ಬೀದರ್​ನಲ್ಲಿ ವಾರಿಯರ್ಸ್​ಗೂ ವಕ್ಕರಿಸುತ್ತಿದೆ ವೈರಸ್​

ಬೀದರ್​: ಕೊರೊನಾ ದೇಶಕ್ಕೆ ಕಾಲಿಟ್ಟಾಗಿಂದ ತಮ್ಮ ಜೀವವನ್ನ ಪಣಕ್ಕಿಟ್ಟು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೋಂಕಿತರಿಗೆ ಚಿಕಿತ್ಸೆ ನೀಡ್ತಿದ್ದಾರೆ. ಆದ್ರೀಗ ವೈದ್ಯರಿಗೇ ವೈರಸ್​ ವಕ್ಕರಿಸಿಕೊಳ್ತಿದೆ. ಹಾಗಾಗಿ, ಇದೀಗ ವೈದ್ಯರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಔರಾದ್ ತಾಲೂಕು ವೈದ್ಯಾಧಿಕಾರಿಗೆ ಸೋಂಕು ದೃಢ ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿರೋದು ಇಲ್ಲಿಯೇ. ಹೀಗಾಗಿ ಇಲ್ಲಿನ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡೋಕೆ ಹಗಲು ರಾತ್ರಿ ಕಷ್ಟಪಡ್ತಿದ್ದಾರೆ. ಆದ್ರೆ ಇದೀಗ ವೈದ್ಯರಿಗೆ ಮಹಾಮಾರಿ ವಕ್ಕರಿಸಿಕೊಳ್ತಿದೆ. […]

ಬೀದರ್​ನಲ್ಲಿ ವಾರಿಯರ್ಸ್​ಗೂ ವಕ್ಕರಿಸುತ್ತಿದೆ ವೈರಸ್​
KUSHAL V

| Edited By:

Jul 11, 2020 | 12:42 PM

ಬೀದರ್​: ಕೊರೊನಾ ದೇಶಕ್ಕೆ ಕಾಲಿಟ್ಟಾಗಿಂದ ತಮ್ಮ ಜೀವವನ್ನ ಪಣಕ್ಕಿಟ್ಟು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೋಂಕಿತರಿಗೆ ಚಿಕಿತ್ಸೆ ನೀಡ್ತಿದ್ದಾರೆ. ಆದ್ರೀಗ ವೈದ್ಯರಿಗೇ ವೈರಸ್​ ವಕ್ಕರಿಸಿಕೊಳ್ತಿದೆ. ಹಾಗಾಗಿ, ಇದೀಗ ವೈದ್ಯರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಔರಾದ್ ತಾಲೂಕು ವೈದ್ಯಾಧಿಕಾರಿಗೆ ಸೋಂಕು ದೃಢ ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿರೋದು ಇಲ್ಲಿಯೇ. ಹೀಗಾಗಿ ಇಲ್ಲಿನ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡೋಕೆ ಹಗಲು ರಾತ್ರಿ ಕಷ್ಟಪಡ್ತಿದ್ದಾರೆ. ಆದ್ರೆ ಇದೀಗ ವೈದ್ಯರಿಗೆ ಮಹಾಮಾರಿ ವಕ್ಕರಿಸಿಕೊಳ್ತಿದೆ. ಜಿಲ್ಲೆಯ ಔರಾದ್ ತಾಲೂಕಿನ ವೈದ್ಯಾಧಿಕಾರಿಗೆ ಕೊರೊನಾ ಕನ್ಫರ್ಮ್ ಆಗಿದೆ. ಇದರಿಂದ, ತಾಲೂಕು ಆಸ್ಪತ್ರೆಯನ್ನ ಸೀಲ್​ಡೌನ್ ಮಾಡಲಾಗಿದೆ. ಜೊತೆಗೆ, ಡಾಕ್ಟರ್ ಸಂಪರ್ಕಕ್ಕೆ ಬಂದ DHO, ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ 14 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಕೆಮ್ಮು, ನೆಗಡಿ, ಜ್ವರ ಅಂತಾ ಜಿಲ್ಲಾಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಆದರೆ ಕೊವಿಡ್​​ ಟೆಸ್ಟ್ ಮಾಡೋ ಮೊದಲೇ ಅವರಿಗೆ ಚಿಕಿತ್ಸೆ ನೀಡೋ ಅನಿವಾರ್ಯತೆ ಸಹ ಇದೆ. ಇದರಿಂದ ವೈದ್ಯರಿಗೂ ಸೋಂಕು ತಗಲುತ್ತಿದೆ ಅನ್ನೋ ಸಂಶಯ ವ್ಯಕ್ತವಾಗಿದೆ. ಇಲ್ಲಿಯವರೆಗೆ 4 ಮಂದಿ ನರ್ಸ್, ಇಬ್ಬರು ಟೆಕ್ನಿಷಿಯನ್ಸ್​ ಹಾಗೂ ಓರ್ವ ವೈದ್ಯನಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ, ಜಿಲ್ಲಾ ವೈದ್ಯರ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ.

ಬೀದರ್ ಗಡಿಯಲ್ಲಿರೋ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರ ಜೊತೆಗೆ ನೆರೆ ರಾಜ್ಯಗಳಿಂದ ಬೀದರ್​ಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದ್ದರಿಂದ, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ, ಜಿಲ್ಲೆಯ ಆರೋಗ್ಯ ಸಿಬ್ಬಂದಿ ಸೋಂಕಿನ ಸುಳಿಗೆ ಸಿಲುಕೋದು ಕನ್ಫರ್ಮ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada