
ನಾಳೆ (ಡಿ.8) ನಡೆಯಬೇಕಿದ್ದ ಚಾರ್ಟಡ್ ಅಕೌಂಟೆಂಟ್ಸ್ ಫೌಂಡೇಶನ್ನ ಪೇಪರ್-1ರ ಪರೀಕ್ಷೆ ಮುಂದೂಡಿ ಭಾರತೀಯ ಲೆಕ್ಕ ಪರಿಶೋಧಕರ ಸಂಘ ಆದೇಶ ನೀಡಿದೆ. ಅನಿವಾರ್ಯ ಕಾರಣಗಳಿಂದ ಪರೀಕ್ಷೆ ಮುಂದೂಡಲಾಗಿದೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.
ನೂತನ ಕೃಷಿ ಕಾಯ್ದೆಯ ರದ್ಧತಿಯನ್ನು ಆಗ್ರಹಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ ಆಚರಿಸಲಿವೆ. ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಎಡಪಕ್ಷಗಳ ಬೆಂಬಲದಿಂದ ದೇಶವ್ಯಾಪಿ ಬಂದ್ ಹಾಗೂ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.
ನಾಳೆ ಮಧ್ಯಾಹ್ನ 2 ರಿಂದ 5ಗಂಟೆಯವರೆಗೆ ನಡೆಯಬೇಕಿದ್ದ ಪರೀಕ್ಷೆಯು ಡಿಸೆಂಬರ್ 13ರಂದು ಅದೇ ಸಮಯಕ್ಕೆ ನಡೆಯಲಿದೆ. ಈಗ ನೀಡಿರುವ ಪರೀಕ್ಷಾ ಪ್ರವೇಶಾತಿ ಪತ್ರವೇ ಮುಂದೂಡಲ್ಪಟ್ಟ ಪರೀಕ್ಷಾ ದಿನಾಂಕಕ್ಕೂ ಅನ್ವಯವಾಗಲಿದೆ. ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಉಳಿದ ಪರೀಕ್ಷಾ ವೇಳಾಪಟ್ಟಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮೊದಲು ನಿಗದಿಪಡಿಸಿದಂತೆ ಉಳಿದ ಪರೀಕ್ಷೆಗಳು ನಡೆಯಲಿವೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Institute of Chartered Accountants of India postpones Chartered Accountants Foundation Examination paper-1 that was scheduled to be held tomorrow to 13th December due to 'unavoidable circumstances'. pic.twitter.com/fSB5QvhnkK
— ANI (@ANI) December 7, 2020
Published On - 7:06 pm, Mon, 7 December 20