AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಸಹವಾಸ ಮಾಡಿದ್ದು ತಪ್ಪಾಯ್ತು.. BJP ಯಲ್ಲಿ ಇದ್ದಿದ್ರೆ ಈಗ ನಾನೇ CM ಆಗಿರ್ತಿದ್ದೆ..’

ನಾನು ಒಂದೇ ತಿಂಗಳಲ್ಲಿ ಅಷ್ಟು ಕಣ್ಣೀರು ಹಾಕಲು ಕಾರಣ ಕಾಂಗ್ರೆಸ್. ಇವರು ಮಾಡುತ್ತಿರುವುದೆಲ್ಲ ಗೊತ್ತಾಗಿ ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜತೆ ಕೈಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು.

‘ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಸಹವಾಸ ಮಾಡಿದ್ದು ತಪ್ಪಾಯ್ತು.. BJP ಯಲ್ಲಿ ಇದ್ದಿದ್ರೆ ಈಗ ನಾನೇ CM ಆಗಿರ್ತಿದ್ದೆ..’
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
Lakshmi Hegde
| Updated By: ಸಾಧು ಶ್ರೀನಾಥ್​|

Updated on: Dec 05, 2020 | 4:33 PM

Share

ಮೈಸೂರು: ದೇವೇಗೌಡರ ಎಮೋಶನಲ್​ಗೆ ನಾನು ಟ್ರ್ಯಾಪ್​ ಆದೆ. ಅವರ ಮಾತು ಕೇಳಿ ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡು ಕಳೆದ 12 ವರ್ಷಗಳಲ್ಲಿ ಸಂಪಾದಿಸಿದ್ದ ಒಳ್ಳೆಯ ಹೆಸರನ್ನು ಹಾಳುಮಾಡಿಕೊಂಡೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಬಿಜೆಪಿಯವರು ನನಗೆ ಕಾಂಗ್ರೆಸ್ಸಿನವರಂತೆ ದ್ರೋಹ ಮಾಡಿರಲಿಲ್ಲ ನಗರದಲ್ಲಿ ಮಾತನಾಡಿ, ನಾನು ಬಿಜೆಪಿಯ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರೆ ರಾಜ್ಯದಲ್ಲಿ ಇಂದು ನಾನೇ ಮುಖ್ಯಮಂತ್ರಿಯಾಗಿ ಇರುತ್ತಿದ್ದೆ. ಆದರೆ ಕಾಂಗ್ರೆಸ್​ಗೆ ಸೇರಿದ ಮೇಲೆ ಸಿದ್ದರಾಮಯ್ಯನವರ ಗುಂಪು ನನ್ನ ಹೆಸರನ್ನು ಸರ್ವನಾಶ ಮಾಡಿಬಿಟ್ಟಿತು.

ಸಿದ್ದರಾಮಯ್ಯನವರು ಎಲ್ಲ  ಪ್ರೀಪ್ಲ್ಯಾನ್ ಮಾಡಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದರು​. ನಾನು ಕಾಂಗ್ರೆಸ್​ ಎಂಎಲ್​ಎಗಳಿಗೆ 19 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೆ. ಇವರು ಮಾತ್ರ ನನಗೆ ಸಹಕಾರ ಕೊಡಲಿಲ್ಲ. ಬಿಜೆಪಿಯವರು ನನಗೆ ಈ ಮಟ್ಟಿಗೆ ದ್ರೋಹ ಮಾಡಿರಲಿಲ್ಲ ಎಂದು ಹೇಳಿದರು.

ಕಣ್ಣೀರಿಗೆ ಕಾಂಗ್ರೆಸ್ ಕಾರಣ ನಾನು ಒಂದೇ ತಿಂಗಳಲ್ಲಿ ಅಷ್ಟು ಕಣ್ಣೀರು ಹಾಕಲು ಕಾರಣ ಕಾಂಗ್ರೆಸ್. ಇವರು ಮಾಡುತ್ತಿರುವುದೆಲ್ಲ ಗೊತ್ತಾಗಿ ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜತೆ ಕೈಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೆ ನಮಗೇನು ಸಿಗತ್ತೆ? ಯಡಿಯೂರಪ್ಪ 6 ತಿಂಗಳು ಸಿಎಂ ಆಗಿದ್ದುಕೊಂಡು ವಾಪಸ್ ಹೋಗುತ್ತಾರೆ. ಆಮೇಲೆ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಕನಸು ಕಂಡಿದ್ದರು. ಅದೇ ಭ್ರಮೆಯಲ್ಲೇ ಇದ್ದಾರೆ.

ಅವರು ಪಕ್ಷಕ್ಕಾಗಿ ಏನೂ ಮಾಡಿದವರು ಅಲ್ಲ. ಸ್ವಾರ್ಥಕ್ಕಾಗಿ ಏನು ಸಿಗತ್ತೆ ಎಂಬುದನ್ನು ನೋಡುತ್ತಾರೆ. ದೇವೇಗೌಡರ ಭಾವನಾತ್ಮಕತೆಯನ್ನು ದುರುಪಯೋಗಪಡಿಸಿಕೊಂಡರು ಎಂದು ಕಿಡಿಕಾರಿದರು. ಹಾಗೇ, ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಿದ್ದಾರೆ ಎಂಬುದನ್ನು ಆದಷ್ಟು ಬೇಗನೇ ಬಹಿರಂಗಪಡಿಸುತ್ತೇನೆ ಎಂದೂ ಹೇಳಿದರು.

ಇದು ನಮ್ಮ ಕುಟುಂಬಕ್ಕೆ ಇರುವ ಶಾಪ ರಾಜಕೀಯದಲ್ಲಿ ಅನಾಥರಾದಾಗ ಮರುಜೀವ ಕೊಟ್ಟವರ ಬಗ್ಗೆಯೇ ನಂತರ ಮಾತನಾಡುತ್ತಾರೆ ಎಂದು ಎಚ್​.ವಿಶ್ವನಾಥ್​ಗೆ ಟಾಂಗ್​ ನೀಡಿದ ಕುಮಾರಸ್ವಾಮಿ, ದೇವೇಗೌಡರ ಫೋಟೋ ಇಟ್ಟುಕೊಳ್ತೇನೆ ಎನ್ನುತ್ತಾರೆ. ಆದರೆ ನನ್ನನ್ನೇ ಟೀಕೆ ಮಾಡುತ್ತಾರೆ. ನಮ್ಮ ಕುಟುಂಬಕ್ಕೆ ಒಂದು ಶಾಪ ಇದೆ.. ನಾವು ಯಾರನ್ನು ಬೆಳೆಸುತ್ತೇವೋ ಅವರೇ ನಮ್ಮ ವಿರುದ್ಧ ಮಾತನಾಡುತ್ತಾರೆ. ಈ ಶಾಪ ವಿಮೋಚನೆ ಮಾಡಿಕೊಳ್ಳುವುದು ಹೇಗೆಂದು ಸಂಶೋಧನೆ ಮಾಡಬೇಕು ಎಂದರು.

ಕಾಂಗ್ರೆಸ್ ಸಹವಾಸ ಮಾಡಿದ ಮೇಲೆ ನಮ್ಮ ಪಕ್ಷದ ಶಕ್ತಿ ಕುಂದಿದೆ. ಆದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸಂಕ್ರಾಂತಿ ಬಳಿಕ ನಮ್ಮ ಪಕ್ಷದ ಪುನಃಶ್ಚೇತನ ಕಾರ್ಯ ಆರಂಭವಾಗಲಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ