ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು, ಮಗನ ಸೋಲನ್ನು ನೆನೆದು ಭಾವುಕರಾದ ಹೆಚ್‌ಡಿಕೆ

ಮಂಡ್ಯ: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಗನ ಸೋಲನ್ನು ಮರೆತಿಲ್ಲ. ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮಗನ ಸೋಲು ನೆನೆದು ಭಾವುಕರಾಗಿದ್ದಾರೆ. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬ್ಯಾಡರಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಮಗನ ಸೋಲನ್ನು ನೆನಪಿಸಿಕೊಂಡು‌ ಭಾವುಕರಾದ್ರು. ನಿಖಿಲ್‌ ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿದ್ದೆ. ಆದ್ರೆ ಎಲ್ಲರೂ ಸೇರಿ ನಿಖಿಲ್‌ನನ್ನು ಚುನಾವಣೆಗೆ ನಿಲ್ಲಿಸಿದ್ರು. ಎಲ್ಲರೂ ಸೇರಿ ನಮ್ಮನ್ನ ಸೋಲಿಸಬೇಕೆಂದು ಸೋಲಿಸಿದ್ರು. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು. ಆದರೂ ನಮಗೆ […]

ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು, ಮಗನ ಸೋಲನ್ನು ನೆನೆದು ಭಾವುಕರಾದ ಹೆಚ್‌ಡಿಕೆ

Updated on: Nov 22, 2020 | 10:04 AM

ಮಂಡ್ಯ: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಗನ ಸೋಲನ್ನು ಮರೆತಿಲ್ಲ. ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮಗನ ಸೋಲು ನೆನೆದು ಭಾವುಕರಾಗಿದ್ದಾರೆ. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬ್ಯಾಡರಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಮಗನ ಸೋಲನ್ನು ನೆನಪಿಸಿಕೊಂಡು‌ ಭಾವುಕರಾದ್ರು. ನಿಖಿಲ್‌ ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿದ್ದೆ. ಆದ್ರೆ ಎಲ್ಲರೂ ಸೇರಿ ನಿಖಿಲ್‌ನನ್ನು ಚುನಾವಣೆಗೆ ನಿಲ್ಲಿಸಿದ್ರು. ಎಲ್ಲರೂ ಸೇರಿ ನಮ್ಮನ್ನ ಸೋಲಿಸಬೇಕೆಂದು ಸೋಲಿಸಿದ್ರು. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು. ಆದರೂ ನಮಗೆ ಮಂಡ್ಯ ಜಿಲ್ಲೆಯ ಬಗ್ಗೆ ಬೇಸರವಿಲ್ಲ. ಮಂಡ್ಯ ಜಿಲ್ಲೆಯ ಜನರು ಮುಗ್ಧರು ಎಲ್ಲರನ್ನೂ ನಂಬುತ್ತಾರೆ. ಮಂಡ್ಯವನ್ನು ಹೆಚ್‌ಡಿಡಿ ಕುಟುಂಬ ಎಂದೂ ಮರೆಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮನಸ್ಸಿನ ಕೊರಗನ್ನು ಬಿಚ್ಚಿಟ್ರು.

ನಾನು ರಾಜಕೀಯದಿಂದ ನಿವೃತ್ತಿಯಾಗಬೇಕೆಂದುಕೊಂಡಿದ್ದೆ. ಆದ್ರೆ ಜನರು ನಮಗೆ ತೋರಿಸುವ ಪ್ರೀತಿ ನೋಡಿದಾಗ ನಿವೃತ್ತಿಯಾದ್ರೆ ಅವರಿಗೆ ಅನ್ಯಾಯ ಮಾಡಿದಂತೆ ಅನಿಸುತ್ತೆ. ಈ ಕಾರಣಕ್ಕಾಗಿಯೇ ರಾಜಕೀಯದಲ್ಲಿ ಮುಂದುವರಿದಿದ್ದೇನೆ. ವೈಯುಕ್ತಿಕವಾಗಿ ರಾಜಕೀಯದಲ್ಲಿ ಮುಂದುವರೆಯುವ ಆಸೆ ಇಲ್ಲ ಎಂದು ಹೇಳಿದ್ರು.