ಕಪಾಳಕ್ಕೆ ಹೊಡೆದುಕೊಂಡ ಮಾಜಿ ಪ್ರಧಾನಿ ದೇವೇಗೌಡ!

ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಟೀಕಿಸಿದ ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ವಿಷಯದಲ್ಲಿ ಸದಾನಂದ ಗೌಡರಿಗೆ ಮಾತ್ರವಲ್ಲ ಇಡೀ ಬಿಜೆಪಿಗೆ ಸುಪ್ರೀಂ ಕೋರ್ಟ್​ನಿಂದ ಕಪಾಳಮೋಕ್ಷವಾಗಿದೆ ಎಂದು ದೇವೇಗೌಡರು ಹೇಳಿದರು. ಅವರು ನಮಗೇನು ಹೇಳೋದು, ಬಿಜೆಪಿಯ ದೊಡ್ಡವರಿಗೂ ಕಪಾಳಮೋಕ್ಷವಾಗಿದೆ. ಅದೇ ಸಾಕು ಅವ್ರಿಗೆ ಎಂದು ಹೇಳುತ್ತಾ  ದೇವೇಗೌಡರು ಅಂಗಿಕವಾಗಿ ತಮ್ಮ ಕಪಾಳಕ್ಕೆ ಹೊಡೆದುಕೊಂಡು ತೋರಿಸಿದರು. ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್, ನಿಮ್ಮಂತೆ ಎಲ್ಲದಕ್ಕೂ ಹಲ್ಲು ಬಿಟ್ಕೊಂಡಿರಕ್ಕಾಗಲ್ಲ: […]

ಕಪಾಳಕ್ಕೆ ಹೊಡೆದುಕೊಂಡ ಮಾಜಿ ಪ್ರಧಾನಿ ದೇವೇಗೌಡ!
ಸಾಧು ಶ್ರೀನಾಥ್​

Updated on: Nov 28, 2019 | 4:17 PM

ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಟೀಕಿಸಿದ ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ವಿಷಯದಲ್ಲಿ ಸದಾನಂದ ಗೌಡರಿಗೆ ಮಾತ್ರವಲ್ಲ ಇಡೀ ಬಿಜೆಪಿಗೆ ಸುಪ್ರೀಂ ಕೋರ್ಟ್​ನಿಂದ ಕಪಾಳಮೋಕ್ಷವಾಗಿದೆ ಎಂದು ದೇವೇಗೌಡರು ಹೇಳಿದರು. ಅವರು ನಮಗೇನು ಹೇಳೋದು, ಬಿಜೆಪಿಯ ದೊಡ್ಡವರಿಗೂ ಕಪಾಳಮೋಕ್ಷವಾಗಿದೆ. ಅದೇ ಸಾಕು ಅವ್ರಿಗೆ ಎಂದು ಹೇಳುತ್ತಾ  ದೇವೇಗೌಡರು ಅಂಗಿಕವಾಗಿ ತಮ್ಮ ಕಪಾಳಕ್ಕೆ ಹೊಡೆದುಕೊಂಡು ತೋರಿಸಿದರು.

ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್, ನಿಮ್ಮಂತೆ ಎಲ್ಲದಕ್ಕೂ ಹಲ್ಲು ಬಿಟ್ಕೊಂಡಿರಕ್ಕಾಗಲ್ಲ:
ತಮ್ಮ ಕಣ್ಣೀರಿನ ಬಗ್ಗೆ ವ್ಯಂಗ್ಯವಾಡಿದ್ದ ಸದಾನಂದ ಗೌಡರಿಗೆ ಕುಮಾರಸ್ವಾಮಿ ಸಹ ತಿರುಗೇಟು ನೀಡಿದ್ರು. ‘ಹೌದು, ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್’ ಸದಾನಂದ ಗೌಡರಂತೆ ಎಲ್ಲದಕ್ಕೂ ಹಲ್ಲು ಬಿಟ್ಕೊಂಡಿರಕ್ಕಾಗಲ್ಲ. ನಿಮ್ಮಂತೆ ವಿಕ್ಸ್, ಗ್ಲಿಸರಿನ್ ಹಾಕಿ ಕಣ್ಣೀರು ಹಾಕೋ ಅವಶ್ಯಕತೆ ನಮಗೆ ಇಲ್ಲ ಎಂದು ಸದಾನಂದ ಗೌಡ ಟೀಕೆಗೆ ಹೆಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

Published On - 1:50 pm, Thu, 28 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us