‘ಅವನ್ಯಾವನ್ರಿ ಸಾ.ರಾ ಮಹೇಶ್?.. ಆ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳಲ್ಲ’

ಅವನ್ಯಾವೋನ್ರೀ ಸಾ.ರಾ. ಮಹೇಶ್. ಅವನ ಬಗ್ಗೆ ನಾನು ಏನೂ ಮಾತಾಡಲ್ಲ. ಆ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳಲ್ಲ. ಕೆಲವರು ಅನಾವಶ್ಯಕ ಮಾತಾಡ್ತಿದ್ದಾರೆ, ಮಾತಾಡ್ಲಿ, ತೊಂದ್ರೆ ಇಲ್ಲ ಎಂದು ಹೆಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

‘ಅವನ್ಯಾವನ್ರಿ ಸಾ.ರಾ ಮಹೇಶ್?.. ಆ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳಲ್ಲ’
ಹೆಚ್.ವಿಶ್ವನಾಥ್
Ayesha Banu

|

Dec 01, 2020 | 12:14 PM

ಬೆಂಗಳೂರು: ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ನಿನ್ನೆ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿತ್ತು. ಹೈಕೋರ್ಟ್ ತೀರ್ಪಿಗೆ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಈ ವಿಚಾರವಾಗಿ ಸುಮ್ಮನೆ ಕೂರಲ್ಲ, ಬದಲಿಗೆ ಸುಪ್ರೀಂಕೊರ್ಟ್ ಮೊರೆ ಹೋಗುತ್ತೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ.

ಪರಿಷತ್ ಆಯ್ಕೆಗೆ ನನ್ನ ಹೆಸರನ್ನು ಮೊದಲು ಕಳಿಸಲಾಗಿತ್ತು. ನನ್ನ ಹೆಸರು ಕೈಬಿಟ್ಟು ಹೈಕಮಾಂಡ್ ಬೇರೆಯವರಿಗೆ ನೀಡಿದೆ. ಕೊನೆಗೆ ಈ ಬಗ್ಗೆ ಪ್ರಸ್ತಾಪವಾಗಿ ನಾನು ಪ್ರಶ್ನೆ ಮಾಡಿದ್ದೆ. ರಾಜ್ಯದ ಜನತೆಗೆ ಇದೆಲ್ಲಾ ಗೊತ್ತಾಗಬೇಕಿದೆ. ನಾನು ರಾಜಕಾರಣವನ್ನು ಲಾಭ, ನಷ್ಟ, ಸೋಲು, ವ್ಯವಹಾರವಾಗಿ ತಗೊಂಡಿಲ್ಲ. ರಾಜಕೀಯ ನನಗೆ ಸಾಂಸ್ಕ್ರತಿಕವಾಗಿ ಸಮವಾಗಿದೆ. ಏನೋ ದೊಡ್ಡ ದುರಂತ ಆಗಿದೆ ಅಂತ ಭಾವಿಸಿಲ್ಲ ನಾನು. ತೀರ್ಪನ್ನು ಗೌರವದಿಂದ ಕಾಣ್ತೇನೆ. ಮುಂದೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅಪೀಲ್ ಹಾಕ್ತೇನೆ ಎಂದರು.

ಸಾ.ರಾ. ಮಹೇಶ್ ವಿರುದ್ಧ ವಿಶ್ವನಾಥ್ ಗರಂ: ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ, ಕುಟುಂಬ ರಾಜಕಾರಣ ಕೊನೆಗೊಳಿಸಲು ಬಿಜೆಪಿಗೆ ಬಂದ್ವಿ. ಕ್ಷಿಪ್ರ ಕ್ರಾಂತಿ ನಡೆದು ಬಿಜೆಪಿ ಸರ್ಕಾರ ಬಂತು. ನಾವು ಮಂತ್ರಿ ಆಗಬೇಕು ಅಂತ ಅಂದು ಬಯಸಿರಲಿಲ್ಲ. ಅವನ್ಯಾವೋನ್ರೀ ಸಾ.ರಾ. ಮಹೇಶ್. ಅವನ ಬಗ್ಗೆ ನಾನು ಏನೂ ಮಾತಾಡಲ್ಲ. ಆ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳಲ್ಲ. ಕೆಲವರು ಅನಾವಶ್ಯಕ ಮಾತಾಡ್ತಿದ್ದಾರೆ, ಮಾತಾಡ್ಲಿ, ತೊಂದ್ರೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಹೆಚ್.ವಿಶ್ವನಾಥ್ ಅಸಮಾಧಾನ: ರಾಜ್ಯದಲ್ಲಿ ನಮ್ಮಿಂದ ಸರ್ಕಾರ ಬಂದರೂ ನಮ್ಮ ಜತೆ ನಿಲ್ಲಲಿಲ್ಲ. ನನ್ನ ಹೆಸರು ಪರಿಷತ್ ಚುನಾವಣೆ ವೇಳೆ ಯಾಕೆ ತೆಗೆದರು? ನನ್ನ ಅನುಭವ ಬಳಸಿಕೊಳ್ಳಬಹುದಿತ್ತು ಎಂದು ಬಿಜೆಪಿ ನಾಯಕರ ವಿರುದ್ಧ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನು ಹಾಕಿದ್ದ ಕಣ್ಣೀರಿಗೆ ಶಕ್ತಿದೇವತೆ ಉತ್ತರ ಕೊಟ್ಟಿದ್ದಾಳೆ: ವಿಶ್ವನಾಥ್ ಅನರ್ಹತೆ ತೀರ್ಪಿಗೆ ಸಾ.ರಾ.ಮಹೇಶ್​ ಪ್ರತಿಕ್ರಿಯೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada