ಬೆಂಗಳೂರು ಪ್ರಕರಣ ಹಸಿ ಇರುವಾಗ್ಲೇ ಶೃಂಗೇರಿಯಲ್ಲಿ ಮತ್ತೊಂದು ಕುಕೃತ್ಯ

ಚಿಕ್ಕಮಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಾಟೆ ಮಾಸುವ ಮುನ್ನವೇ ಶೃಂಗೇರಿಯಲ್ಲಿ ಮತ್ತೊಂದು ಕುಕೃತ್ಯ ನಡೆದಿದೆ. ಶಂಕರಾಚಾರ್ಯರ ಪುತ್ಥಳಿ ಮೇಲೆ SDPl ಬಾವುಟವನ್ನು ಹಾರಿಸಲಾಗಿದೆ. ಕಿಡಿಗೇಡಿಗಳಿಂದ ಕೋಮು ಸಾಮರಸ್ಯ ಕದಡುವ ಯತ್ನ ನಡೆದಿದೆ.  ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಇಂತಹದೊಂದು ಘಟನೆ ನಡೆದಿದೆ. ಮಠದ ಭಕ್ತರು, ಹಿಂದೂ ಸಂಘಟನೆಯವರು ಶಂಕರಾಚಾರ್ಯರ ಪುತ್ಥಳಿ ಮೇಲೆ SDPl ಬಾವುಟ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಮಾಜಿ ಶಾಸಕ ಡಿ.ಎನ್ ಜೀವರಾಜ್ […]

ಬೆಂಗಳೂರು ಪ್ರಕರಣ ಹಸಿ ಇರುವಾಗ್ಲೇ ಶೃಂಗೇರಿಯಲ್ಲಿ ಮತ್ತೊಂದು ಕುಕೃತ್ಯ
Updated By: ಸಾಧು ಶ್ರೀನಾಥ್​

Updated on: Aug 13, 2020 | 1:32 PM

ಚಿಕ್ಕಮಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಾಟೆ ಮಾಸುವ ಮುನ್ನವೇ ಶೃಂಗೇರಿಯಲ್ಲಿ ಮತ್ತೊಂದು ಕುಕೃತ್ಯ ನಡೆದಿದೆ. ಶಂಕರಾಚಾರ್ಯರ ಪುತ್ಥಳಿ ಮೇಲೆ SDPl ಬಾವುಟವನ್ನು ಹಾರಿಸಲಾಗಿದೆ. ಕಿಡಿಗೇಡಿಗಳಿಂದ ಕೋಮು ಸಾಮರಸ್ಯ ಕದಡುವ ಯತ್ನ ನಡೆದಿದೆ.

 ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಇಂತಹದೊಂದು ಘಟನೆ ನಡೆದಿದೆ. ಮಠದ ಭಕ್ತರು, ಹಿಂದೂ ಸಂಘಟನೆಯವರು ಶಂಕರಾಚಾರ್ಯರ ಪುತ್ಥಳಿ ಮೇಲೆ SDPl ಬಾವುಟ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.