India vs Australia Test Series 2ನೇ ದಿನದಾಟ: ಗಿಲ್ ಅರ್ಧ ಶತಕ.. ಭಾರತಕ್ಕೆ ಆರಂಭಿಕ ಆಘಾತ
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ 50 ರನ್ಗಳ ಜೊತೆಯಾಟ ಆಡುವುದರ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ 26 ರನ್ ಗಳಿಸಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮ ಹ್ಯಾಝಲ್ವುಡ್ ಬಲೆಗೆ ಬಿದ್ದರು.

ಸಿಡ್ನಿ: ಇಂಡೋ- ಆಸಿಸ್ ನಡುವಿನ 3ನೇ ಟೆಸ್ಟ್ನ 2ನೇ ದಿನದಾಟ ಅಂತ್ಯವಾಗಿದ್ದು, ಮೊದಲನೇ ದಿನದಾಟದಲ್ಲಿ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸಿಸ್ ಪಡೆ, 3ನೇ ದಿನದಾಟದಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತ್ತು. ಇದಕ್ಕೆ ಪ್ರತ್ತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿದೆ.
ಸ್ಟೀವ್ ಸ್ಮಿತ್ ಅಮೋಘ ಶತಕ.. 2ನೇ ದಿನದಾಟದಲ್ಲಿ ಉತ್ತಮ ಆರಂಭ ಪಡೆದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅವರ ಅಮೋಘ 131 ರನ್ ಹಾಗೂ ಲಾಬುಶೆನ್ ಅವರ 91 ರನ್ಗಳ ನೆರವಿನಿಂದ ಬೃಹತ್ ಮೊತ್ತ ಕಲೆಹಾಕುವತ್ತ ಸಾಗಿತ್ತು. ಆದರೆ ಟೀಂ ಇಂಡಿಯಾದ ಬೌಲರ್ಗಳು ಇದಕ್ಕೆ ಬ್ರೇಕ್ ಹಾಕಿದರು.
91 ರನ್ ಗಳಿಸಿ ಆಡುತ್ತಿದ್ದ ಲಾಬುಶೆನ್ಗೆ ರವೀಂದ್ರ ಜಡೇಜಾ ಪೆವಿಲಿಯನ್ ದಾರಿ ತೋರಿಸಿದರು. ಹಾಗೆಯೇ ಶತಕ ಬಾರಿಸಿ ಆರ್ಭಟಿಸುತ್ತಿದ್ದ ಸ್ಟೀವ್ ಸ್ಮಿತ್, ಜಡೇಜಾ ಮಾಡಿದ ಅದ್ಭುತ ಫೀಲ್ಡಿಂಗ್ಗೆ ಬಲಿಯಾದರು. ಅಂತಿಮವಾಗಿ ಮಿಚೆಲ್ ಸ್ಟಾರ್ಕ್ ಕೊಂಚ ಅಬ್ಬರಿಸಿದ್ದನ್ನು ಬಿಟ್ಟರೆ, ಉಳಿದ ಆಸಿಸ್ ಆಟಗಾರರು ಮೈದಾನದಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ.
4 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ.. ಭಾರತದ ಪರ 4 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಆಸಿಸ್ನ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿಯುವಲ್ಲಿ ಯಶಸ್ವಿಯಾದರು. ಹಾಗೆಯೇ ನವ್ದೀಪ್ ಸೈನಿ ಹಾಗೂ ಬುಮ್ರಾ ತಲಾ 2 ವಿಕೆಟ್ ತೆಗೆಯುವುದರ ಮೂಲಕ ತಂಡಕ್ಕೆ ನೆರವಾದರು. ವೇಗಿ ಸಿರಾಜ್ ಕೂಡ 1 ವಿಕೆಟ್ ಪಡೆದರು.
ಆಸಿಸ್ನ 368 ರನ್ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ 50 ರನ್ಗಳ ಜೊತೆಯಾಟ ಆಡುವುದರ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ 26 ರನ್ ಗಳಿಸಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮ ಹ್ಯಾಝಲ್ವುಡ್ ಬಲೆಗೆ ಬಿದ್ದರು.
ಅರ್ಧ ಶತಕ ಬಾರಿಸಿದ ಶುಭ್ಮನ್ ಗಿಲ್.. ನಂತರ ಬಂದ ಪೂಜಾರಾಗೆ ಉತ್ತಮ ಸಾಥ್ ನೀಡಿದ ಗಿಲ್ ಅರ್ಧ ಶತಕ ಪೂರೈಸಿದರು. 50 ರನ್ ಬಳಿಕ ಎಚ್ಚರಿಕೆಯ ಆಟವಾಡಬೇಕಿದ್ದ ಗಿಲ್ ಅರ್ಧ ಶತಕದ ಸಂಭ್ರಮದಲ್ಲೇ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್ಗಳ ನಂತರ ತಾಳ್ಮೆಯ ಆಟಕ್ಕೆ ಮುಂದಾಗಿರುವ ನಾಯಕ ಅಜಿಂಕ್ಯಾ ರಹಾನೆ ಹಾಗೂ ಪೂಜಾರ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂದಿನ ದಿನದಾಟದ ಅತ್ಯಂಕ್ಕೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ.
India vs Australia Test Series ಸ್ಮಿತ್ ಸೆಂಚುರಿ.. ಜಡೇಜಾಗೆ 4 ವಿಕೆಟ್: ಆಸ್ಟ್ರೇಲಿಯಾ ಆಲೌಟ್




