ಮೂರು ದಿನದಿಂದ ಆಸ್ಪತ್ರೆ ಅಲೆದಾಡಿ ಪ್ರಾಣ ಬಿಟ್ಟ ನಿವೃತ್ತ ಸಬ್​ಇನ್ಸ್​ಪೆಕ್ಟರ್

  • TV9 Web Team
  • Published On - 9:33 AM, 3 Jul 2020
ಮೂರು ದಿನದಿಂದ ಆಸ್ಪತ್ರೆ ಅಲೆದಾಡಿ ಪ್ರಾಣ ಬಿಟ್ಟ ನಿವೃತ್ತ ಸಬ್​ಇನ್ಸ್​ಪೆಕ್ಟರ್

ಬೆಂಗಳೂರು: ಕೊರೊನಾ ಎಲ್ಲವನ್ನೂ ಬದಲಾಯಿಸಿದೆ. ಹಣ ಇದ್ದರು ಚಿಕಿತ್ಸೆ ಸಿಗುವುದು ಕಷ್ಟವಾಗಿದೆ. ಕೊರೊನಾ ಸೋಂಕುಪೀಡಿತರಿಗೆ ಯಮಯಾತನೆ ತೂರಿಸುತ್ತಿದೆ. ಅನಾರೋಗ್ಯಕ್ಕೊಳಗಾದ್ರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೇ ಸಿಗ್ತಿಲ್ಲ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಅಮಾನವೀಯತೆ ಎದ್ದು ಕಾಣುತ್ತಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ರೂ ಡೋಂಟ್​ಕೇರ್ ಎನ್ನುವಂತಾಗಿದೆ.

ಸರ್ಕಾರಿ, ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಿವೃತ್ತ ಸಬ್​ಇನ್ಸ್​ಪೆಕ್ಟರ್ ಬಲಿಯಾಗಿದ್ದಾರೆ. ತಡರಾತ್ರಿ 3 ಗಂಟೆ ಸುಮಾರಿಗೆ ನಿವೃತ್ತ ಸಬ್​ಇನ್ಸ್​ಪೆಕ್ಟರ್ ಕೊನೆಯುಸಿರೆಳೆದಿದ್ದಾರೆ. ಇವರು ಕಳೆದ ಮೂರು ದಿನಗಳಿಂದ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದ್ರೆ ಎಲ್ಲೂ ಚಿಕಿತ್ಸೆ ಸಿಕ್ಕಿಲ್ಲ. ಜ್ವರ, ಉಸಿರಾಟದ ಸಮಸ್ಯೆಯಿಂದ ಕಂಗಾಲಾಗಿದ್ದ 67 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಹೆಬ್ಬಾಳದ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಿದ್ರು. ಮೃತ ನಿವೃತ್ತ ಸಬ್​ಇನ್ಸ್​ಪೆಕ್ಟರ್ ವಿಲ್ಸನ್ ಗಾರ್ಡನ್ ಅಗಡಿ ಆಸ್ಪತ್ರೆಗೆ ತೆರಳಿದ್ರೂ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೇವಲ ಕೊರೊನಾ ಟೆಸ್ಟ್ ಮಾಡಿ ₹4,500 ಪಾವತಿಸಿಕೊಂಡಿದ್ದಾರೆ. ಆದರೆ ಚಿಕಿತ್ಸೆ ನೀಡಿಲ್ಲ. ನಂತರ ವೊಕಾರ್ಡ್ ಆಸ್ಪತ್ರೆ, ತೆರಳಿದ್ರೂ ಅಲ್ಲೂ ಕೂಡ ಇದೇ ಪರಿಸ್ಥಿತಿ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು 3 ಗಂಟೆ ಕಾಯಿಸಿದ್ದಾರೆ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿದ್ರೆ ಅಲ್ಲೂ ದಾಖಲಿಸಿಕೊಂಡಿಲ್ಲ. ಮೂರು ದಿನಗಳಿಂದ ಚಿಕಿತ್ಸೆಯೂ ಸಿಕ್ಕಿಲ್ಲ, ಕೊವಿಡ್ ರಿಪೋರ್ಟ್ ಕೂಡ ಬಂದಿಲ್ಲ. ಮೂರು ದಿನ ಆಸ್ಪತ್ರೆಗಳನ್ನು ಅಲೆದಾಡಿ ಇಂದು ಪ್ರಾಣ ಬಿಟ್ಟಿದ್ದಾರೆ.