, Wed, 1 July 20