ವಿಕ್ಟೋರಿಯಾ ಆಸ್ಪತ್ರೆ ಎಡವಟ್ಟು, ಸೋಂಕಿತೆಯನ್ನ ನೆಗೆಟಿವ್ ಎಂದು ಮನೆಗೆ ಕಳಿಸಿದ ಸಿಬ್ಬಂದಿ
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಯ ಎಡವಟ್ಟಿನಿಂದಾಗಿ ರಾಮನಗರದ ಕುಟುಂಬ ಮತ್ತು ಆ ಕುಟುಂಬವಿರುವ ಗ್ರಾಮ ಈಗ ಆತಂಕಕ್ಕೊಳಗಾಗಿದೆ. ಕೊರೊನಾ ಪಾಸಿಟಿವ್ ಇದ್ದ ಮಹಿಳೆಯನ್ನ ನೆಗೆಟಿವ್ ಅಂತಾ ಮನೆಗೆ ಕಳಿಸಿದ್ದ ಆಸ್ಪತ್ರೆ ಸಿಬ್ಬಂದಿ ಈಗ ಪಾಸಿಟಿವ್ ಇದೆ ನಿಮ್ಮ ಅಡ್ರೆಸ್ ಹೇಳಿ ಅಂತಿದೆ. ಹೌದು, ಕೊರೊನಾ ಸೋಂಕಿನಿಂದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನ ನಿಮ್ಮ ವರದಿ ನೆಗೆಟಿವ್ ಬಂದಿದೆ ಅಂತಾ ಸಿಬ್ಬಂದಿ ಮನೆಗೆ ಕಳಿಸಿದ್ದಾರೆ. ಜಗತ್ತೇ ಗೆದ್ದ ಖುಷಿಯಲ್ಲಿ ಆ ಮಹಿಳೆ ತನ್ನ ಗ್ರಾಮಕ್ಕೆ ತೆರಳಿ ಕುಟುಂಬದವರೊಡನೆ […]
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಯ ಎಡವಟ್ಟಿನಿಂದಾಗಿ ರಾಮನಗರದ ಕುಟುಂಬ ಮತ್ತು ಆ ಕುಟುಂಬವಿರುವ ಗ್ರಾಮ ಈಗ ಆತಂಕಕ್ಕೊಳಗಾಗಿದೆ. ಕೊರೊನಾ ಪಾಸಿಟಿವ್ ಇದ್ದ ಮಹಿಳೆಯನ್ನ ನೆಗೆಟಿವ್ ಅಂತಾ ಮನೆಗೆ ಕಳಿಸಿದ್ದ ಆಸ್ಪತ್ರೆ ಸಿಬ್ಬಂದಿ ಈಗ ಪಾಸಿಟಿವ್ ಇದೆ ನಿಮ್ಮ ಅಡ್ರೆಸ್ ಹೇಳಿ ಅಂತಿದೆ.
ಹೌದು, ಕೊರೊನಾ ಸೋಂಕಿನಿಂದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನ ನಿಮ್ಮ ವರದಿ ನೆಗೆಟಿವ್ ಬಂದಿದೆ ಅಂತಾ ಸಿಬ್ಬಂದಿ ಮನೆಗೆ ಕಳಿಸಿದ್ದಾರೆ. ಜಗತ್ತೇ ಗೆದ್ದ ಖುಷಿಯಲ್ಲಿ ಆ ಮಹಿಳೆ ತನ್ನ ಗ್ರಾಮಕ್ಕೆ ತೆರಳಿ ಕುಟುಂಬದವರೊಡನೆ ಬೆರೆತಿದ್ದಾರೆ. ಅವರ ಜತೆ ಗ್ರಾಮದಲ್ಲೆಲ್ಲಾ ಓಡಾಡಿದ್ದಾರೆ. ಆದ್ರೆ ಈಗ ಮಹಿಳೆ ತನ್ನ ಮನೆಗೆ ವಾಪಸಾದ ಎರಡು ದಿನಗಳ ಬಳಿಕ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ನಿಮ್ಮ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ. ನಿಮ್ಮ ಅಡ್ರೇಸ್ ಹೇಳಿ ಬಂದು ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.
ಇದನ್ನ ಕೇಳಿ ಮಹಿಳೆ ಶಾಕ್‌ಗೊಳಗಾಗಿದ್ದಾರೆ. ಅಷ್ಟೇ ಅಲ್ಲ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಈಗ ಚಳಿ ಶುರುವಾಗಿದೆ. ಕಂಗಾಲಾಗಿರುವ ಮಹಿಳೆ ಮತ್ತು ಗ್ರಾಮಸ್ಥರು ಈಗ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
Published On - 12:21 pm, Tue, 30 June 20