ಚಿಕ್ಕಬಳ್ಳಾಪುರ: ಮದ್ಯ ಸೇವನೆಗೆ ಪತ್ನಿ ಹಣ ಕೊಡಲ್ಲ ಅಂದಿದ್ದಕ್ಕೆ ಆಕೆಯ ಪತಿ ಒನಕೆಯಿಂದ ಬರ್ಬರವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿಯಲ್ಲಿ ನಡೆದಿದೆ.
ರತ್ನಮ್ಮಳ ಪಾಪಿ ಪತಿರಾಯ ಆದಿನಾರಾಯಣ ಕೃತ್ಯ ಎಸಗಿದ್ದಾನೆ. ಸಾರಾಯಿ ಕುಡಿಯುವುದ್ದಕ್ಕೆ ರತ್ನಮ್ಮ ಹಣ ಕೊಡಲಿಲ್ಲ ಅಂತಾ ಕೋಪಗೊಂಡ ಪತಿರಾಯ ಆಕೆಯನ್ನು ಒನಕೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಕೃತ್ಯ ಎಸಗಿದ ಬಳಿಕ ಪಾಪಿ ಪತಿ ಆದಿನಾರಾಯಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.