
ಓಕೆ, ಪಾಕಿಸ್ತಾನದ ಮಾಜಿ ವೇಗದ ಶೋಯೆಬ್ ಅಖ್ತರ್, ಖಂಡಿತವಾಗಿಯೂ ಜಹೀರ್ ಆಲ್ಲ ಮತ್ತಯ ಯಾವತ್ತೂ ಆಗಲಾರರು. ಕೆಲವು ಇಂಡಿಯನ್ ಆಟಗಾರರ ಬಗ್ಗೆ ಅಖ್ತರ್ ಆಗಾಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ನಿಜವಾದರೂ, ಅವರಿಗೆ ಇಲ್ಲಿನ ಆಟಗಾರರ ಬಗ್ಗೆ ನೆಗೆಟಿವ್ ಕಾಮೆಂಟ್ಗಳನ್ನು ಮಾಡುವುದೆಂದರೆ ಎಲ್ಲಿಲ್ಲದ ಖುಷಿ. ಭಾರತ ಮತ್ತು ಆಸ್ಟ್ರೇಲಿಯ ನಡುವೆ ನವೆಂಬರ್ 27ರಿಂದ ಪ್ರಾರಂಭವಾಗಲಿರುವ ಸೀಮಿತ ಓವರ್ ಮತ್ತು ಟೆಸ್ಟ್ ಸರಣಿಯ ಬಗ್ಗೆ ಇಡೀ ಕ್ರಿಕೆಟ್ ವಿಶ್ವವೇ ಉತ್ಸುಕವಾಗಿದೆ. ಹಲವಾರು ಮಾಜಿ ಆಟಗಾರರು ಸರಣಿ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.
ಆಸ್ಟ್ರೇಲಿಯ ಹೇಗೆ ಭಾರತವನ್ನು ಸೋಲಿಸಬಹುದು ಎನ್ನುವುದರ ಬಗ್ಗೆ ಆಖ್ತರ್ ಜಾಸ್ತಿ ತಲೆ ಕೆಡಿಸಿಕೊಂಡಿರುವಂತಿದೆ. ಅವರು ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾಗೆ ವೇಗದ ಬೌಲಿಂಗ್ಗೆ ನೆರವಾಗುವ ಮತ್ತು ಬೌನ್ಸಿ ವಿಕೆಟ್ಗಳನ್ನು ತಯಾರಿಸುವಂತೆ ಸಲಹೆಯನ್ನೂ ನೀಡಿದ್ದಾರೆ. ಭಾರತೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಖ್ತರ್, ಆಸ್ಟ್ರೇಲಿಯಾದ ಬೌನ್ಸಿ ವಿಕೆಟ್ಗಳ ಮೇಲೆ ಭಾರತದ ಬ್ಯಾಟ್ಸ್ಮನ್ಗಳು ರನ್ ಗಳಿಸ
‘‘ಆಸ್ಟ್ರೇಲಿಯ ಟೀಮಿನಲ್ಲಿ, ಮಿಶೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಜೊಶ್ ಹೆಜೆಲ್ವುಡ್ ಮೊದಲಾದ ಕ್ವಾಲಿಟಿ ವೇಗದ ಬೌಲರ್ಗಳಿದ್ದಾರೆ. ಅವರು ವಿಶ್ವದ ಯಾವುದೇ ಟೀಮಿನ ಬ್ಯಾಟಿಂಗನ್ನು ಧ್ವಂಸಗೊಳಿಸಬಲ್ಲರು ಹಾಗೆಯೇ ಅವರ ದೇಹಗಳನ್ನೂ ಸಹ. ಈ ಕಾರಣಕ್ಕಾಗೇ ಅವರು ವೇಗದ ಬೌಲಿಂಗ್ಗೆ ನೆರವಾಗುವ ಮತ್ತು ಬೌನ್ಸಿ ವಿಕೆಟ್ಗಳನ್ನು ತಯಾರಿಸಬೇಕು. ಟೆಸ್ಟ್ ಸರಣಿಯಲ್ಲಿ ಪಿಚ್ಗಳು ಹೇಗೆ ವರ್ತಿಸಲಿವೆ ಅನ್ನುವುದನ್ನು ನೋಡಲು ಕಾತುರನಾಗಿದ್ದೇನೆ. ಕಳೆದ ಬಾರಿ ಸರಣಿ ಸೋತಿರುವುದರಿಂದ ಆಸ್ಸೀ ವೇಗಿಗಳು ಈ ಸಲ ಭಾರತೀಯ ಬ್ಯಾಟ್ಸ್ಮನ್ಗಳ ಬದುಕನ್ನು ನರಕವಾಗಿಸಲಿದ್ದಾರೆ. ಡ್ರೈವ್ ಮಾಡಲು ದುರ್ಬಲ ಎಸೆತಗಳು ಭಾರತದ ಬ್ಯಾಟ್ಸ್ಮನ್ಗಳಿಗೆ ಸಿಗಲಾರವು, ಮತ್ತು ಅಲ್ಲಿನ ಪಿಚ್ಗಳಲ್ಲಿ ಆನ್ ದಿ ಅಪ್ ಡ್ರೈವ್ ಮಾಡುವುದು ಸುಲಭವಲ್ಲ, ಎಸೆತಗಳನ್ನು ದೇಹದ ಹತ್ತಿರದಿಂದ ಆಡಬೇಕಾಗುತ್ತದೆ’’ ಎಂದು ಅಖ್ತರ್ ಹೇಳಿದ್ದಾರೆ.
‘‘ಭಾರತ ಕೇವಲ ಒಂದಿಬ್ಬರು ಬ್ಯಾಟ್ಸ್ಮನ್ಗಳನ್ನು ಮಾತ್ರ ನೆಚ್ಚಿಕೊಂಡಿದೆ, ಅದರಲ್ಲೂ, ಮೊದಲ ಟೆಸ್ಟ್ ನಂತರ ನಾಯಕ ವಿರಾಟ್ ಕೊಹ್ಲಿ ವಾಪಸ್ಸಾಗಲಿದ್ದಾರೆ. ಟೀಮಿನ ಮಿಡ್ಲ್ ಆರ್ಡರ್ ಶಿಥಿಲವಾಗಿದೆ. ಇನ್ನಿಂಗ್ಸ್ ಆರಂಭದಲ್ಲಿ ಒಂದೆರಡು ವಿಕೆಟ್ಗಳನ್ನು ಬೇಗ ಕಳೆದುಕೊಂಡರೆ, ಮಧ್ಯಮ ಕ್ರಮಾಂಕದ ಆಟಗಾರರು ಒತ್ತಡಕ್ಕೆ ಸಿಲುಕುವುದು ನಿಶ್ಚಿತ,’’ ಅಂತ ಆಖ್ತರ್ ಹೇಳಿದ್ದಾರೆ.