ಲಾಕ್​ ಡೌನ್ ಎಫೆಕ್ಟ್​.. ಹೋಟೆಲ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Jan 23, 2021 | 12:49 PM

ಮಾನಸಿಕ ಖಿನ್ನತೆಗೆ ಒಳಗಾಗಿ ಹೊಟೇಲ್​ ಮಾಲೀಕ ನೇಣು ಬಿಗಿದು ಶರಣಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಲಾಕ್​ ಡೌನ್  ಎಫೆಕ್ಟ್​.. ಹೋಟೆಲ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಪ್ರವೀಣ್ (34)
Follow us on

ಮಡಿಕೇರಿ: ಹೋಟೆಲ್​ ಮಾಲೀಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆಯ ಬಳಿ ನಡೆದಿದೆ. ಮೃತ ದುರ್ದೈವಿ ಪ್ರವೀಣ್​ (34) ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವೀಣ್ ಚಿಕ್ಕಮಗಳೂರಿನ ರೆಸಾರ್ಟ್​ ಮ್ಯಾನೇಜರ್​ ಆಗಿದ್ದರು. ಕೊರೊನಾ ಲಾಕ್​ ಡೌನ್​ನಿಂದಾಗಿ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಇದ್ದ. ಹಾಗಾಗಿ ಮೂರು ತಿಂಗಳ ಹಿಂದೆ ಮಡಿಕೇರಿಯಲ್ಲಿ ಹೋಟೆಲ್​ ಆರಂಭಿಸಿದ್ದರು. ಆದರೂ, ಪ್ರವೀಣ್ ಜೀವನ ನಡೆಸಲು ಕಷ್ಟವಾಗುತ್ತಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರವೀಣ್ ಹೋಟೆಲ್​ ಹಿಂಬದಿಯಲ್ಲಿದ್ದ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಡಿಕೇರಿಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ತನ್ನ ಶೀಲ ಶಂಕಿಸಿದ್ದಕ್ಕೆ ಮನನೊಂದ ಮಹಿಳೆ.. ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣು