
ಬೆಂಗಳೂರು: ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧವೂ ನಾನು ಹೋರಾಟ ಮಾಡಿದ್ದೆ ಎಂದು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಎರಡು ಸೂಟ್ಕೇಸ್ಗಳಲ್ಲಿ ದಾಖಲೆಗಳನ್ನು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಬಿಡುಗಡೆ ಮಾಡಿದ್ದೆವು. ಈಗ ವೀರಶೈವ ಸಮುದಾಯಕ್ಕೆ ಒಂದು ವಿಷಯ ಹೇಳುತ್ತೇನೆ. ನನಗೂ, ಸಿಎಂ ಯಡಿಯೂರಪ್ಪಗೆ ವೈಯಕ್ತಿಕ ದ್ವೇಷ ಇಲ್ಲ. ಯಡಿಯೂರಪ್ಪ ಅವರ ಹಿಂದಿನ ಸರ್ಕಾರದಲ್ಲಿ ಲೂಟಿ ನಡಿಯುತಿತ್ತು ಎಂದರು.
ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾಗ ದನಿ ಎತ್ತಿದ್ದೆ. ಅವತ್ತು ನಾನು ದಾಖಲೆಗಳನ್ನು ಬಿಡುಗಡೆ ಮಾಡಿದ್ದೆ. ಆಗ ಸಿದ್ದರಾಮಯ್ಯ ಸಹ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದರು ಎಂದು ಹೇಳಿದರು. ರೀಡು ಪ್ರಕರಣ ಪ್ರಸ್ತಾಪಿಸುತ್ತಿದ್ದಂತೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಸುಮ್ಮನೆ ಕುಳಿತುಕೊಂಡರು ಎಂದು ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು
ನಮ್ಮಲ್ಲಿ ಶಕ್ತಿ ಇದೆ, ಏಕತೆ ಇಲ್ಲ
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಮಗೆ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ಮುಖ್ಯ. ನಾವು ಹಿಂದೆ ಬಿದ್ದಿಲ್ಲ ಎಂದು ಸಾಬೀತು ಮಾಡಬೇಕು. ನಮ್ಮಲ್ಲಿ ಶಕ್ತಿ ಇದೆ, ಆದರೆ ಏಕತೆ ಇಲ್ಲ. ಸೀಟ್ ಹಂಚಿಕೆ ವೇಳೆ ಸಣ್ಣಪುಟ್ಟ ವ್ಯತ್ಯಾಸ ಆಗಬಹುದು. ಅದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳಬೇಡಿ. ನಾನು ನಿಮಗೆ ಮಾರ್ಗದರ್ಶನ ಮಾಡಬಹುದು ಅಷ್ಟೇ. ಎಲ್ಲಾ ಕಡೆ ಪ್ರವಾಸ ಮಾಡಲು ಆಗಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ನಾಯಕರ ಮೀಸಲಾತಿ ಒತ್ತಾಯವನ್ನು ‘ರಾಜಕೀಯ ಷಡ್ಯಂತ್ರ’ ಎಂದ ಸಿದ್ದರಾಮಯ್ಯ