ತಲೆಗೆ ಗುಂಡು ಹಾರಿಸಿ ಪತ್ನಿ ಹತ್ಯೆಗೈದ ಪತಿ.. ಮತ್ತೊಂದೆಡೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ.. ಎಲ್ಲಿ?

ತಲೆಗೆ ಗುಂಡು ಹಾರಿಸಿ ಪತಿಯೇ ಪತ್ನಿಯ ಕೊಲೆ ಮಾಡಿರು ಘಟನೆ ತುಮಕೂರಿನಲ್ಲಿ ನಡೆದಿದೆ. ಹಾಗೂ ಮೈಸೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿದೆ. ಕಾರಣಗಳೇನಿರಬಹುದು? ಎಂಬುದರ ಮಾಹಿತಿ ಇಲ್ಲಿದೆ ಓದಿ.

ತಲೆಗೆ ಗುಂಡು ಹಾರಿಸಿ ಪತ್ನಿ ಹತ್ಯೆಗೈದ ಪತಿ.. ಮತ್ತೊಂದೆಡೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ.. ಎಲ್ಲಿ?
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Jan 12, 2021 | 8:29 AM

ತುಮಕೂರು: ಪತ್ನಿ ಶಾರದಾಳ(28) ತಲೆಗೆ ಗುಂಡು ಹಾರಿಸಿ ಪತಿ ಕೃಷ್ಣಪ್ಪ(35) ಕೊಲೆ ಮಾಡಿರುವ ಘಟನೆ ಡಿ.ಕೊರಟಗೆರೆಯಲ್ಲಿ ನಡೆದಿದೆ.

ಕೃಷ್ಣಪ್ಪ, ಸ್ನೇಹಿತನ ಮನೆಯಿಂದ ಬೇಟೆಗೆಂದು ನಾಡ ಬಂದೂಕನ್ನು ತಂದಿದ್ದ. ಗುಂಡು ಹಾರಿಸುವುದು ಹೇಗೆ ಎಂದು ಹೆಂಡಿತಿಗೆ ಹೇಳುತ್ತಾ ಪತ್ನಿ ಶಾರದಾಳಿಗೆ ಗುಂಡು ಹಾರಿಸಿದ್ದಾಗಿ ತಿಳಿದು ಬಂದಿದೆ. ಹೆಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಕೃತ್ಯಕ್ಕೆ ನಿಖರ ಕಾರಣವೇನೆಂಬುವುದು ತಿಳಿದು ಬಂದಿಲ್ಲ.

ಮೈಸೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ:

ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆಯಾಗಿದೆ. ಮೃತ ದುರ್ದೈವಿ ದಿವ್ಯಾ(26). ಎಚ್​.ಡಿ. ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದವರಾಗಿದ್ದಾರೆ.

ದಿವ್ಯಾ 2 ವರ್ಷಗಳ ಹಿಂದೆ ಮಲ್ಕುಂಡಿ ಗ್ರಾಮದ ವೀರಭದ್ರ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ ಒಂದು ವರ್ಷದ ಹೆಣ್ಣು ಮಗುವಿದೆ.

ಪತಿ ವೀರಭದ್ರ ಮತ್ತು ಕುಟುಂಬಸ್ಥರು ಹಲ್ಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತ ದಿವ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ದಿವ್ಯಾ ಸಹೋದರ ರಘು ವೀರಭದ್ರ ಕುಟುಂಬಸ್ಥರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನೈತಿಕ ಸಂಬಂಧ ಶಂಕೆ: ಕೊಲೆಯಾದ ಸ್ಥಿತಿಯಲ್ಲಿ ಬೀಡಾ ಅಂಗಡಿ ವ್ಯಾಪಾರಿ ಶವ ಪತ್ತೆ

shruti hegde
Loading...
Unable to load recommendations.
Follow Us