ಹಾಸನ: 12 ದಿನಗಳ ಹಾಸನಾಂಬೆ ದೇಗುಲದ ವಿಜೃಂಭಣೆಯ ದರ್ಶನೋತ್ಸವಕ್ಕೆ ನಿನ್ನೆ ತೆರೆ ಬಿದಿದ್ದು, ಇಂದು ದೇವಾಲಯದ ಹುಂಡಿ ಎಣಿಕೆ ಕಾರ್ಯವನ್ನು ಆಯೋಜಿಸಲಾಗಿತ್ತು. ಆದರೆ ಬೇಸರದ ಸಂಗತಿಯೆಂದರೆ ಈ ಬಾರಿ ಹಾಸನಾಂಬೆ ಕಾಣಿಕೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.
ಕೇವಲ 21 ಲಕ್ಷ
ಈ ಬಾರಿ ಕೇವಲ 21,34,052 ರೂ ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ ಸಿದ್ದೇಶ್ವರ ದೇವಾಲಯದಿಂದ 1,45,720 ರೂ ಕಾಣಿಕೆ ಸಂಗ್ರಹವಾಗಿದೆ. ಒಟ್ಟು 22,79,772 ರೂ ಹಣ ಈ ಬಾರಿ ಹಾಸನಾಂಬೆಗೆ ಕಾಣಿಕೆಯಾಗಿ ಹರಿದುಬಂದಿದೆ. ಕಳೆದ ಬಾರಿ ಹಾಸನಾಂಬೆ ಹುಂಡಿಯಿಂದಲೇ 1,31,24,424 ರೂ ಹಣ ಸಂಗ್ರಹವಾಗಿತ್ತು.
ಕಳೆದ ಬಾರಿ ಮೂರೂವರೆ ಕೋಟಿ ಆದಾಯ ಕಳೆದ ಬಾರಿ ವಿಶೇಷ ದರ್ಶನ, ಪ್ರಸಾದ ಮಾರಾಟ ಸೇರಿ ಒಟ್ಟು ಮೂರೂವರೆ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಭಕ್ತರಿಗೆ ದರ್ಶನಕ್ಕೆ ನಿರ್ಬಂಧ ಹಿನ್ನೆಲೆಯಲ್ಲಿ ಮೂರು ಕೋಟಿ ರೂಪಾಯಿಗೂ ಅಧಿಕ ಆದಾಯಕ್ಕೆ ಬ್ರೇಕ್ ಬಿದ್ದಿದೆ. ಹಾಸನಾಂಬೆಯ 12 ದಿನಗಳ ದರ್ಶನದಿಂದ ಒಟ್ಟು 22,79,772 ರೂ ಸಂಗ್ರಹವಾಗಿದೆ. ಕಾಣಿಕೆ ಸಂಗ್ರಹದ ಬಗ್ಗೆ ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.