
ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಆಟಗಾರರ ಸ್ಟೀವ್ ಸ್ಮಿತ್ ತಮ್ಮ ಟೆಸ್ಟ್ ಕ್ರಿಕೆಟ್ನ 27ನೇ ಶತಕ ಬಾರಿಸಿ ಮಿಂಚಿದರು. ಈ ಶತಕದ ಮೂಲಕ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಟೆಸ್ಟ್ ಶತಕದ ದಾಖಲೆಯನ್ನು ಸ್ಟೀವ್ ಸ್ಮಿತ್ ಸರಿಗಟ್ಟಿದ್ದಾರೆ.
ತಮ್ಮ ಕೊನೆಯ 4 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 10 ರನ್ ಗಳಿಸಿದ್ದ 31 ವರ್ಷದ ಸ್ಟೀವ್ ಸ್ಮಿತ್, ಇಂದು ಅದ್ಭುತವಾಗಿ ಆಡಿದರು. ನವದೀಪ್ ಸೈನಿ ಎಸೆತದಲ್ಲಿ ಮೂರು ರನ್ ಗಳಿಸಿ, ಶತಕ ಬಾರಿಸಿದರು. ತನ್ಮೂಲಕ ಈ ಸಾಧನೆ ಮಾಡಿದ್ದಾರೆ. 2019 ರಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 211 ರನ್ ಗಳಿಸಿದ್ದ ಸ್ಟೀವ್ ಸ್ಮಿತ್, ಆದಾದ ಬಳಿಕ ಗಳಿಸಿದ ಮೊದಲ ಶತಕ ಇದಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಭಾರತದ ವಿರುದ್ಧ, ಸ್ಟೀತ್ ಗಳಿಸಿದ 4 ನೇ ಶತಕ ಇದು.
ಸಕ್ರಿಯ ಕ್ರಿಕೆಟಿಗರಲ್ಲಿ ಸ್ಟೀತ್ ಮತ್ತು ಕೊಹ್ಲಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಆಟಗಾರರಾಗಿದ್ದಾರೆ. ಇಷ್ಟೇ ಅಲ್ಲದೆ, 136 ಇನ್ನಿಂಗ್ಸ್ ಆಡಿರುವ ಸ್ಟೀವ್ ಸ್ಮಿತ್ 27 ಟೆಸ್ಟ್ ಶತಕಗಳನ್ನು ಗಳಿಸಿದ ಎರಡನೇ ವೇಗದ ಆಟಗಾರ ಎನಿಸಿಕೊಂಡಿದ್ದಾರೆ. ಡಾನ್ ಬ್ರಾಡ್ಮನ್ (70 ಇನ್ನಿಂಗ್ಸ್) ಈ ಸಾಧನೆ ಮಾಡಿದ ಆಟಗಾರರಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ತಲಾ 141 ಇನ್ನಿಂಗ್ಸ್ ಆಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಸುನಿಲ್ ಗವಾಸ್ಕರ್ 154 ಇನ್ನಿಂಗ್ಸ್ ಆಡುವುದರೊಂದಿಗೆ 4 ನೇ ಸ್ಥಾನದಲ್ಲಿದ್ದಾರೆ.
India vs Australia Test Series ಸ್ಮಿತ್ ಸೆಂಚುರಿ.. ಜಡೇಜಾಗೆ 4 ವಿಕೆಟ್: ಆಸ್ಟ್ರೇಲಿಯಾ ಆಲೌಟ್
c