ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಬೌಲರ್ಗಳ ಬೆವರಿಳಿಸಿದ್ದಾರೆ. ರಿಷಬ್ ಪಂತ್, ಚೇತೇಶ್ವರ ಪೂಜಾರ ಆಸ್ಟ್ರೇಲಿಯಾ ಬೌಲರ್ಗಳನ್ನು ಬೆಂಡೆತ್ತಿದರೆ, ಹನುಮ ವಿಹಾರಿ ಹಾಗೂ ರವೀಂದ್ರಚಂದ್ರ ಅಶ್ವಿನ್ ಕಾಂಗರೂ ಬೌಲರ್ಗಳು ಬೆವರು ಹರಿಸುವಂತೆ ಮಾಡಿದ್ದರು. ಈ ಮಧ್ಯೆ ಆಸ್ಟ್ರೇಲಿಯಾ ಟೀಂ ಇಂಡಿಯಾವನ್ನು ಸೋಲಿಸಲು ತೀರಾನೆ ಕೆಳಮಟ್ಟಕ್ಕೆ ಇಳಿದಿದ್ದು ಬಯಲಾಗಿದೆ.
ಅದು ಎರಡನೇ ಸೆಷನ್ ಸಮಯ. ಡ್ರಿಂಕ್ ಬ್ರೇಕ್ ಬಿಡಲಾಗಿತ್ತು. ಎಲ್ಲರೂ ತಂಪು ಪಾನೀಯ ಕುಡಿಯುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಕಳ್ಳ ಬೆಕ್ಕಿನಂತೆ ಸುಮ್ಮನೆ ಎಲ್ಲರ ಕಣ್ಣ ತಪ್ಪಿಸಿ ಸ್ಟಂಪ್ ಬಳಿ ಬಂದ ಸ್ಟೀವ್ ಸ್ಮಿತ್, ರಿಷಬ್ ಪಂತ್ ಹಾಕಿದ್ದ ಬ್ಯಾಟಿಂಗ್ ಗಾರ್ಡ್ಅನ್ನು ಅಳಿಸಿ ಹಾಕಿದ್ದಾರೆ. ಕೆಲಸ ಮುಗಿದ ನಂತರ ಬಂದಷ್ಟೇ ಸೈಲೆಂಟ್ ಆಗಿ ಸ್ಥಳದಿಂದ ಕಾಲ್ಕಿತ್ತಿತ್ತಿದ್ದಾರೆ. ನಂತರ ಬಂದ ರಿಷಬ್ ಪಂತ್ ಮತ್ತೆ, ಬ್ಯಾಟಿಂಗ್ ಗಾರ್ಡ್ ಹಾಕಿಕೊಂಡಿದ್ದಾರೆ.
Australia's Steve Smith shadow-batted as he came to the crease after the drinks break, and proceeded to remove Rishabh Pant's guard marks.
#INDvAUS pic.twitter.com/YrXrh3UlKl
— Manoj Singh Negi (@Manoj__negi) January 11, 2021
ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಎಂದುಕೊಳ್ಳುತ್ತದೆಯಂತೆ. ಸ್ಮಿತ್ ಕತೆಯೂ ಅದೇ ರೀತಿ ಆಗಿದೆ. ಸ್ಮಿತ್ ಮಾಡಿದ ಕೀಳುಮಟ್ಟದ ಕೆಲಸ ಸ್ಟಂಪ್ ಕ್ಯಾಮೆರಾದಲ್ಲಿ ಸೆರಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ಕೀಳುಮಟ್ಟದ ಗಿಮಿಕ್ಗೆ ವೀರೇದ್ರ ಸೆಹ್ವಾಗ್ ಸಹ ಛೀಮಾರಿ ಹಾಕಿದ್ದಾರೆ. ಸ್ಮಿತ್ ಮಾಡಿರುವ ಕೆಲಸದಿಂದ ಯಾವುದೇ ಪ್ರಯೋಜವಾಗಿಲ್ಲ ಎಂದು ಟೀಕೆ ಮಾಡಿದ್ದಾರೆ.
ಸ್ಟೀವ್ ಸ್ಮಿತ್ ಪರವಾಗಿ ನಿಂತಿದ್ದ ಕೊಹ್ಲಿ
ನಮ್ಮ ಎದುರು ಆಡುವವರು ಎದುರಾಳಿ ಮಾತ್ರ ವೈರಿ ಅಲ್ಲ ಎನ್ನುವುದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಬೀತು ಮಾಡಿದ್ದರು. ಬಾಲ್ ಟ್ಯಾಂಪರಿಂಗ್ ಪ್ರಕರಣದ ಜವಾಬ್ದಾರಿ ಹೊತ್ತು ಸ್ಟೀವ್ ಸ್ಮಿತ್ ಕ್ರಿಕೆಟ್ನಿಂದ ಒಂದು ವರ್ಷ ಹೊರಗುಳಿದಿದ್ದರು. 2019ರ ವರ್ಲ್ಡ್ ಕಪ್ಗೆ ಸ್ಮಿತ್ ಮರಳಿದ್ದರು. ಸ್ಮಿತ್ ಭಾರತದ ವಿರುದ್ಧ ಮೈದಾನಕ್ಕೆ ಇಳಿದಾಗ ಅಭಿಮಾನಿಗಳು ಮೋಸಗಾರ ಎಂದು ಕೂಗಿದ್ದರು. ಈ ವೇಳೆ ಕೊಹ್ಲಿ ಅಭಿಮಾನಿಗಳಿಗೆ ಸ್ಮಿತ್ ಅವರನ್ನು ಹೊಗಳುವಂತೆ ಹುರಿದುಂಬಿಸಿದ್ದರು. ಇದಕ್ಕೆ ತದ್ವಿರುದ್ಧವಾಗಿ ಸ್ಮಿತ್ ನಡೆದುಕೊಂಡಿದ್ದಾರೆ.
ತಂಡವನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ ವಿಹಾರಿ- ಅಶ್ವಿನ್; 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ