AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಡಾನಗರಿ ಧಾರವಾಡಕ್ಕೆ ಶುರುವಾಯ್ತು ಹೊಸ ಟೆನ್ಷನ್, ಜಿಲ್ಲೆಗೆ ILI ಮತ್ತು SARI ಕಂಟಕ!

ಧಾರವಾಡ: ಕರುನಾಡಲ್ಲಿ ಕೊರೊನಾ ಸುನಾಮಿ ವಿಸ್ಫೋಟಗೊಳ್ತಿದೆ. ದಶ ದಿಕ್ಕುಗಳಿಂದಲೂ ದಾಳಿ ಮಾಡ್ತಿರೋ ಕ್ರೂರಿ ಕೇಕೆ ಹಾಕ್ತಿದೆ. ಕಳ್ಳ ದಾರಿಯಲ್ಲಿ ನುಸುಳಿ. ಕಂಡ ಕಂಡವರ ದೇಹ ಹೊಕ್ತಿರೋ ಹೆಮ್ಮಾರಿ ಎಲ್ಲರನ್ನೂ ನಡುಗಿಸ್ತಿದೆ. ಮುಂಬೈನ ನಂಜಿನ ಮಹಾಘಾತದ ನಡುವೆ ಧಾರವಾಡಕ್ಕೆ ಮತ್ತೊಂದು ಮಹಾ ಆಘಾತ ಬಂದಪ್ಪಳಿಸಿದೆ. ಧಾರವಾಡಕ್ಕೆ ಕಂಟಕವಾಗ್ತಿದೆ ILI, SARI ಪ್ರಕರಣ! ಯೆಸ್​​, ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತ್ರಿಶತಕದತ್ತ ಮುನ್ನುಗ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ […]

ಪೇಡಾನಗರಿ ಧಾರವಾಡಕ್ಕೆ ಶುರುವಾಯ್ತು ಹೊಸ ಟೆನ್ಷನ್, ಜಿಲ್ಲೆಗೆ ILI ಮತ್ತು SARI ಕಂಟಕ!
ಆಯೇಷಾ ಬಾನು
|

Updated on: Jun 28, 2020 | 7:19 AM

Share

ಧಾರವಾಡ: ಕರುನಾಡಲ್ಲಿ ಕೊರೊನಾ ಸುನಾಮಿ ವಿಸ್ಫೋಟಗೊಳ್ತಿದೆ. ದಶ ದಿಕ್ಕುಗಳಿಂದಲೂ ದಾಳಿ ಮಾಡ್ತಿರೋ ಕ್ರೂರಿ ಕೇಕೆ ಹಾಕ್ತಿದೆ. ಕಳ್ಳ ದಾರಿಯಲ್ಲಿ ನುಸುಳಿ. ಕಂಡ ಕಂಡವರ ದೇಹ ಹೊಕ್ತಿರೋ ಹೆಮ್ಮಾರಿ ಎಲ್ಲರನ್ನೂ ನಡುಗಿಸ್ತಿದೆ. ಮುಂಬೈನ ನಂಜಿನ ಮಹಾಘಾತದ ನಡುವೆ ಧಾರವಾಡಕ್ಕೆ ಮತ್ತೊಂದು ಮಹಾ ಆಘಾತ ಬಂದಪ್ಪಳಿಸಿದೆ.

ಧಾರವಾಡಕ್ಕೆ ಕಂಟಕವಾಗ್ತಿದೆ ILI, SARI ಪ್ರಕರಣ! ಯೆಸ್​​, ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತ್ರಿಶತಕದತ್ತ ಮುನ್ನುಗ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ILI ಹಾಗೂ ಸಾರಿ ಪ್ರಕರಣಗಳು ಜಿಲ್ಲಾಡಳಿತಕ್ಕೆ ದೊಡ್ಡ ಟೆನ್ಷನ್ ತಂದೊಡ್ಡಿದೆ.

ಕೊರೊನಾಂತಕದ ದಾಳಿ ಇಡ್ತಿರೋ ಹೊತ್ತಲ್ಲೇ ಪ್ರತಿನಿತ್ಯ ಬರುತ್ತಿರೋ ಪ್ರಕರಣಗಳಲ್ಲಿ ILI ನಿಂದ ಆಸ್ಪತ್ರೆಗೆ ದಾಖಲಾದವರೇ ಹೆಚ್ಚಾಗಿದ್ದಾರೆ. ಅಂದ್ರೆ, ತೀವ್ರ ಜ್ವರ, ಕೆಮ್ಮು ಹಾಗೂ ನೆಗಡಿಯಿಂದ ಬಳಲಿ ಆಸ್ಪತ್ರೆ ಸೇರ್ತಿದ್ದಾರೆ. ಅವರಿಗೂ ಕೂಡ ಕೊರೊನಾ ಸೋಂಕು ತಗುಲಿರೋದು ಪರೀಕ್ಷೇಯ್ಲಿ ಪಕ್ಕಾ ಆಗ್ತಿದೆ. ಇದ್ರಿಂದ ಧಾರವಾಡ ಜಿಲ್ಲೆ ಹಾಗೂ ಅಕ್ಕಪಕ್ಕದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡ ಕಂಗೆಟ್ಟು ಕೂತಿದ್ದಾರೆ.

ಇನ್ನು, ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪರೀಕ್ಷೆ ಮಾಡಿದಾಗ ಕೊರೊನಾ ವಿಸ್ಫೋಟಗೊಳ್ತಿರೋದು ಪಕ್ಕಾ ಆಗಿತ್ತು. ಅಲ್ಲೊಂದು ಇಲ್ಲೊಂದು ILI ಹಾಗೂ SARI ಪ್ರಕರಳು ಪತ್ತೆಯಾಗ್ತಿದ್ವು. ಆದ್ರೆ ಇದೇ ಶುಕ್ರವಾರ ಜಿಲ್ಲೆಯಲ್ಲಿ ದೃಢಪಟ್ಟ 30 ಪ್ರಕರಣಗಳಲ್ಲಿ 20 ILI ಹಾಗೂ ಎರಡು SARI ಕೇಸ್​​​ಗಳೇ ಅನ್ನೋದು ಎಲ್ಲರ ನಿದ್ದೆಗೆಸಿಡಿಸಿದೆ. ಈ ಸೋಂಕಿತ ವ್ಯಕ್ತಿಗಳಿಗೆ ಕೊರೊನಾ ಎಲ್ಲಿಂದ ಬಂತು ಅನ್ನೋದು ತಿಳಿಯೋದೇ ಕಷ್ಟವಾಗಿದೆ.

ಇದೇ ರೀತಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬರುತ್ತಿರೋ ಪ್ರಕರಣಗಳ ಪೈಕಿ ಸಾಕಷ್ಟು ಪ್ರಮಾಣದಲ್ಲಿ ILI ಪ್ರಕರಣಗಳೇ ಆಗಿವೆ. ಇದುವರೆಗೂ ಗ್ರಾಮೀಣ ಪ್ರದೇಶದಲ್ಲಿ ILI ಪ್ರಕರಣಗಳು ಹೆಚ್ಚಾಗಿ ಕಂಡು ಬರ್ತಿದೆ. ಇದನ್ನ ನೋಡಿದ್ರೆ ಕೊರೊನಾ ಮೂರನೇ ಹಂತಕ್ಕೆ ತಲುಪಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಒಟ್ನಲ್ಲಿ ಕೊರೊನಾ ಹಾವಳಿಗೆ ಸಿಲುಕಿ ಪೇಡಾನಗರಿ ಧಾರವಾಡ ದಂಗು ಬಡಿದು ಕೂತಿದೆ. ಕ್ರೂರಿ ವೈರಸ್ ಜೊತೆ ಜೊತೆಗೆ ILI, SARI ಕೇಸ್​​ಗಳು ರೌದ್ರಾವತಾರ ಮೆರೀತದ್ದು ಮಂದ್ಯಾವ ಗತಿ ಕಾಣಿಸುತ್ತೆ ಅಂತ ಜನ ಚಿಂತೆಗೆ ಬಿದ್ದಿದ್ದಾರೆ.