ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ

ತಿರುವನಂತಪುರಂ: ನನ್ನವರಿಗಾಗಿ ನಾನು ಏನಾದರೂ ಮಾಡಲೇಬೇಕು. ಇನ್ನೆಷ್ಟು ನಾವು ಹೀಗಿರಲು ಸಾಧ್ಯ? ಎಂದು ಸಿ.ಸುದೀಶ್​ರ ಈ ಪ್ರಶ್ನೆ ಕೇಳಿದಾಗ ಅದರಲ್ಲಿ ತಾವು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ತಮ್ಮ ಗೆಲುವು ಏಕೆ ಅನಿವಾರ್ಯ ಎಂಬ ವಿವರಣೆಯೂ ಇಣುಕುತ್ತಿತ್ತು. ಅಂದ ಹಾಗೆ, ಸುದೀಶ್​ ಮಾತನಾಡುತ್ತಿರುವುದು ತಮ್ಮ ಚೋಳನಾಯಕನ್ ಸಮುದಾಯದ ಬಗ್ಗೆ. ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿ ವಾಸವಿರುವ ಚೋಳನಾಯಕನ್ ಸಮುದಾಯ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಪೈಕಿ ಒಂದು. ಈ ಸಮುದಾಯದ ಯಾರೊಬ್ಬರೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ, ಇದೇ ಮೊದಲ […]

ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ
Follow us
KUSHAL V
|

Updated on: Nov 19, 2020 | 6:57 PM

ತಿರುವನಂತಪುರಂ: ನನ್ನವರಿಗಾಗಿ ನಾನು ಏನಾದರೂ ಮಾಡಲೇಬೇಕು. ಇನ್ನೆಷ್ಟು ನಾವು ಹೀಗಿರಲು ಸಾಧ್ಯ? ಎಂದು ಸಿ.ಸುದೀಶ್​ರ ಈ ಪ್ರಶ್ನೆ ಕೇಳಿದಾಗ ಅದರಲ್ಲಿ ತಾವು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ತಮ್ಮ ಗೆಲುವು ಏಕೆ ಅನಿವಾರ್ಯ ಎಂಬ ವಿವರಣೆಯೂ ಇಣುಕುತ್ತಿತ್ತು. ಅಂದ ಹಾಗೆ, ಸುದೀಶ್​ ಮಾತನಾಡುತ್ತಿರುವುದು ತಮ್ಮ ಚೋಳನಾಯಕನ್ ಸಮುದಾಯದ ಬಗ್ಗೆ.

ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿ ವಾಸವಿರುವ ಚೋಳನಾಯಕನ್ ಸಮುದಾಯ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಪೈಕಿ ಒಂದು. ಈ ಸಮುದಾಯದ ಯಾರೊಬ್ಬರೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಪಡೆದಿರುವ ಸಮುದಾಯದ ಸುದೀಶ್ ಕೇರಳ ಇತಿಹಾಸಕ್ಕೆ ಹೊಸ ಪುಟವೊಂದನ್ನು ಸೇರಿಸುತ್ತಿದ್ದಾರೆ. ಆನೆಗಳು ಸ್ವಚ್ಛಂದವಾಗಿ ವಿಹರಿಸುವ ಅಲಕ್ಕಳಲ್ ಕಾಲೋನಿಯ ನಿವಾಸಿ ಸುದೀಶ್ ಮುಂದಿನ ದಿನಗಳಲ್ಲಿ ನೀಲಂಬೂರು ಬ್ಲಾಕ್ ಪಂಚಾಯಿತಿಯಲ್ಲಿ ವಝಿಕ್ಕಡವು ವಿಭಾಗದಿಂದ ಸ್ಪರ್ಧಿಸಲಿದ್ದಾರೆ. ಆಡಳಿತಾರೂಢ LDF ಮೈತ್ರಿಕೂಟದಿಂದ ಸುದೀಶ್​ ಟಿಕೆಟ್ ಪಡೆದಿದ್ದಾರೆ.

ಇಂದಿಗೂ ಕಿರು ಅರಣ್ಯ ಉತ್ಪನ್ನಗಳು, ಜೇನು ಮತ್ತು ಧೂಪ (ಅಗರು) ಸಂಗ್ರಹವನ್ನೇ ಜೀವನೋಪಾಯವಾಗಿ ನೆಚ್ಚಿಕೊಂಡಿರುವ ಈ ಸಮುದಾಯ ಹಲವು ಸಂಕಷ್ಟಗಳ ನಡುವೆ ಬದುಕು ಸಾಗಿಸುತ್ತಿದೆ. PUC ತೇರ್ಗಡೆಯಾಗಿರುವ ಸುದೀಶ್​ಗೆ ತನ್ನವರ ಕಣ್ಣೀರು ಒರೆಸಬೇಕೆನ್ನುವ ಹಂಬಲವಿದೆ.

‘ಗೆದ್ದರೆ ಇಷ್ಟೆಲ್ಲಾ ಮಾಡುವ ಆಸೆಯಿದೆ’ ಹಲವು ತಲೆಮಾರುಗಳು ಕಳೆದರೂ ನಮ್ಮ ಸಮುದಾಯ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದೆ. ನಮ್ಮವರ ಬದುಕಿನಲ್ಲಿ ಏನಾದರೂ ಬದಲಾವಣೆ ತರಬೇಕೆನ್ನುವ ಆಶಯದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮೀಸಲು ಕ್ಷೇತ್ರವಾಗಿದ್ದ ಕಾರಣ ಅವಕಾಶ ದೊರೆಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು, ನಮ್ಮವರ ಮನೆಗಳಿರುವ ಸ್ಥಳಗಳಿಗೆ ಉತ್ತಮ ರಸ್ತೆ ಮತ್ತು ಸಾರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂಬ ಆಶಯವಿದೆ ಎಂದು ತಾವು ಜಯಗಳಿಸಿದರೆ ಏನೆಲ್ಲಾ ಮಾಡುತ್ತೇನೆ ಎಂದು ಸುದೀಶ್ ತಮ್ಮ ಕನಸುಗಳನ್ನು ಉತ್ಸಾಹದಿಂದ ಹಂಚಿಕೊಂಡರು.

ಜೊತೆಗೆ, ಚುನಾವಣಾ ಪ್ರಚಾರಕ್ಕಾಗಿ ಮತ್ತೊಂದು ಜನವಸತಿ ಪ್ರದೇಶ ತಲುಪಲು ಕನಿಷ್ಠ 8 ಕಿ.ಮೀ. ನಡೆಯಬೇಕಾಗುತ್ತದೆ. ಕಾಡಿನಲ್ಲಿ ಸಂಚರಿಸುವಾಗ ಕಾಡಾನೆಗಳದೇ ದೊಡ್ಡ ಆತಂಕ. ಸಾರ್ವಜನಿಕ ರಸ್ತೆಯೇನೋ ಇದೆ. ಆದರೆ ಅದಕ್ಕೆ ಡಾಂಬರು ಹಾಕಿಲ್ಲ. ಮಳೆಗಾಲದಲ್ಲಿ ವಾಹನ ಸಂಚಾರ ತುಂಬಾ ಕಷ್ಟ. ಹತ್ತಿರದ ಪಟ್ಟಣದಿಂದ ಹಾಡಿ ತಲುಪಲು ಎರಡು ನದಿ ದಾಟಬೇಕಿದೆ ಎಂದು ಸುದೀಶ್​ ತಮ್ಮ ಈಗಿನ ಪರಿಸ್ಥಿತಿ ವಿವರಿಸಿದರು.

ಚೋಳನಾಯ್ಕರ್ ಬುಡಕಟ್ಟು ಸಮುದಾಯ ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿದ್ದ ಚೋಳನಾಯಕನ್ ಸಮುದಾಯದ ಜನರು, 1970ರವರೆಗೂ ದಟ್ಟ ಕಾಡಿನ ‘ಅಲಕ್ಕಳ್’ (ಗುಹೆಗಳು)ಗಳಲ್ಲಿ ವಾಸವಿದ್ದರು. ಸಣ್ಣ ಪ್ರಾಣಿಗಳ ಬೇಟೆ, ಜೇನು ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹವೇ ಅವರ ಮುಖ್ಯ ಜೀವನೋಪಾಯವಾಗಿತ್ತು.

ನಂತರದ ದಿನಗಳಲ್ಲಿ ಕಾಡಂಚಿನ ನೆಲೆಗಳಾದ ಅಲಕ್ಕಳ್ ಮತ್ತು ಪಂಚಕ್ಕೊಲ್ಲಿಗಳಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಸರ್ಕಾರಿ ಸ್ವಾಮ್ಯದ ರಬ್ಬರ್ ನೆಡುತೋಪುಗಳಲ್ಲಿ ರಬ್ಬರ್ ಸಂಗ್ರಹಕಾರರಾಗಿ (ಟೇಪರ್ಸ್) ಬಹುತೇಕರು ಕೆಲಸ ಆರಂಭಿಸಿದರು. ಅಂಕಿಅಂಶಗಳ ಪ್ರಕಾರ ನೀಲಂಬೂರ್ ಪ್ರದೇಶದ ಬುಡಕಟ್ಟು ಹಾಡಿಗಳ 100 ಚೋಳನಾಯ್ಕರ್ ಕುಟುಂಬಗಳಲ್ಲಿ 400 ಮಂದಿ ಇದ್ದಾರೆ. ಈ ಪೈಕಿ ಸುಮಾರು 200 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ