AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್.ವಿಶ್ವನಾಥ್​ ಸೀಜ್​ ಆಗಿರೋ ಎಂಜಿನ್ ಇದ್ದಂತೆ: ಸಾ.ರಾ.ಮಹೇಶ್ ಟೀಕೆ

ವಿಶ್ವನಾಥ್ ವಿರುದ್ದ ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರೇ ಯಾರೋ ಒಬ್ಬರು ನ್ಯಾಯಾಲಯಕ್ಕೆ‌ ಹೋಗಿ ಕೇಸ್ ಹಾಕಿದ್ದಾರೆ. ಅವರೇ ಲಾಯರ್ ಫೀಸ್​ ಕೊಟ್ಟು ಕೇಸ್ ನಡೆಸಿದ್ದಾರೆ. ಈ ಬಗ್ಗೆ ಅನುಮಾನ ಇದ್ದರೆ ಬಿಜೆಪಿಯವರು ಯಾರಿಂದಲಾದರೂ ಮಾಹಿತಿ ತರಿಸಿಕೊಳ್ಳಲಿ.

ಎಚ್.ವಿಶ್ವನಾಥ್​ ಸೀಜ್​ ಆಗಿರೋ ಎಂಜಿನ್ ಇದ್ದಂತೆ: ಸಾ.ರಾ.ಮಹೇಶ್ ಟೀಕೆ
ಎಚ್​.ವಿಶ್ವನಾಥ್, ಸಾ.ರಾ.ಮಹೇಶ್​
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 01, 2020 | 12:09 PM

Share

ಮೈಸೂರು: ಜೆಡಿಎಸ್ ಇಲ್ಲದೇ ಕಾಂಗ್ರೆಸ್ ಪಕ್ಷ ಇಲ್ಲ ಎಂಬುದನ್ನು ಸಿದ್ದರಾಮಯ್ಯ ಸದಾ ನೆನಪಿಟ್ಟುಕೊಳ್ಳಬೇಕು ಎಂದು ಜೆಡಿಎಸ್​ ಮುಖಂಡ, ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್​ಗೆ ನಷ್ಟವಾಯಿತು ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು ಕಾಂಗ್ರೆಸ್​ನವರೇ ಮೈತ್ರಿ ಮುರಿಯಲು ಕಾರಣ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ

ಯಾರಿಗೆ ಎಷ್ಟು ಕೊಟ್ಟಿದ್ದೀರಿ ಅಂತ ಸಿದ್ದರಾಮಯ್ಯ ಸಿಕ್ಕಾಗ ನೇರವಾಗಿ ಕೇಳ್ತೀನಿ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್​ನವರು ಕೆಲಸ ಶುರುಮಾಡಿದ್ದೇ ಬಿರುಕು ಮೂಡಲು ಕಾರಣ. ಹಾಗೆ ಕುತಂತ್ರ ಮಾಡದೇ ಇದ್ದಿದ್ದರೆ ಕಾಂಗ್ರೆಸ್, ಜೆಡಿಎಸ್ ಎರಡೂ ಗೆಲುವು ಕಾಣಬಹುದಿತ್ತು ಎಂದು ಮಹೇಶ್ ಹೇಳಿದರು.

ಜಿ.ಟಿ.ದೇವೇಗೌಡರಿಗೆ ಹಣ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಹಣಕಾಸಿನ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾವತ್ತಾದರೂ ಎದುರು ಸಿಕ್ಕರೆ ಯಾರ್ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದನ್ನು ಕೇಳುತ್ತೇನೆ ಎಂದಿದ್ದಾರೆ.

ಹಾಲು ಕೊಡೋ ಹಸು ಕೊಟ್ಟು, ಒದೆಯೋ ಕೋಣ ಕರ್ಕೊಂಡು ಬಂದ್ರು ವಿಶ್ವನಾಥ್ ಎಚ್​.ವಿಶ್ವನಾಥ್ ಅವರನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸತ್ತೆ. ವಿಶ್ವನಾಥ್ ಪರಿಸ್ಥಿತಿ ಈಗ ಹಾಲು ಕೊಡೋ ಹಸು ಕೊಟ್ಟು, ಒದೆಯೋ ಕೋಣ ಕರ್ಕೊಂಡು ಬಂದ್ರು ಅನ್ನೋ ಗಾದೆ ಥರ ಆಗಿದೆ. ಜನ ನೀಡಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಈಗ ಯಾವ ಸ್ಥಾನವೂ ಇಲ್ಲದೇ ಖಾಲಿ ಕೂತಿದ್ದಾರೆ. ಅವರಿಗೆ ಹೀಗಾಗಿದ್ದು ನನಗೆ ಬೇಸರ ತಂದಿದೆ ಎಂದು ವ್ಯಂಗ್ಯವಾಡಿದರು.

ಹಳ್ಳಿಹಕ್ಕಿಯ ರೆಕ್ಕೆ ಕತ್ತರಿಸ್ತಾ ಇರೋದು ಬಿಜೆಪಿಯವರೇ ವಿಶ್ವನಾಥ್ ವಿರುದ್ದ ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರೇ ಯಾರೋ ಒಬ್ಬರು ನ್ಯಾಯಾಲಯಕ್ಕೆ‌ ಹೋಗಿ ಕೇಸ್ ಹಾಕಿದ್ದಾರೆ. ಅವರೇ ಲಾಯರ್ ಫೀಸ್​ ಕೊಟ್ಟು ಕೇಸ್ ನಡೆಸಿದ್ದಾರೆ. ಈ ಬಗ್ಗೆ ಅನುಮಾನ ಇದ್ದರೆ ಬಿಜೆಪಿಯವರು ಯಾರಿಂದಲಾದರೂ ಮಾಹಿತಿ ತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಎಚ್.ವಿಶ್ವನಾಥ್ ಸೀಜ್ ಆಗಿರೋ ಎಂಜಿನ್​, ಕೋಗಿಲೆ ಅಲ್ಲ ಕಾಗೆ ಬಿಜೆಪಿಯವರಿಗೆ ವಿಶ್ವನಾಥ್‌ರನ್ನ ಮಂತ್ರಿ ಮಾಡುವ ಉದ್ದೇಶ ಇರಲಿಲ್ಲ. ಮೇಲ್ನೋಟಕ್ಕೆ ಅಯ್ಯೋ ಪಾಪ ಎನ್ನುತ್ತಿರುವ ಬಿಜೆಪಿಯವರಿಗೆ ಒಳಗೊಳಗೇ ಖುಷಿಯಾಗ್ತಾ ಇರುತ್ತೆ ಎಂದು ಹೇಳಿರುವ ಅವರು ಇಂಜಿನ್ ಸೀಜ್ ಆಗಿ ನಿಂತಿದ್ದ ಗಾಡಿಯನ್ನ ತಂದು ಬಣ್ಣ ಬಳಿದು ರೆಡಿ ಮಾಡಿದ್ವಿ. ಕಾಗೆಯನ್ನ ಕೋಗಿಲೆ ಅಂತ ಹೇಳಿ ಜನರನ್ನ ನಂಬಿಸಿದ್ವಿ. ಆದರೆ, ಈಗ ಎಲ್ಲವೂ ಮುಗಿದ ಅಧ್ಯಾಯ ಅವರು ಇನ್ನೇನಿದ್ರೂ ಮಾಜಿ ವಿಧಾನಪರಿಷತ್ ಸದಸ್ಯ ಅಷ್ಟೇ ಎಂದು ಲೇವಡಿ ಮಾಡಿದರು.

ಇನ್ನಷ್ಟು…

‘ಅವನ್ಯಾವನ್ರಿ ಸಾ.ರಾ ಮಹೇಶ್?.. ಆ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳಲ್ಲ’ ನಾನು ಹಾಕಿದ್ದ ಕಣ್ಣೀರಿಗೆ ಶಕ್ತಿದೇವತೆ ಉತ್ತರ ಕೊಟ್ಟಿದ್ದಾಳೆ: ವಿಶ್ವನಾಥ್ ಅನರ್ಹತೆ ತೀರ್ಪಿಗೆ ಸಾ.ರಾ.ಮಹೇಶ್​ ಪ್ರತಿಕ್ರಿಯೆ