ಧಾರವಾಡದಲ್ಲಿ ಭಾರಿ ಮಳೆ, ತುಪ್ಪರಿ ಹಳ್ಳದಲ್ಲಿ ಸಿಲುಕಿಕೊಂಡ ಲಾರಿ

ಧಾರವಾಡದಲ್ಲಿ ಭಾರಿ ಮಳೆ, ತುಪ್ಪರಿ ಹಳ್ಳದಲ್ಲಿ ಸಿಲುಕಿಕೊಂಡ ಲಾರಿ

ಧಾರವಾಡ: ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಧಾರವಾಡ-ಸವದತ್ತಿ ಮಾರ್ಗದ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ತುಪ್ಪರಿ ಹಳ್ಳದ ನೀರಿನಲ್ಲಿ ಲಾರಿಯೊಂದು ಸಿಲುಕಿಕೊಂಡಿದೆ.

ಧಾರವಾಡ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದು, ಇದರಿಂದಾಗಿ ಈ ಭಾಗದ ನದಿಗಳು ತುಂಬಿ ಹರಿಯುತ್ತವೆ. ಜೊತೆಗೆ ಧಾರವಾಡ-ಸವದತ್ತಿ ಮಾರ್ಗದ ಸೇತುವೆ ಮುಳುಗಡೆಯಾಗಿದ್ದು. ಸೇತುವೆ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ಧಾರವಾಡ-ಸವದತ್ತಿ ಮಾರ್ಗದ ಸಂಚಾರವನ್ನು ಬಂದ್ ಮಾಡಲಾಗಿದೆ.

ಜೊತೆಗೆ ಹಾರೋಬೆಳವಡಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ತುಪ್ಪರಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹಳ್ಳದಲ್ಲಿ ಲಾರಿಯೊಂದು ಸಿಲುಕಿಕೊಂಡಿದೆ. ಲಾರಿ ಚಾಲಕ ಹೇಗೋ ನೀರಿನಿಂದ ಹೊರ ಬಂದಿದ್ದು, ಲಾರಿಯನ್ನು ದಡ ಸೇರಿಸಲು ಹರಸಾಹಸ ಪಡುತ್ತಿದ್ದಾರೆ.

Published On - 11:12 am, Thu, 3 September 20

Click on your DTH Provider to Add TV9 Kannada