AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟ.. ಈ ಬಾರಿ ‘ಗಣಪತಿ ಬಪ್ಪ ಮೋರೆಯಾ’ ಮಾರ್ದನಿ ಇಲ್ಲ!

ಮುಂಬೈ: ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟಿಷರ ವಿರುದ್ಧ ಹೋರಾಡಲು ಗೌರಿ ಗಣೇಶ ಸೇರಿದಂತೆ ಹಲವು ಹಬ್ಬಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದವು. ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಜನರನ್ನು ಸೇರಿಸಲು ಪ್ರಮುಖ ಪಾತ್ರ ವಹಿಸುತ್ತಿತ್ತು. ಬಾಲಗಂಗಾಧರನಾಥ ತಿಲಕರ ‘ಗಣಪತಿ ಬಪ್ಪ ಮೋರೆಯಾ’ ಮಾರ್ದನಿಸುತ್ತಿತ್ತು. ಅಂದಿನ ಬಾಂಬೆಯ ಗಣೇಶ ಉತ್ಸವಕ್ಕೆ ಅಷ್ಟು ಮಹತ್ವ ಇತ್ತು. ಕಾಲಾಂತರದಲ್ಲಿ ಗಣೇಶೋತ್ಸವ ಆಚರಣೆ ರೂಪುರೇಷೆ ಬದಲಾಗುತ್ತಾ ಬಂದಿದೆಯಾದರೂ ಮಹತ್ವ ಕಳೆದುಕೊಂಡಿಲ್ಲ. ಆದ್ರೆ ಈ ಬಾರಿ ಏನೋ ಎಂಥೋ ಎಂಬಂತಾಗಿದೆ. ಮಹಾಮಾರಿ ಕೊರೊನಾ ವೈರಸ್​ ರಣಕೇಕೆ ಹಾಕುತ್ತಿರುವ […]

ಕೊರೊನಾ ಕಾಟ.. ಈ ಬಾರಿ ‘ಗಣಪತಿ ಬಪ್ಪ ಮೋರೆಯಾ’ ಮಾರ್ದನಿ ಇಲ್ಲ!
ಸಾಧು ಶ್ರೀನಾಥ್​
| Edited By: |

Updated on:Jul 01, 2020 | 1:32 PM

Share

ಮುಂಬೈ: ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟಿಷರ ವಿರುದ್ಧ ಹೋರಾಡಲು ಗೌರಿ ಗಣೇಶ ಸೇರಿದಂತೆ ಹಲವು ಹಬ್ಬಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದವು. ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಜನರನ್ನು ಸೇರಿಸಲು ಪ್ರಮುಖ ಪಾತ್ರ ವಹಿಸುತ್ತಿತ್ತು. ಬಾಲಗಂಗಾಧರನಾಥ ತಿಲಕರ ‘ಗಣಪತಿ ಬಪ್ಪ ಮೋರೆಯಾ’ ಮಾರ್ದನಿಸುತ್ತಿತ್ತು. ಅಂದಿನ ಬಾಂಬೆಯ ಗಣೇಶ ಉತ್ಸವಕ್ಕೆ ಅಷ್ಟು ಮಹತ್ವ ಇತ್ತು.

ಕಾಲಾಂತರದಲ್ಲಿ ಗಣೇಶೋತ್ಸವ ಆಚರಣೆ ರೂಪುರೇಷೆ ಬದಲಾಗುತ್ತಾ ಬಂದಿದೆಯಾದರೂ ಮಹತ್ವ ಕಳೆದುಕೊಂಡಿಲ್ಲ. ಆದ್ರೆ ಈ ಬಾರಿ ಏನೋ ಎಂಥೋ ಎಂಬಂತಾಗಿದೆ. ಮಹಾಮಾರಿ ಕೊರೊನಾ ವೈರಸ್​ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಈ ಬಾರಿ ಗಣೇಶ ಉತ್ಸವಕ್ಕೆ ಬ್ರೇಕ್ ಬಿದ್ದಿದೆ. ಹೌದು, ಮುಂಬೈನ ಲಾಲ್​ಬಾಗುಚಾ ರಾಜ ಗಣೇಶೋತ್ಸವ ಮಂಡಲವು ಈ ವರ್ಷ ಗಣೇಶ ಉತ್ಸವ ಮಾಡುವುದಿಲ್ಲ ಎಂದಿದೆ.

ಪ್ರತಿ ಬಾರಿ ಉತ್ಸವ ನಡೆಯುತ್ತಿದ್ದ ಜಾಗದಲ್ಲಿ ಈ ಬಾರಿ ರಕ್ತದಾನ ಹಾಗೂ ಪ್ಲಾಸ್ಮಾ ಶಿಬಿರಗಳನ್ನು ಮಾಡಲು ನಿರ್ಧರಿಸಿದೆ. ಅಲ್ಲದೆ, ಗಣೇಶೋತ್ಸವಕ್ಕೆ ಖರ್ಚ ಮಾಡಬೇಕಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಡಲಾಗುವುದು. ಗಡಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೂ ಸಹಾಯ ಮಾಡುವುದಾಗಿ ತಿಳಿಸಿದೆ.

Published On - 12:44 pm, Wed, 1 July 20