ಒಳ್ಳೆ ಸುದ್ದಿ | 70 ಸಾವಿರ ರೂ ಮೌಲ್ಯದ ಬ್ಯಾಗನ್ನು ಪ್ರಯಾಣಿಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಚಾಲಕ, ನಿರ್ವಾಹಕ

ಕೆಎಸ್​​ಆರ್​ಟಿಸಿ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ₹70 ಸಾವಿರ ಮೌಲ್ಯದ ಲ್ಯಾಪ್​ಟಾಪ್​ ಸುರಕ್ಷಿತವಾಗಿ ಪ್ರಯಾಣಿಕನ ಕೈ ಸೇರಿತು. ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ.

ಒಳ್ಳೆ ಸುದ್ದಿ | 70 ಸಾವಿರ ರೂ ಮೌಲ್ಯದ ಬ್ಯಾಗನ್ನು ಪ್ರಯಾಣಿಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಚಾಲಕ, ನಿರ್ವಾಹಕ
ಬೆಲೆಬಾಳುವ ಬ್ಯಾಗನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ ಕೆಎಸ್​ಆರ್​ಟಿಸಿ ಚಾಲಕ ಮತ್ತು ನಿರ್ವಾಹಕ
Follow us
Skanda
| Updated By: ಸಾಧು ಶ್ರೀನಾಥ್​

Updated on: Jan 18, 2021 | 12:42 PM

ದಕ್ಷಿಣ ಕನ್ನಡ: ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಬೆಲೆಬಾಳುವ ಬ್ಯಾಗನ್ನು ಅವರಿಗೇ ಹಿಂದಿರುಗಿಸುವ ಮೂಲಕ ಕೆಎಸ್​ಆರ್​ಟಿಸಿ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಜನವರಿ 16ರಂದು ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪ್ರಯಾಣಿಕ ಸುಮಾರು ₹ 70 ಸಾವಿರ ಬೆಲೆಬಾಳುವ ಲ್ಯಾಪ್​ಟಾಪ್​ ಇದ್ದ ಬ್ಯಾಗನ್ನು KA 21 F 0039 ಸಂಖ್ಯೆಯ ಬಸ್ಸಿನಲ್ಲಿಯೇ ಬಿಟ್ಟು ಹೋಗಿದ್ದರು.

ಬಸ್ಸಿನಲ್ಲಿ ಬ್ಯಾಗ್​ ಇರುವುದನ್ನು ಗಮನಿಸಿದ ಚಾಲಕ ಇಸುಬ್​ ಅಲಿ ಮತ್ತು ನಿರ್ವಾಹಕ ಮಂಜು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಪ್ರಯಾಣಿಕನನ್ನು ಹುಡುಕಲು ಆರಂಭಿಸಿದ್ದಾರೆ. ಅವರಿಬ್ಬರ ಪ್ರಯತ್ನದ ಫಲವಾಗಿ ಕೊನೆಗೂ ಬ್ಯಾಗ್​ ಬಿಟ್ಟು ಹೋಗಿದ್ದ ಪ್ರಯಾಣಿಕ ಪತ್ತೆಯಾಗಿದ್ದು, ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಅವರಿಗೆ ಬ್ಯಾಗ್ ಹಿಂದಿರುಗಿಸಲಾಗಿದೆ. ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಯನ್ನು ಮೆಚ್ಚಿದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಡಾ. ಡಿ ವೀರೇಂದ್ರ ಹೆಗ್ಗಡೆಯವರ ವಿಶಿಷ್ಟ ಪರಿಕಲ್ಪನೆ; ಫುಲ್ ಫೇಮಸ್ ಆದ ಧರ್ಮಸ್ಥಳದ ಆಧುನಿಕ ಎತ್ತಿನ ಬಂಡಿ