IND vs AUS: ಆಸಿಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್​ವೆಲ್, ವೇಡ್

| Updated By: ganapathi bhat

Updated on: Apr 07, 2022 | 5:34 PM

ಆಸಿಸ್ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿ ಭಾರತೀಯರಿದ್ದಾರೆ. ಮೊದಲು ಬ್ಯಾಟ್ ಬೀಸಿದ ಆಸ್ಟ್ರೇಲಿಯಾ ಆಟದ ಚುಟುಕು ವಿವರ ಇಲ್ಲಿದೆ.

IND vs AUS: ಆಸಿಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್​ವೆಲ್, ವೇಡ್
ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಮ್ಯಾಥ್ಯೂ ವೇಡ್
Follow us on

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಭಾರತಕ್ಕೆ ಗೆಲ್ಲಲು 187 ರನ್​ಗಳ ಗುರಿ ನೀಡಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ಕೈವಶಮಾಡಿಕೊಂಡಿರುವ ಭಾರತ ಆತ್ಮವಿಶ್ವಾಸದ ಆಟ ಆಡುತ್ತಿದೆ.

ಭಾರತದ ಬೌಲರ್​ಗಳ ಪ್ರದರ್ಶನ ಹೇಗಿತ್ತು
ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಭಾರತದ ಬೌಲಿಂಗ್ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿರಲಿಲ್ಲ. ಭಾರತೀಯ ಎಸೆತಗಾರರು, 20 ಓವರ್​ಗಳಲ್ಲಿ 186 ರನ್ ನೀಡಿ ಕೇವಲ 5 ವಿಕೆಟ್ ಕಬಳಿಸಿದ್ದಾರೆ. ವಾಷಿಂಗ್ಟನ್ ಸುಂದರ್ 2 ವಿಕೆಟ್, ಟಿ. ನಟರಾಜನ್ ಮತ್ತು ಶಾರ್ದುಲ್ ಠಾಕುರ್ ತಲಾ 1 ವಿಕೆಟ್ ಪಡೆದಿದ್ದಾರೆ. ಡಿ ಆರ್ಕಿ ಶಾರ್ಟ್ ರನೌಟ್ ಆಗಿದ್ದಾರೆ.

ಮೂವರು ದಾಂಡಿಗರು ಎರಡಂಕಿ ದಾಟಿದರು
ಕಾಂಗರೂ ಪಡೆಯ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದಾರೆ. ಮ್ಯಾಥ್ಯೂ ವೇಡ್ 80 (53), ಮ್ಯಾಕ್ಸ್​ವೆಲ್ 54 (36) ಮತ್ತು ಸ್ಮಿತ್ 24 (23) ಉತ್ತಮ ಪ್ರದರ್ಶನ ತೋರಿ ಒಟ್ಟು ಮೊತ್ತ 186 ಆಗಲು ಕಾರಣರಾಗಿದ್ದಾರೆ. ಉಳಿದ ಆಟಗಾರರು ಒಂದಂಕಿ ರನ್ ಗಳಿಸಲಷ್ಟೇ ಸಾಧ್ಯವಾಗಿದೆ. ತಂಡ ಸೇರಿದ ನಾಯಕ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿ ನಿರಾಶೆ ಮೂಡಿಸಿದ್ದಾರೆ.

ಇಷ್ಟಾದರೂ, ಆಸ್ಟ್ರೇಲಿಯಾ ಬ್ಯಾಟಿಂಗ್ ಬಲಾಢ್ಯರನ್ನು ಸಂಪೂರ್ಣವಾಗಿ ಹಿಡಿದಿಡಲು ವಿಫಲರಾದ ಭಾರತದ ಬೌಲರ್​ಗಳು, ರನ್ ಗಳಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. 186 ರನ್ ಬಿಟ್ಟುಕೊಟ್ಟು 187 ರನ್ ಟಾರ್ಗೆಟ್ ಪಡೆದುಕೊಂಡಿದ್ದಾರೆ.

ಭಾರತಕ್ಕೆ 187ರನ್​ಗಳ ಸವಾಲೊಡ್ಡಿದ ಆಸ್ಟ್ರೇಲಿಯ

Published On - 5:17 pm, Tue, 8 December 20