ಕಡೂರಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ! ಧರೆಗುರುಳಿದ ಮರಗಳು, ಮುರಿದ ಬಿತ್ತು ಟವರ್..

ಕಡೂರಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ! ಧರೆಗುರುಳಿದ ಮರಗಳು, ಮುರಿದ ಬಿತ್ತು ಟವರ್..

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗ ಕಡೂರಿನಲ್ಲಿ ಹಲವು ದಿನಗಳಿಂದ ಕೈಕೊಟ್ಟಿದ್ದ ಮಳೆರಾಯ ನಿನ್ನೆ ಸಂಜೆ ಧಾರಾಕಾರವಾಗಿ ಸುರಿದು ಅವಾಂತರ ಸೃಷ್ಟಿಸಿದ್ದಾನೆ. ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ರಾತ್ರಿ ವೇಳೆಗೆ ಭಾರೀ ಅನಾಹುತ ಮಾಡಿದೆ. ಮಳೆ ರಭಸಕ್ಕೆ ತಕ್ಕಂತೆ ಗಾಳಿಯ ವೇಗವೂ ಹೆಚ್ಚಿದ್ದರಿಂದ ಪಟ್ಟಣದ ಹಲವೆಡೆ ಮರಗಿಡಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಗಾಳಿಯ ವೇಗವೂ ಹೆಚ್ಚಿದ್ದು ಮನೆ ಮೇಲಿನ ಶೀಟ್ಗಳು ಹಾರಿ ಹೋಗಿವೆ. ಬಿರುಗಾಳಿಯ ಆರ್ಭಟಕ್ಕೆ ಬೃಹತ್ ಮರಗಳು ಧರೆಗುರುಳಿವೆ. ರೈಲ್ವೆ ಅಂಡರ್ […]

sadhu srinath

|

Jul 24, 2020 | 11:16 AM

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗ ಕಡೂರಿನಲ್ಲಿ ಹಲವು ದಿನಗಳಿಂದ ಕೈಕೊಟ್ಟಿದ್ದ ಮಳೆರಾಯ ನಿನ್ನೆ ಸಂಜೆ ಧಾರಾಕಾರವಾಗಿ ಸುರಿದು ಅವಾಂತರ ಸೃಷ್ಟಿಸಿದ್ದಾನೆ. ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ರಾತ್ರಿ ವೇಳೆಗೆ ಭಾರೀ ಅನಾಹುತ ಮಾಡಿದೆ.

ಮಳೆ ರಭಸಕ್ಕೆ ತಕ್ಕಂತೆ ಗಾಳಿಯ ವೇಗವೂ ಹೆಚ್ಚಿದ್ದರಿಂದ ಪಟ್ಟಣದ ಹಲವೆಡೆ ಮರಗಿಡಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಗಾಳಿಯ ವೇಗವೂ ಹೆಚ್ಚಿದ್ದು ಮನೆ ಮೇಲಿನ ಶೀಟ್ಗಳು ಹಾರಿ ಹೋಗಿವೆ. ಬಿರುಗಾಳಿಯ ಆರ್ಭಟಕ್ಕೆ ಬೃಹತ್ ಮರಗಳು ಧರೆಗುರುಳಿವೆ. ರೈಲ್ವೆ ಅಂಡರ್ ಬ್ರಿಡ್ಜ್ ಬಳಿ 5 ಅಡಿ ಎತ್ತರಕ್ಕೆ ನೀರು ನಿಂತಿದ್ದು ವಾಹನಗಳೇ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ವಾಹನಗಳು ನೀರಿನ ಮಧ್ಯೆಯೂ ಚಲಾಯಿಸಿ ಇಂಜಿನ್‍ಗೆ ನೀರು ನುಗ್ಗಿದ ಪರಿಣಾಮ ಕೆಟ್ಟು ನಿಂತವು.

ಸರ್ಕಾರಿ ಬಸ್‍ ನಿಲ್ದಾಣದ ಎದುರಿನ ನಂಜುಡೇಶ್ವರ ಲಾಡ್ಜ್ ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಗಾಳಿಯ ರಭಸಕ್ಕೆ ಮಗುಚಿ ಬಿದ್ದಿದೆ. ಕಟ್ಟಡದ ಮೇಲೆ ಟವರ್‍ಗೆ ಹಾಕಿದ್ದ ಅಡಿಪಾಯ ಗಟ್ಟಿಯಾಗಿದ್ದರಿಂದ ಅದೃಷ್ಟವಶಾತ್ ಟವರ್ ಕಟ್ಟಡದ ಒಂದು ಭಾಗಕ್ಕೆ ವಾಲಿಕೊಂಡಿದೆ. ಟವರ್ ಗಾಳಿಗೆ ಹಾರಿ ನಿಲ್ದಾಣದ ಮುಂದಿನ ರಸ್ತೆಗೆ ಬಿದ್ದಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಏನೂ ಆಗಿಲ್ಲ.

ಪಟ್ಟಣದಾದ್ಯಂತ ಅಲ್ಲಲ್ಲೇ ಮರಗಳು ಧರೆಗುರುಳಿದ್ರೆ, ಅಂಗಡಿ ಅಕ್ಕಪಕ್ಕ ಹಾಕಿದ್ದ ಶೆಡ್ ಗಳು ನೆಲಕ್ಕುರುಳಿವೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಕಳೆದ ಐದಾರು ದಿನಗಳಿಂದ ಬಿಸಿಲಿನ ಬೇಗೆ ತಡೆಯಲಾರದೇ ಜನ ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರಿನಲ್ಲಿ ರಣಭೀಕರ ಮಳೆ ಕಂಡು ಪಟ್ಟಣದ ಜನತೆ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಬಿಸಿಲಿನಿಂದ ಕಂಗೆಟ್ಟಿದ್ದ ಮಂದಿಗೆ ದಿಢೀರನೆ ಆಗಮಿಸಿದ ಮಳೆಯನ್ನು ಕಂಡು ನಿಬ್ಬೆರಗಾಗಿ ಹೋಗಿದ್ದಾರೆ.‌

Follow us on

Related Stories

Most Read Stories

Click on your DTH Provider to Add TV9 Kannada