AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಕೆಜಿ 55 ಗ್ರಾಂ ಚಿನ್ನಾಭರಣ ಜಪ್ತಿ ಕೇಸ್: ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

ಬೆಂಗಳೂರು: ರಾಜಧಾನಿಯಲ್ಲಿ 6 ಕೆಜಿ 55 ಗ್ರಾಂ ಚಿನ್ನಾಭರಣ ಜಪ್ತಿ ಕೇಸ್​ಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ₹3 ಕೋಟಿ ಮೌಲ್ಯದ ಬಂಗಾರದ ಓಡವೆಗಳನ್ನ ತಂದಿದಾದ್ರೂ ಎಲ್ಲಿಂದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿನ್ನೆ ರಾತ್ರಿ ಗಸ್ತಿನಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಿ ದಾಖಲೆರಹಿತ ಚಿನ್ನದಾಭರಣಗಳನ್ನು ಜಪ್ತಿ ಮಾಡಿದ ಪಿಎಸ್ಐ ಶ್ರೀಮತಿ ಸವಿತಾ, ಕಾನ್ಸ್ಟೇಬಲ್ಸ್ ಆನಂದ ಹಾಗೂ ಹನಮಂತರವರನ್ನು @DCPWestBCP ಕಛೇರಿಯಲ್ಲಿ ಅಭಿನಂದಿಸಲಾಯಿತು. @acpchikpete @CityMarketPS1 ಹಾಜರಿದ್ದರು.@CPBlr @DgpKarnataka @BlrCityPolice @AddlCPWest pic.twitter.com/ChdQqDpqJB — […]

6 ಕೆಜಿ 55 ಗ್ರಾಂ ಚಿನ್ನಾಭರಣ ಜಪ್ತಿ ಕೇಸ್: ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ
ಆಯೇಷಾ ಬಾನು
|

Updated on:Nov 22, 2020 | 11:22 AM

Share

ಬೆಂಗಳೂರು: ರಾಜಧಾನಿಯಲ್ಲಿ 6 ಕೆಜಿ 55 ಗ್ರಾಂ ಚಿನ್ನಾಭರಣ ಜಪ್ತಿ ಕೇಸ್​ಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ₹3 ಕೋಟಿ ಮೌಲ್ಯದ ಬಂಗಾರದ ಓಡವೆಗಳನ್ನ ತಂದಿದಾದ್ರೂ ಎಲ್ಲಿಂದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮುಂಬೈನಿಂದ ಬೆಂಗಳೂರಿಗೆ 6 ಕೆಜಿ 55 ಗ್ರಾಂ ಚಿನ್ನಾಭರಣವನ್ನು ತರಲಾಗಿತ್ತು. ಕೊರಿಯರ್ ಮೂಲಕ ಚಿನ್ನ ಬಂದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆದರೆ ಬೇರೆ ಯಾವ ಮಾಹಿತಿಯನ್ನು ಬಾಯ್ಬಿಟ್ಟಿಲ್ಲ. ಯಾವ ಕೊರಿಯರ್, ಯಾರಿಗೆ ಯಾವಾಗ ಬಂತು ಅನ್ನೋದು ತಿಳಿದು ಬಂದಿಲ್ಲ. 6 ಕೆಜಿ 55 ಗ್ರಾಂ ಚಿನ್ನಾಭರಣ ಯಾರಿಗೆ ಸೇರಿದ್ದು ಅಂತಾನು ಬಾಯ್ಬಿಡುತ್ತಿಲ್ಲ. 65 ನೆಕ್ಲೇಸ್ , 7 ಜತೆ ಬಳೆ, 150 ಗ್ರಾಂ ಓಲೆ ಎಲ್ಲವೂ ಬೇರೆ ಬೇರೆ ಡಿಸೈನ್​ಗಳಿದ್ದು ಈ ಎಲ್ಲಾ ಆಭರಣಗಳು ಸ್ಯಾಂಪಲ್ಸ್ ಅನ್ನೋ ಮಾಹಿತಿ ತನಿಖೆ ವೇಳೆ ಪತ್ತೆಯಾಗಿದೆ.

ನೈಟ್ ಬೀಟ್ ಗೋಲ್ಡ್ ಕೇಸ್‌ ನಲ್ಲಿ IT ಇಲಾಖೆ ಎಂಟ್ರಿ: ಜಪ್ತಿಯಾದ 6 ಕೆಜಿ 55 ಗ್ರಾಂ ಚಿನ್ನಾಭರಣ ಬಗ್ಗೆ ತನಿಖೆ ವೇಳೆಯೂ ಸೂಕ್ತ ದಾಖಲಾತಿ ಒದಗಿಸದ ಹಿನ್ನೆಲೆಯಲ್ಲಿ ಸೋಮವಾರ ಐಟಿಗೆ ಪತ್ರ ಬರೆಯಲು ಪಶ್ಚಿಮ ವಿಭಾಗ ಡಿಸಿಪಿ ಚಿಂತಿಸಿದ್ದಾರೆ. ಸೂಕ್ತ ದಾಖಲೆ, ಬಿಲ್ ಇಲ್ಲದೆ ಸಾಗಾಟ ಮಾಡಿರುವ ಬಗ್ಗೆ ಪತ್ರ ಬರೆಯಲಿದ್ದು ಸೂಕ್ತ ತನಿಖೆ ನಡೆಸುವಂತೆ ಪತ್ರದಲ್ಲಿ ಬರೆಯಲಿದ್ದಾರೆ.

ಇದನ್ನೂ ಓದಿ: KR Market ನೈಟ್​ ಬೀಟ್​ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನ, ಎಲ್ಲಿ.. ಎಲ್ಲಿ? ನೀವೂ ನೋಡಿ..

Published On - 8:39 am, Sun, 22 November 20