Australia vs India Test Series | ಅಂತಿಮ ಟೆಸ್ಟ್​: 336 ರನ್​ಗಳಿಗೆ ಪತನಗೊಂಡ ಟೀಂ ಇಂಡಿಯಾ, ಆಸಿಸ್​ಗೆ 33 ರನ್​ಗಳ ಮುನ್ನಡೆ..

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 336 ರನ್​ ಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 33 ರನ್​ಗಳ ಮುನ್ನಡೆ​ ಪಡೆದಿದೆ.

Australia vs India Test Series | ಅಂತಿಮ ಟೆಸ್ಟ್​: 336 ರನ್​ಗಳಿಗೆ ಪತನಗೊಂಡ ಟೀಂ ಇಂಡಿಯಾ, ಆಸಿಸ್​ಗೆ 33 ರನ್​ಗಳ ಮುನ್ನಡೆ..
ಶತಕದ ಜೊತೆಯಾಟ ಆಡಿ ತಂಡಕ್ಕೆ ನೆರವಾದ ಶಾರ್ದೂಲ್​ ಠಾಕೂರ್ ಹಾಗೂ ವಾಷಿಂಗ್​ಟನ್​ ಸುಂದರ್​
Follow us
ಪೃಥ್ವಿಶಂಕರ
|

Updated on:Jan 17, 2021 | 12:59 PM

ಬ್ರಿಸ್ಬೇನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 336 ರನ್​ ಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 33 ರನ್​ಗಳ ಮುನ್ನಡೆ​ ಪಡೆದಿದೆ.

180 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಶಾರ್ದೂಲ್​ ಠಾಕೂರ್​ ಹಾಗೂ ವಾಷಿಂಗ್ಟನ್ ಸುಂದರ್​ ಅವರ ಶತಕದ ಜೊತೆಯಾಟ ಕೊಂಚ ನೆರವು ನೀಡಿತು. ಅಲ್ಲದೆ ಈ ಜೋಡಿ ವೈಯಕ್ತಿಕವಾಗಿ ಚೊಚ್ಚಲ ಅರ್ಧ ಶತಕ ಸಹ ಬಾರಿಸಿದರು.

ಡ್ರಿಂಕ್ಸ್​ ವಿರಾಮಕ್ಕೂ ಮುನ್ನ 67 ರನ್​ ಗಳಿಸಿದ್ದ ಶಾರ್ದೂಲ್​ ಠಾಕೂರ್​, ಪ್ಯಾಟ್​ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರೆ, 62 ರನ್​ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ವಾಷಿಂಗ್​ಟನ್ ಸುಂದರ್​ ಮಿಚೆಲ್​ ಸ್ಟಾರ್ಕ್​ಗೆ ವಿಕೆಟ್​ ಒಪ್ಪಿಸಿದರು. ಈ ಜೋಡಿಯ ನಂತರ ಬಂದ ಕೆಳಕ್ರಮಾಂಕದ ಆಟಗಾರರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬೇಗನೆ ವಿಕೆಟ್​ ಒಪ್ಪಿಸಿದರು. ಪರಿಣಾಮವಾಗಿ ಟೀಂ ಇಂಡಿಯಾ 336 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು.

ಭಾರತದ ಪರ ರೋಹಿತ್​ ಶರ್ಮ 44, ಶುಭ್​ಮನ್​ ಗಿಲ್​ 7, ಚೇತೇಶ್ವರ್​ ಪೂಜಾರ 27, ಅಜಿಂಕ್ಯಾ ರಹಾನೆ 37, ಮಾಯಾಂಕ್​ ಅಗರ್​ವಾಲ್​ 38, ರಿಷಬ್ ಪಂತ್ 23,​ ವಾಷಿಂಗ್ಟನ್ ಸುಂದರ್ 62,​ ಶಾರ್ದೂಲ್​ ಠಾಕೂರ್ 67,​ ನವ್​ದೀಪ್​ ಸೈನಿ 5, ಮಹಮದ್​ ಸಿರಾಜ್ 13,​ ನಟರಾಜನ್ 1 ರನ್​ ಗಳಿಸಿದರು.

ಆಸ್ಟ್ರೇಲಿಯಾ ಪರ ಮಿಂಚಿದ ಜೋಶ್​ ಹ್ಯಾಝಲ್​ವುಡ್​ 5 ವಿಕೆಟ್ ಪಡೆದರು. ಕಮಿನ್ಸ್​ ಹಾಗೂ ಸ್ಟಾರ್ಕ್​ ತಲಾ 2 ವಿಕೆಟ್​ ಪಡೆದರೆ, ಲಿಯಾನ್​ 1 ವಿಕೆಟ್​ ಪಡೆದರು.

Published On - 12:48 pm, Sun, 17 January 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್