ರಾಜಧಾನಿಯಲ್ಲಿ ಮಾಸ್ಕ್ ಧಾರಣೆ ಮತ್ತೆ ಕಟ್ಟುನಿಟ್ಟು; ತಪ್ಪಿದರೆ ದಂಡ ನಾಲ್ಕು ಪಟ್ಟು, ಯಾಕೆ ಗೊತ್ತಾ!?
ದೆಹಲಿ: ಈ ಹಿಂದಿನ ದಿನಗಳಿಗೆ ಹೋಲಿಸಿದ್ರೆ ಈಗ ದೇಶದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಹೊಸ ಕೊರೊನಾ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕೇಸ್ಗಳನ್ನು ತಡೆಗಟ್ಟಲು ಈಗ ದೆಹಲಿ ಸರ್ಕಾರ ಕಟ್ಟುನಿ್ಟಿನ ಪ್ಲಾನ್ ಮಾಡಿದೆ. ಮಾಸ್ಕ್ ಧರಿಸದವರಿಗೆ 500 ರೂ.ನಿಂದ 2 ಸಾವಿರ ರೂ.ಗೆ ಹೆಚ್ಚಳ.. ದೇಶದಲ್ಲಿ ಕೊರೊನಾ ಕೇಸ್‌ಗಳು ಕಮ್ಮಿಯಾಗುತ್ತಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿದೆ. ಈಗ ನಿತ್ಯ […]
ದೆಹಲಿ: ಈ ಹಿಂದಿನ ದಿನಗಳಿಗೆ ಹೋಲಿಸಿದ್ರೆ ಈಗ ದೇಶದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಹೊಸ ಕೊರೊನಾ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕೇಸ್ಗಳನ್ನು ತಡೆಗಟ್ಟಲು ಈಗ ದೆಹಲಿ ಸರ್ಕಾರ ಕಟ್ಟುನಿ್ಟಿನ ಪ್ಲಾನ್ ಮಾಡಿದೆ.
ಮಾಸ್ಕ್ ಧರಿಸದವರಿಗೆ 500 ರೂ.ನಿಂದ 2 ಸಾವಿರ ರೂ.ಗೆ ಹೆಚ್ಚಳ.. ದೇಶದಲ್ಲಿ ಕೊರೊನಾ ಕೇಸ್‌ಗಳು ಕಮ್ಮಿಯಾಗುತ್ತಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿದೆ. ಈಗ ನಿತ್ಯ ಆರೇಳು ಸಾವಿರ ಹೊಸ ಕೇಸ್‌ಗಳು ಪತ್ತೆಯಾಗುತ್ತಿವೆ. ಅಲ್ಲದೆ ನಿನ್ನೆ ಒಂದೇ ದಿನ ದೆಹಲಿಯಲ್ಲಿ 2,000 ಕ್ಕೂ ಅಧಿಕ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವರು ಮತ್ತು ಸಂಸದರು ಇದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಠಿಣ ತೀರ್ಮಾನಕ್ಕೆ ಬಂದಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಮಾಸ್ಕ್ ಧರಿಸಿದವರಿಗೆ ವಿಧಿಸುವ ದಂಡವನ್ನು 500 ರೂ.ನಿಂದ 2 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಅಂದರೆ ಹಿಂದಿನ ದರಕ್ಕಿಂತ ನಾಲ್ಕು ಪಟ್ಟು ದಂಡವನ್ನು ಹೆಚ್ಚಳ ಮಾಡಿದ್ದಾರೆ.
ನವೆಂಬರ್ 1 ರಿಂದ 1 ಲಕ್ಷ ಕೊರೊನಾ ಕೇಸ್ ಪತ್ತೆಯಾಗಿವೆ.. ಇನ್ನು ಅಂದಾಜಿನ ಪ್ರಕಾರ, ಚಳಿಗಾಲದಲ್ಲಿ ದೆಹಲಿಯಲ್ಲಿ ಹೊಸ ಕೊರೊನಾ ಕೇಸ್‌ಗಳು ದಿನವೊಂದಕ್ಕೆ 15 ಸಾವಿರಕ್ಕೆ ಏರಿಕೆಯಾಗುವ ಭೀತಿ ಕೂಡ ಇದೆ. ದೆಹಲಿಯಲ್ಲಿ ಈಗ ನಿತ್ಯ 20 ಸಾವಿರ ಕೊರೊನಾ ಟೆಸ್ಟ್ ಮಾಡಲಾಗುತ್ತಿದ್ದು, ಈ ಸಂಖ್ಯೆಯನ್ನು 60 ಸಾವಿರಕ್ಕೆ ಏರಿಸಲು ಐಸಿಎಂಆರ್ ನಿರ್ಧರಿಸಲಾಗಿದೆ. ದೆಹಲಿಯಲ್ಲಿ ನವೆಂಬರ್ 1 ರಿಂದ 1 ಲಕ್ಷ ಹೊಸ ಕೊರೊನಾ ಕೇಸ್ ಪತ್ತೆಯಾಗಿವೆ. ದೇಶದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವ್ ರೇಟ್ ಶೇ.4 ರಷ್ಟಿದ್ರೆ, ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ರೇಟ್ ಶೇಕಡಾ 14 ರಷ್ಟಿದೆ.
Published On - 3:24 pm, Thu, 19 November 20