ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ.
ನಗರದ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರೋ ಹಿನ್ನೆಲೆಯಲ್ಲಿ ಜೂನ್ 29ರಂದು ಶ್ರೀರಾಂಪುರ ಠಾಣೆಯ ಸಿಬ್ಬಂದಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ನಂತರ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ನಿನ್ನೆ ರಾತ್ರಿ ನಿಮ್ಮ ಕೊವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ತಿಳಿಸಿ ಜಿಕೆವಿಕೆಯ ಐಸೋಲೆಷನ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.
ಆದರೆ, ಇಂದು ಬೆಳಗ್ಗೆ 29 ವರ್ಷದ ಕಾನ್ಸ್ಟೇಬಲ್ ಮೊಬೈಲ್ಗೆ ನಿಮ್ಮ ವರದಿ ನೆಗಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಮೆಸೇಜ್ ಕಳಿಸಿದೆ. ಈ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಪ್ರಶ್ನಿಸಿದರೆ ತಾಂತ್ರಿಕ ದೋಷದಿಂದ ಹಾಗೆ ಮೆಸೇಜ್ ರವಾನೆಯಾಗಿದೆ. ಆದರೆ, ನಿಮಗೆ ಸೋಂಕು ದೃಢವಾಗಿದೆ. ಹಾಗಾಗಿ ಆಸ್ಪತ್ರೆಯಲ್ಲಿ ಇರಿ ಎಂದು ಹೇಳಿದ್ದಾರೆ. ಒಟ್ಟಾರೆ, ಸೋಂಕು ತಗಲಿರುವ ಆತಂಕದಲ್ಲಿರೋ ಪೇದೆಗೆ ಆರೋಗ್ಯ ಇಲಾಖೆಯ ಎಡವಟ್ಟು ಮತ್ತಷ್ಟು ಭಯ ಹುಟ್ಟಿಸಿದೆ.