Sign In

By signing in or creating an account, you agree with Associated Broadcasting Company's Terms & Conditions and Privacy Policy.

HD Kumaraswamy: ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು

HD Kumaraswamy: ಮಸ್ಕಿ, ಬಸವಕಲ್ಯಾಣ, ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್​​ನಿಂದ ಅಭ್ಯರ್ಥಿ ಹಾಕುತ್ತೇವೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

HD Kumaraswamy: ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (ಫೈಲ್ ಚಿತ್ರ)
Follow us
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 14, 2021 | 5:06 PM

ಬೆಂಗಳೂರು: ನಾವು ಅಭ್ಯರ್ಥಿ ಹಾಕಿಲ್ಲವೆಂದರೇ ಸಿದ್ದರಾಮಯ್ಯರವರಿಗೆ ಏಕೆ ತಲೆಬಿಸಿ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಉತ್ತರ ಕರ್ನಾಟಕ ಭಾಗಕ್ಕೆ ಹಸಿರು ತಂದುಕೊಟ್ಟ ಪಕ್ಷವಾಗಿದೆ. ಸಿದ್ದರಾಮಯ್ಯ ಪಕ್ಷ ಕಟ್ಟಲು ಆಗದೆ ದೇವೇಗೌಡರಿಗೆ ಮೋಸ ಮಾಡಿ ಕಾಂಗ್ರೆಸ್​ಗೆ ಹೋದರು. ಹೀಗಾಗಿ ಒಂದು ಪಕ್ಷವನ್ನು ಕಟ್ಟಿ ಎಂದು ಸವಾಲು ಹಾಕಿದ್ದೆ. ಸಿದ್ದರಾಮಯ್ಯಗೆ ತಾಕತ್ತಿದ್ದರೆ ಒಂದು ಪಕ್ಷ ಕಟ್ಟಿ ತೋರಿಸಲಿ. ದೇವೇಗೌಡರು ಪ್ರಧಾನಿಯಾಗಲು ಯಾರ ಕೈಕಾಲೂ ಹಿಡಿಯಲಿಲ್ಲ. ನಾವು ಕಾಂಗ್ರೆಸ್​ನವರಿಗೆ ಪ್ರಧಾನಿ ಮಾಡಿ ಅಂತಾ ಹೇಳಿದ್ದೇವಾ ಎಂದು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಕೇಳಿದರು.

ರಾಜ್ಯದಲ್ಲಿ ಅನಿವಾರ್ಯವಾಗಿ ನಾವು ಮೈತ್ರಿ ಮಾಡಿಕೊಂಡಿದ್ದೆವು. 14 ತಿಂಗಳ ನನ್ನ ಆಡಳಿತದ ಬಗ್ಗೆ ಹಲವರು ಟೀಕೆ ಮಾಡಿದ್ದಾರೆ. ಮೊನ್ನೆ ಸಹಕಾರ ಮಂತ್ರಿ ಒಂದು ಭಾಷಣ ಮಾಡಿದ್ದಾರೆ. ಭಾಷಣದಲ್ಲಿ ಯಾವ ರೈತರೂ ಅರ್ಜಿ ಹಾಕಿಲ್ಲ ಎಂದು ಹೇಳಿದ್ದಾರೆ. ಈ ಮಾತನ್ನು ನಂಬುವುದಕ್ಕೆ ಸಾಧ್ಯವೇ ಎಂದು ಹೇಳಿದರು. ಅಲ್ಲದೇ ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಹಕಾರ ಇರಲಿಲ್ಲ. ಆದರೂ ರೈತರಿಗೆ ಕೊಟ್ಟ ಸಾಲ ಮನ್ನಾ ಭರವಸೆ ಈಡೇರಿಸಿದೆವು. ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕಾರ್ಯಕ್ರಮಗಳನ್ನು ತಂದೆವು. ನಮ್ಮ ಸರ್ಕಾರ ಸಾಲ ಮನ್ನಾಗೆ ಮಾತ್ರ ಸೀಮಿತವಾಗಿರಲಿಲ್ಲ. ರೈತರು ಬೆಳೆದ ಬೆಳೆ ಸಂಗ್ರಹಕ್ಕೆ ಶೈತ್ಯಾಗಾರಗಳನ್ನು ಮಾಡಿದ್ದೆವು. ಶೇ 3ರ ಬಡ್ಡಿದರದಲ್ಲಿ ಗೃಹಲಕ್ಷ್ಮಿ ಸಾಲ ಯೋಜನೆ ತಂದೆವು ಎಂದು ಹೇಳಿದರು.

ಸರ್ಕಾರದ ವಿರುದ್ಧ ಆರೋಪ ರಾಜ್ಯದಲ್ಲಿ ಮೊದಲ ಬಾರಿಗೆ  ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ 1,000 ಕರ್ನಾಟಕ  ಪಬ್ಲಿಕ್ ಶಾಲೆ ಮಾಡಿದ್ದೆವು. ಈಗ ಕೊರೊನಾದಿಂದ ಶಾಲೆಗಳು ಮತ್ತು ಸರ್ಕಾರದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಖಾಸಗಿ ಶಾಲೆಗಳಲ್ಲಿ ಬಡವರು ಮಕ್ಕಳನ್ನು ಓದಿಸುವುದಕ್ಕೆ ಕಷ್ಟವಾದ್ದರಿಂದ ಸರ್ಕಾರದಿಂದಲೇ ಪಬ್ಲಿಕ್ ಶಾಲೆ ಯೋಜನೆ ತಂದೆವು. ಆದರೆ ಬಿಜೆಪಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಮುಂದುವರೆಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು.

ಇದನ್ನೂ ಓದಿ: ಬಿಜೆಪಿ ನಾಯಕರ ಮೀಸಲಾತಿ ಒತ್ತಾಯವನ್ನು ‘ರಾಜಕೀಯ ಷಡ್ಯಂತ್ರ’ ಎಂದ ಸಿದ್ದರಾಮಯ್ಯ

ರಾಜಿ ಮಾಡಿಕೊಂಡಿಲ್ಲ ಎಂದ ಹೆಚ್​ಡಿಕೆ ಮಸ್ಕಿ, ಬಸವಕಲ್ಯಾಣ, ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್​​ನಿಂದ ಅಭ್ಯರ್ಥಿ ಹಾಕುತ್ತೇವೆ ಎಂದು ತಿಳಿಸಿದ ಕುಮಾರಸ್ವಾಮಿ ನಾನು ಬಿಜೆಪಿ ಬಗ್ಗೆ ಯಾವುದೇ ಮೃದು ಧೋರಣೆಯನ್ನು ತಾಳಿಲ್ಲ. ನಾವು ಯಾವುದೇ ಪಕ್ಷದ ಜೊತೆ ರಾಜಿ ಮಾಡಿಕೊಂಡಿಲ್ಲ ಎಂದರು. ಹೆಚ್.ಡಿ.ದೇವೇಗೌಡರಿಗೆ ರೈತರ ಬಗ್ಗೆ ಇನ್ನೂ ಕಳಕಳಿ ಇದೆ. ರೈತರ ಮೇಲಿನ ಈ ಕಳಕಳಿ ದೂರ ಮಾಡಲು ಆಗುವುದಿಲ್ಲ. ಇದನ್ನು ಆರೂವರೆ ಕೋಟಿ ಜನ ಅರ್ಥ ಮಾಡಿಕೊಳ್ಳಬೇಕೆಂದರು.