ಮಳೆಗೆ ತತ್ತರಿಸಿದ ರಾಜ್ಯ: ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, 5 ಮನೆಗಳ ಮೇಲ್ಛಾವಣಿ ಕುಸಿತ
ಗದಗ: ಜಿಲ್ಲೆಯ ಹಲವೆಡೆ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಬೂದಿಹಾಳ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಕಾಲುವೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದ ಹಿನ್ನೆಲೆ ರಾತ್ರಿಯಿಡೀ ಗ್ರಾಮಸ್ಥರು ಜಾಗರಣೆ ಮಾಡುವಂತೆ ಪರಿಸ್ಥಿತಿ ಉಂಟಾಗಿತ್ತು. ಮನೆಗಳಿಗೂ ನೀರು ನುಗ್ಗಿ ಮನೆಗಳಲ್ಲಿನ ದವಸ ಧಾನ್ಯ ನೀರು ಪಾಲಾಗಿದೆ. ಮಳೆ, ಚಳಿಯಲ್ಲಿ ರಾತ್ರಿ ಪೂರ್ತಿ ವೃದ್ಧರು, ಮಕ್ಕಳು, ಮಹಿಳೆಯರು ಪರದಾಡಿದ್ದಾರೆ. ಇನ್ನು ಜಾನುವಾರುಗಳ ಕಾಪಾಡಲು ಗ್ರಾಮಸ್ಥರು ಹರಸಹಾಸ ಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 5 ಮನೆಗಳ ಮೇಲ್ಛಾವಣಿ ಕುಸಿತ ಬಾಗಲಕೋಟೆ ಜಿಲ್ಲೆಯಲ್ಲಿ […]

ಗದಗ: ಜಿಲ್ಲೆಯ ಹಲವೆಡೆ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಬೂದಿಹಾಳ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಕಾಲುವೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದ ಹಿನ್ನೆಲೆ ರಾತ್ರಿಯಿಡೀ ಗ್ರಾಮಸ್ಥರು ಜಾಗರಣೆ ಮಾಡುವಂತೆ ಪರಿಸ್ಥಿತಿ ಉಂಟಾಗಿತ್ತು.
ಮನೆಗಳಿಗೂ ನೀರು ನುಗ್ಗಿ ಮನೆಗಳಲ್ಲಿನ ದವಸ ಧಾನ್ಯ ನೀರು ಪಾಲಾಗಿದೆ. ಮಳೆ, ಚಳಿಯಲ್ಲಿ ರಾತ್ರಿ ಪೂರ್ತಿ ವೃದ್ಧರು, ಮಕ್ಕಳು, ಮಹಿಳೆಯರು ಪರದಾಡಿದ್ದಾರೆ. ಇನ್ನು ಜಾನುವಾರುಗಳ ಕಾಪಾಡಲು ಗ್ರಾಮಸ್ಥರು ಹರಸಹಾಸ ಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ 5 ಮನೆಗಳ ಮೇಲ್ಛಾವಣಿ ಕುಸಿತ ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಇಳಕಲ್ ತಾಲೂಕಿನ ಹಿರೆಹೋತಗೇರಿಯಲ್ಲಿ 5 ಮನೆಗಳ ಮೇಲ್ಛಾವಣಿ ಕುಸಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಗೋನಾಳ ಎಸ್.ಕೆ. ಗ್ರಾಮದಲ್ಲಿ ಅಪಾರ ಬೆಳೆ ಜಲಾವೃತವಾಗಿದೆ.
ಬಾಗಲಕೋಟೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಹಿರೆಹೋತಗೇರಿ ಗ್ರಾಮದಲ್ಲಿ ಮುತ್ತಪ್ಪ ಹೊಸಮನಿ ಎಂಬುವರ ಮನೆ ಸೇರಿದಂತೆ ಇನ್ನು ನಾಲ್ಕು ಮನೆಗಳ ಮೇಲ್ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋನಾಳ ಎಸ್.ಕೆ. ಗ್ರಾಮದಲ್ಲಿ ಹೊಲದಲ್ಲಿ ರಾಶಿ ಮಾಡಲು ಸಂಗ್ರಹಿಸಿದ್ದ ಸಜ್ಜೆ ಬೆಳೆ ಜಲಾವೃತಗೊಂಡಿದೆ. ಬೆಳೆದು ನಿಂತ ಮೆಣಸಿನಕಾಯಿ ಬೆಳೆ ನೀರು ಪಾಲಾಗಿದೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.






