ಪತ್ನಿಯ ವಿಚಾರಕ್ಕೆ ಜಗಳ: ಬಾಯ್ ಫ್ರೆಂಡ್ ನಿಂದ ಪತಿಯ ಹತ್ಯೆ, ಎಲ್ಲಿ?
ಬೆಂಗಳೂರು: ಹುಡುಗಿ ವಿಚಾರಕ್ಕಾಗಿ ಕಂಠಪೂರ್ತಿ ಕುಡಿಸಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನೆಟ್ಕಲಪ್ಪ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ಬಳಿ ನಡೆದಿದೆ. ಸಿದ್ದರಾಜು ಕೊಲೆಯಾದವ ಎಂದು ತಿಳಿದುಬಂದಿದೆ. ಮೂಲತಃ ಮಳವಳ್ಳಿವನಾಗಿದ್ದ ಸಿದ್ಧರಾಜು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆರು ತಿಂಗಳ ಹಿಂದೆ ಲತಾ ಎಂಬಾಕೆಯನ್ನು ಮದುವೆಯಾಗಿದ್ದ ಸಿದ್ದರಾಜು, ಆಕೆಯನ್ನು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದ. ಈ ಮಧ್ಯೆ, ಕುಡಿತದ ಚಟಕ್ಕೆ ಬಿದ್ದ ಸಿದ್ದರಾಜು ದಿನಾ ಕುಡಿದು ಬಂದು ಪತ್ನಿಯ ಜೊತೆ […]

ಬೆಂಗಳೂರು: ಹುಡುಗಿ ವಿಚಾರಕ್ಕಾಗಿ ಕಂಠಪೂರ್ತಿ ಕುಡಿಸಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನೆಟ್ಕಲಪ್ಪ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ಬಳಿ ನಡೆದಿದೆ.
ಸಿದ್ದರಾಜು ಕೊಲೆಯಾದವ ಎಂದು ತಿಳಿದುಬಂದಿದೆ. ಮೂಲತಃ ಮಳವಳ್ಳಿವನಾಗಿದ್ದ ಸಿದ್ಧರಾಜು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆರು ತಿಂಗಳ ಹಿಂದೆ ಲತಾ ಎಂಬಾಕೆಯನ್ನು ಮದುವೆಯಾಗಿದ್ದ ಸಿದ್ದರಾಜು, ಆಕೆಯನ್ನು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದ. ಈ ಮಧ್ಯೆ, ಕುಡಿತದ ಚಟಕ್ಕೆ ಬಿದ್ದ ಸಿದ್ದರಾಜು ದಿನಾ ಕುಡಿದು ಬಂದು ಪತ್ನಿಯ ಜೊತೆ ಜಗಳ ತೆಗೆಯುತ್ತಿದ್ದ.
ಇದರಿಂದ ಬೇಸತ್ತಿದ್ದ ಲತಾಗೆ.. ಈ ಮದ್ಯೆ ಹೂವಿನ ವ್ಯಾಪಾರಿ ಲಕ್ಷ್ಮಣ ಎಂಬಾತನ ಪರಿಚಯವಾಗಿತ್ತು. ಕಾಲ ಕಳೆದಂತೆ, ಸಿದ್ದರಾಜುವಿನ ಕುಡಿತದಿಂದ ರೋಸಿ ಹೋಗಿದ್ದ ಲತಾ, ಗಂಡನನ್ನು ತೊರೆದು ಲಕ್ಷ್ಮಣ ಅಲಿಯಾಸ್ ಲಚ್ಚಿ ಜೊತೆ ವಾಸ ಮಾಡಲು ಪ್ರಾರಂಭಿಸಿದಳು. ಈ ವಿಚಾರ ತಿಳಿದ ಸಿದ್ದರಾಜು ದಿನಾ ಕುಡಿದು ಬಂದು ಲಕ್ಷ್ಮಣನ ಮನೆ ಬಳಿ ಗಲಾಟೆ ಮಾಡುತ್ತಿದ್ದ.
ನಿನ್ನೆ ಇದೇ ವಿಚಾರವಾಗಿ ಲಕ್ಷ್ಮಣ ತನ್ನ ಗೆಳೆಯರನ್ನು ಒಂದು ಕಡೆ ಸೇರಿಸಿಕೊಂಡಿದ್ದ. ಗೆಳೆಯರ ಜೊತೆಗೂಡಿ ಸಿದ್ದರಾಜುನನ್ನು ಆಟೋದಲ್ಲಿ ಕರೆದೊಯ್ದು ಕಂಠಪೂರ್ತಿ ಕುಡಿಸಿ, ರಾತ್ರಿ 9.30ರ ಸುಮಾರಿಗೆ ನೆಟ್ಕಲಪ್ಪ ಸರ್ಕಲ್ ಬಳಿಯ ಖಾಸಗಿ ಹೊಟೆಲ್ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.